ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗೆ ಭೇಟಿ ನೀಡಿ, ಅಲ್ಲಿನ ರೋಗಿಗಳ ಯೋಗಕ್ಷೇಮ ವಿಚಾರಿಸಿದೆ.
ಕಿದ್ವಾಯಿ ಆಸ್ಪತ್ರೆಯ ‘ಫಾಸ್ಟ್ ಟ್ರಾಕ್’ ವಾರ್ಡ್ ನಲ್ಲಿರುವ ರೋಗಿಗಳ ಜೊತೆ ಸಮಾಲೋಚಿಸಿ ಆಸ್ಪತ್ರೆ, ವಸತಿ ಸೌಲಭ್ಯಗಳ ಕುರಿತು ಮಾಹಿತಿ ಹಾಗು ಅಭಿಪ್ರಾಯ ಸಂಗ್ರಹಿಸಿದೆ.
ಕಿದ್ವಾಯಿಯ ಕಾನ್ಸರ್ ಚಿಕಿತ್ಸಾ ವಿಧಾನಗಳು, ರೋಗಿಗಳಿಗೆ ನೀಡಲಾಗುತ್ತಿರುವ ಸೌಲಭ್ಯಗಳ ಕುರಿತು ವೈದ್ಯರೊಂದಿಗೆ ಸಮಾಲೋಚನೆ ನಡೆಸಿದೆ.
ಈ ವೇಳೆ ಕಿದ್ವಾಯಿ ಆಸ್ಪತ್ರೆಯ ಆಡಳಿತಾಧಿಕಾರಿ ಮಂಜುಶ್ರೀ, ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲ್ಕುಮಾರ್, ನಿರ್ದೇಶಕಿ ಡಾ.ಸುಜಾತ ರಾಥೋಡ್ ಮತ್ತಿತರರು ಉಪಸ್ಥಿತರಿದ್ದರು.