ಬೀದರ ವಿಶ್ವವಿದ್ಯಾಲಯದೊಂದಿಗೆ ಸಿಪೆಟ್ ಒಪ್ಪಂದ ಐತಿಹಾಸಿಕ : ಪ್ರೊ.ಬಿ.ಎಸ್.ಬಿರಾದಾರ
ಇಂದು ನೂತನ ಬೀದರ ವಿಶ್ವವಿದ್ಯಾಲಯ ಹಾಗೂ ಕೇಂದ್ರೀಯ ಪೆಟ್ರೋಕೆಮಿಕಲ್ಸ್ ಇಂಜಿನಿಯರಿAಗ್ ಅಂಡ್ ಟೆಕ್ನಾಲಜಿ ಸಂಸ್ಥೆ(ಸಿಪೆಟ್)ಗಳು ಪರಸ್ಪರ ಬೀದರ ವಿಶ್ವವಿದ್ಯಾಲಯದಲ್ಲಿ ವೃತ್ತಿಪರ ಕೌಶಲ್ಯ ತರಬೇತಿ ಕಾರ್ಯಕ್ರಮದ ತರಬೇತಿ ಕೇಂದ್ರ ಸ್ಥಾಪಿಸಲು ಒಪ್ಪಂದ ಮಾಡಿಕೊಳ್ಳಲಾಯಿತು. ಇದರಿಂದ ಈ ಭಾಗದ ಯುವಕ, ಯುವತಿಯರಿಗೆ ಅನುಕೂಲವಾಗಲಿದೆ ಎಂದು ಬೀದರ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಬಿ.ಎಸ್.ಬಿರಾದಾರರವರು ತಿಳಿಸಿದರು. ಅವರು ಮಾತನಾಡುತ್ತಾ ರಾಜ್ಯದ ರಾಜಧಾನಿಯಿಂದ ಸುಮಾರು 700ಕಿ.ಮೀ ದೂರದಲ್ಲಿರುವ ಬೀದರ ವಿಶ್ವವಿದ್ಯಾಲಯದಲ್ಲಿ ಸಿಪೆಟ್ ವತಿಯಿಂದ ಹಮ್ಮಿಕೊಳ್ಳುವ ತರಬೇತಿ ಕಾರ್ಯಕ್ರಮದಿಂದ ಈ ಪ್ರದೇಶ ಅಭಿವೃದ್ಧಿಗೊಳ್ಳಲು ಸಹಾಯಕವಾಗುತ್ತದೆ. ಅದರಲ್ಲೂ ಯುವಕ, ಯುವತಿಯರು, ನಿರುದ್ಯೋಗಿಗಳು ಸ್ವಾವಲಂಬಿಯಾಗಲು ವರದಾನವಾಗಿದೆ. ಈ ಸಂಸ್ಥೆಯಿAದ ಪ್ಲಾಸ್ಟಿಕ್ ಪ್ರೊಸೆಸಿಂಗ್, ಇಂಜೆಕ್ಸನ್ ಮೌಲ್ಡಿಂಗ್, ಪ್ರೋಗ್ರಾಮ ಮೌಲ್ಡ್ ಡಿಸೈನ್ ಮುಂತಾದ ಉಪಯುಕ್ತ ತರಬೇತಿಗಳು ಉಚಿತ ತರಬೇತಿ, ಊಟ, ವಸತಿ ಹಾಗೂ ಉದ್ಯೋಗಾವಕಾಶಕ್ಕೆ ನೆರವು ಸಿಗಲಿದೆ ಎಂದು ಪ್ರೊ.ಬಿ.ಎಸ್.ಬಿರಾದಾರರವರು ಹೆಮ್ಮೆಯಿಂದ ನುಡಿದರು.
ಈ ಐತಿಹಾಸಿಕ ಒಪ್ಪಂದದ ಸಂದರ್ಭದಲ್ಲಿ ಬೀದರ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಬಿ.ಎಸ್.ಬಿರಾದಾರರವರು ಹಾಗೂ ಸಿಪೆಟ್ ಸಂಸ್ಥೆಯ ನಿರ್ದೇಶಕರು ಹಾಗೂ ಮುಖ್ಯಸ್ಥರಾದ ಶ್ರಿ ಆರ್.ಟಿ.ನಾಗರಹಳ್ಳಿಯವರು ಒಪ್ಪಂದದ ಕಡತವನ್ನು ವಿನಿಮಯ ಮಾಡಿಕೊಂಡರು. ಈ ಸಂದರ್ಭದಲ್ಲಿ ಬೀದರ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ.ಪರಮೇಶ್ವರ ನಾಯಕರವರು, ಡಾ. ರವೀಂದ್ರನಾಥ ವಿ. ಗಬಾಡಿಯವರು ಹಾಗೂ ಸಿಪೆಟ್ ವತಿಯಿಂದ ಅಧಿಕಾರಿಗಳಾದ ಶ್ರೀ ಕೆ.ಮುನಿಬಾಬು, ಶ್ರೀ ಆರ್. ಮಣಿಕಂದ ಹಾಗೂ ಶ್ರೀ ಸದಾಶಿವಪ್ಪನವರು ಉಪಸ್ಥಿತರಿದ್ದರು.