ಬೀದರ್

ಬೀಳ್ಕೊಡುಗೆ, ರಾಷ್ಟ್ರ ಪ್ರಶಸ್ತಿ ಪುರಸ್ಕøತರಿಗೆ ಅಭಿನಂದನೆ ಎಂ. ಸದಾಶಿವ ಸೇವಾ ನಿಷ್ಠೆ ಮಾದರಿ

ಬೀದರ್: ನಿವೃತ್ತ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಲ್ಲಿಕಾರ್ಜುನ ಸದಾಶಿವ ಅವರ ಸೇವಾ ನಿಷ್ಠೆ ಸರ್ಕಾರಿ ನೌಕರರಿಗೆ ಮಾದರಿಯಾಗಿದೆ ಎಂದು ಚಿಂತಕ ವೈಜಿನಾಥಪ್ಪ ಹಿರೊಡೆ ಹೇಳಿದರು.
ಸೇವಾ ನಿವೃತ್ತಿ ಪ್ರಯುಕ್ತ ಮಲ್ಲಿಕಾರ್ಜುನ ಸದಾಶಿವ ಅಭಿಮಾನಿ ಬಳಗದ ವತಿಯಿಂದ ಇಲ್ಲಿಯ ಕೈಲಾಶ ಶೋ ರೂಂ ಎದುರಿನ ರಾಧಾಕೃಷ್ಣ ಫಂಕ್ಷನ್ ಹಾಲ್‍ನಲ್ಲಿ ಏರ್ಪಡಿಸಿದ್ದ ಮಲ್ಲಿಕಾರ್ಜುನ ಸದಾಶಿವ ಅವರಿಗೆ ಸನ್ಮಾನ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕøತರ ಅಭಿನಂದನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಲ್ಲಿಕಾರ್ಜುನ ಸದಾಶಿವ ಅವರ ಸಮಾಜ ಸೇವೆ ತುಡಿತ, ಪ್ರಾಮಾಣಿಕತೆ, ಶಿಸ್ತು ಹಾಗೂ ಸಮಯ ಪ್ರಜ್ಞೆ ಅನುಕರಣೀಯ. ಸರಳ, ಸಜ್ಜನಿಕೆಗೆ ಹೆಸರಾದ ಅವರು ಅನೇಕ ಯುವ ಪ್ರತಿಭೆಗಳ ಬೆಳವಣಿಗೆಗೂ ಕಾರಣರಾಗಿದ್ದಾರೆ ಎಂದು ತಿಳಿಸಿದರು.
38 ವರ್ಷಗಳ ಸೇವೆ ತೃಪ್ತಿ ತಂದಿದೆ. ಸೇವಾ ಅವಧಿಯಲ್ಲಿ ಅಧಿಕಾರಿಗಳು ಹಾಗೂ ಸಹಪಾಠಿಗಳು ನೀಡಿದ ಸಹಕಾರವನ್ನು ಮರೆಯಲಾರೆ ಎಂದು ಮಲ್ಲಿಕಾರ್ಜುನ ಸದಾಶಿವ ಹೇಳಿದರು.
ಕೇಂದ್ರ ಸರ್ಕಾರದ ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ಪುರಸ್ಕøತ ಲಕ್ಷ್ಮಿ ಮೇತ್ರೆ, ನ್ಯಾಷನಲ್ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ನ್ಯಾಷನಲ್ ಫ್ಲಾರೆನ್ಸ್ ನೈಟಿಂಗೇಲ್ ನರ್ಸೆಸ್ ಪ್ರಶಸ್ತಿ ಪುರಸ್ಕøತರಾದ ಅರ್ಚನಾ ಗೌಳಿ, ಶಿಲ್ಪಾರಾಣಿ ಪಂಚಶೀಲ, ಅಮೀರಾ, ವೈದ್ಯಕೀಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಡಾ. ಅಡವೆಪ್ಪ ಅಗಸಾರೆ, ಡಾ. ಪ್ರೇಮಲತಾ ಪಾಟೀಲ, ಡಾ. ಗುರುನಾಥ ರೆಡ್ಡಿ ಪಾಟೀಲ, ಡಾ. ವಿಜಯಶ್ರೀ ಬಶೆಟ್ಟಿ, ಡಾ. ಸೋಮನಾಥ ಪಾಟೀಲ, ಹಾಲಹಳ್ಳಿಯ ರವಿ ಗಂಗಶೆಟ್ಟಿ, ಗೌರಮ್ಮ ಹಿರೇಮಠ, ಮಲ್ಲಮ್ಮ ಸದಾಶಿವ, ಸುರೇಶ ಪೊಲೀಸ್ ಪಾಟೀಲ ಅವರನ್ನು ಅಭಿನಂದಿಸಲಾಯಿತು.
ಡಾ. ಅನಿಲಕುಮಾರ ಚಿಂತಾಮಣಿ ಉದ್ಘಾಟಿಸಿದರು. ಪ್ರಮುಖರಾದ ಸುನೀಲಕುಮಾರ ಕಸ್ತೂರೆ, ಮುರಲಿನಾಥ ಮೇತ್ರೆ, ಮಡಿವಾಳಯ್ಯ ಮಠಪತಿ, ರಾಜಶೇಖರ ತಂಬಾಕೆ, ಸೂರ್ಯಕಾಂತ ಕೋಟೆ, ಮಲ್ಲಿಕಾರ್ಜುನ ಬಿ. ಸದಾಶಿವ, ಎಸ್.ಎಸ್. ಹಳ್ಳಿಖೇಡೆ, ಎಸ್.ಬಿ. ಕೇಸ್ಕರ್, ಸೋಮನಾಥ ಗಂಗಶೆಟ್ಟಿ, ಸತ್ತಾರ್ ಪಟೇಲ್, ಎಂ.ಎ. ಕಲೀಮ್, ತೀರ್ಥಪ್ಪ ಭೀಮಶೆಟ್ಟಿ, ರಾಜಕುಮಾರ ಬಿರಾದಾರ, ಶ್ರೀಪತಿ ಮೇತ್ರೆ ಇದ್ದರು.ಟಿ.ಎಂ. ಮಚ್ಚೆ ನಿರೂಪಿಸಿದರು. ಸಂತೋಷಕುಮಾರ ಜೋಳದಾಪಕೆ ಸ್ವಾಗತಿಸಿದರು. ಜಾವೇದ್ ಕಲ್ಯಾಣಕರ್ ವಂದಿಸಿದರು.

Ghantepatrike kannada daily news Paper

Leave a Reply

error: Content is protected !!