ಬ್ರಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ವಿಶ್ವ ಮೆದಳು ದಿನಾಚರಣೆ
ಬೀದರ: ಕರ್ನಾಟಕ ಮೆದುಳಿನ ಆರೋಗ್ಯ ಉಪಕ್ರಮ ವತಿಯಿಂದ ವಿಶ್ವ ಮೆದುಳು ಕಾರ್ಯಕ್ರಮವನ್ನು ಬ್ರಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಯಿತು. ಬ್ರಿಮ್ಸ್ ಆಸ್ಪತ್ರೆಯ ಸಿಇಒಗಳಾದ ಡಾ. ಮಂಜುನಾಥ್ ಅವರು ಉದ್ಘಾಟಿಸಿ ಮಾತನಾಡಿದ ಅವರು ಆರೋಗ್ಯಕರ ಮೆದುಳನ್ನು ಕಾಪಾಡಿಕೊಳ್ಳುವ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ನಾವು ವಿಶ್ವ ಮೆದುಳಿನ ದಿನವನ್ನು ಆಚರಿಸುತ್ತಿದ್ದೇವೆ. ನಮ್ಮ ಮೆದುಳು ನಮ್ಮ ದೇಹದಲ್ಲಿನ ಪ್ರಮುಖ ಅಂಗಗಳಲ್ಲಿ ಒಂದಾಗಿದೆ, ನಮ್ಮ ಆಲೋಚನೆಗಳು, ಚಲನೆಗಳು ಮತ್ತು ಕ್ರಿಯೆಗಳನ್ನು ನಿಯಂತ್ರಿಸುವ ಜವಾಬ್ದಾರಿಯನ್ನು ಹೊಂದಿದೆ. ಆದಾಗ್ಯೂ, ಹಲವಾರು ಪರಿಸ್ಥಿತಿಗಳು ಮೆದುಳಿನ ಕಾರ್ಯಗಳನ್ನು ಶಾಶ್ವತವಾಗಿ ಹಾನಿಗೊಳಿಸುತ್ತವೆ ಮತ್ತು ನಮ್ಮ ಜೀವನದ ಗುಣಮಟ್ಟದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತವೆ ಎಂದು ಹೇಳಿದರು.
ಡಾ. ಮನೀಷ್ ಕುಲಕರ್ಣಿ ಅವರು ಮೆದುಳಿನ ಆರೋಗ್ಯ ಮತ್ತು ತಡೆಗಟ್ಟುವಿಕೆ ಬಗ್ಗೆ ಮಾತನಾಡಿದ್ದರು.
ಡಾ. ಅನಿಲಕುಮಾರ ಏಕ್ಲುರೆ ಅವರು ಅಪಸ್ಮಾರದ ಬಗ್ಗೆ ಜನರಿಗಿರುವ ತಪ್ಪುಧಾರಣೆಗಳನ್ನು ತಿಳಿಹೇಳಿದರು.
ಮುಖ್ಯ ಅತಿಥಿಗಳಾಗಿ ಡಿಸ್ಟ್ರಿಕ್ಟ್ ಸರ್ಜನ್ ಡಾ. ಮಹೇಶ್ ಬಿರಾದಾರ, ಡಿಎಲ್ಒ ಡಾ. ಕಿರಣ್ ಪಾಟೀಲ್, ಆರ್ಎಂ ಒ ಡಾ. ದೀಪಾ ಖಂಡ್ರೆ, ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥೆ ಡಾ. ಶ್ವೇತಾ, ಬಾಲವೈದ್ಯಕೀಯ ವಿಭಾಗದ ಮುಖ್ಯಸ್ಥೆ ಡಾ. ಶಾಂತಲಾ ಕೌಜಾಲಗಿ ಮತ್ತು ನರ್ಸಿಂಗ್ ಸೂಪರಿಂಟೆAಡೆAಟ್ ಇಮನವೆಲ್ ಸೇರಿದಂತೆ ವಿದ್ಯಾರ್ಥಿಗಳು, ಹಾಗೂ ಹೆಲ್ಟ್ಕೇರ್ ವೃತ್ತಿಪರರು ಪಾಲ್ಗೊಂಡಿದ್ದರು.