ಬೀದರ ಲೋಕಸಭಾ ಕ್ಷೇತ್ರದ ರಾಜ್ಯದಲ್ಲಿಯೇ ಪ್ರಥಮ ಸ್ಥಾನ : ಕೇಂದ್ರ ಸಚಿವ ಭಗವಂತ ಖೂಬಾ
ಪ್ರಧಾನಮಂತ್ರಿ ಫಸಲ್ ಬಿಮಾ ಯೊಜನೆಯಡಿ ನೊಂದಣಿಯಡಿ ಈ ವರ್ಷವು ನಮ್ಮ ಬೀದರ ಲೋಕಸಭಾ ಕ್ಷೇತ್ರದ ರಾಜ್ಯದಲ್ಲಿಯೇ ಪ್ರಥಮ ಸ್ಥಾನಗಳಿಸಿದೆ, ಬೀದರ ಲೋಕಸಭಾ ಕ್ಷೇತ್ರದ ಸಮಸ್ತ ರೈತರಿಗೆ ಅಭಿನಂದನೆಗಳನ್ನು ಕೇಂದ್ರ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ ಹಾಗೂ ಇದು ನಮ್ಮ ಲೋಕಸಭಾ ಕ್ಷೇತ್ರದ ರೈತರು ನಮ್ಮ ಪ್ರಧಾನಿಗಳ ಮೆಲೆ ನನ್ನ ಮೇಲೆ ಇಟ್ಟಿರುವ ವಿಶ್ವಾಸ ಎತ್ತಿತೊರಿಸುತ್ತದೆ ಎಂದಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಫಸಲ್ ಬಿಮಾ ಯೋಜನೆಯಡಿ ಬೀದರ ಜಿಲ್ಲೆಯಲ್ಲಿ ಇವತ್ತಿನವರೆಗೆ 2,83,922 ಹಾಗೂ ಆಳಂದ ತಾಲೂಕಿನಲ್ಲಿ 53,745, ಚಿಂಚೋಳಿಯಲ್ಲಿ 21,716 ರೈತರು ನೊಂದಣಿ ಮಾಡಿಸಿಕೊಂಡಿದ್ದಾರೆ, ಇದು ರಾಜ್ಯದಲ್ಲಿಯೇ ಅತಿ ಹೆಚ್ಚು ನೊಂದಣಿಯಾಗಿದೆ ಮತ್ತು ರೈತರ ಆಪ್ತರಕ್ಷಕನಾಗಿರುವ ಫಸಲ್ ಬಿಮಾ ಯೋಜನೆಯಡಿ ನಮ್ಮ ಜಿಲ್ಲೆಗೆ ಒಟ್ಟು 550 ಕೋಟಿ ರೂಪಾಯಿ ಪರಿಹಾರ ಬಂದಿರುತ್ತದೆ.
ಈ ವರ್ಷ ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಾಂಗ್ರೇಸ್ ನಾಯಕರುಗಳು ಈ ಯೋಜನೆಯ ಕುರಿತು ಸಾಕಷ್ಟು ಅಪ್ರಪಚಾರ ಮಾಡಿದ್ದರು, ಆದರೆ ಜಿಲ್ಲೆಯ ಬುದ್ದಿವಂತ ರೈತರು ಇದ್ಯಾವುದಕ್ಕೂ ಕಿವಿಗೂಡದೆ, ಫಸಲ್ ಬಿಮಾ ಯೋಜನೆಯಡಿ ನೊಂದಾಯಿಸಿಕೊಂಡು ತನ್ನ ಬೆಳೆಗಳ ರಕ್ಷಣೆ ಹಾಗೂ ತನ್ನ ಆದಾಯ ರಕ್ಷಣೆಗೆ ಮುಂದಾಗಿರುವುದು ಸಂತಸ ಹಾಗೂ ಹೆಮ್ಮೆಯ ವಿಷಯ ಎಂದಿದ್ದಾರೆ.
ಕಳೆದ ಸಾಲಿನಲ್ಲಿ ಹಾಳಾದ ಬೆಳೆಗಳಿಗೆ ಸುಮಾರು 1,36,000 ರೈತರಿಗೆ 51 ಕೋಟಿ ಪರಿಹಾರ ಬಂದಿರುತ್ತದೆ, ಜಿಲ್ಲೆಯ ಜನತೆ ಪ್ರತಿ ವರ್ಷ ಇದರ ಫಲಾನುಭವಿಗಳಾಗುತ್ತಿದ್ದಾರೆ, ಆದ್ದರಿಂದ ಸದರಿ ಯೋಜನೆಯ ಯಶಸ್ಸನ್ನು ತಡೆಗಟ್ಟಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ.
ರಾಜ್ಯದಲ್ಲಿ ಅತಿವೃಷ್ಠಿ, ಅನಾವೃಷ್ಟಿ ಅಥವಾ ಬೆರೆ ಕಾರಣಗಳಿಂದ ರೈತನ ಬೆಳೆ ಹಾಳಾದರೆ ಇಂದಿನ ಕಾಂಗ್ರೇಸ್ ಸರ್ಕಾರ ಸರಿಯಾದ ಸಮಯಕ್ಕೆ ದೂರು ಸ್ವಿಕರಿಸಿ ಸರ್ವೆಗಳು ಮಾಡಿಸುವ ಜವಬ್ದಾರಿ ರಾಜ್ಯ ಸರ್ಕಾರದ್ದಾಗಿದೆ, ಈ ವಿಷಯದಲ್ಲಿ ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಹೆಚ್ಚಿನ ನಿಗಾ ವಹಿಸಬೇಕೆಂದು ಸಚಿವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಈಗಾಗಲೆ ರಾಜ್ಯದ ಕೃಷಿ ಸಚಿವರು ಭ್ರಷ್ಟಾಚಾರದ ಆರೋಪ ಹೊತ್ತಿದ್ದಾರೆ ಹಾಗಾಗಿ ಉಸ್ತುವಾರಿ ಸಚಿವರು ಜಿಲ್ಲೆಯ ರೈತರಿಗೆ ಅನ್ಯಾಯವಾಗದಂತೆ ಎಚ್ಚರವಹಿಸಬೇಕು, ಮುಂಬರುವ ದಿನಗಳಲ್ಲಿ ರೈತರ ಬೆಳೆಗಳನ್ನು ಖರಿದಿಸುವ ನಿಟ್ಟಿನಲ್ಲಿ ಸಮಯಕ್ಕೆ ಸರಿಯಾಗಿ ಖರೀದಿ ಕೇಂದ್ರಗಳು ಪ್ರಾರಂಭಿಸಬೇಕೆಂದು ಕೇಂದ್ರ ಸಚಿವ ಭಗವಂತ ಖೂಬಾ ಸರ್ಕಾರ ಹಾಗೂ ಉಸ್ತುವಾರಿ ಸಚಿವರ ಗಮನಕ್ಕೆ ತರಬಯಸುತ್ತಿದ್ದಾರೆ.
ಬೀದರ ಲೋಕಸಭಾ ಕ್ಷೇತ್ರದಲ್ಲಿ ಇಷ್ಟು ಹೆಚ್ಚಿನ ನೋಂದಣಿಯಾಗಲು ಕಾರಣಿಕರ್ತರಾದ ರಾಷ್ಟ್ರೀಕೃತ ಬ್ಯಾಂಕ್, ಡಿ.ಸಿ.ಸಿ. ಬ್ಯಾಂಕ್‍ನ ಸಿಬ್ಬಂದಿಗಳು, ಗ್ರಾಮ ಒನ್, ಸಿ.ಎಸ್.ಸಿ ಕೇಂದ್ರದ ಬಂಧುಗಳು ಪ್ರಮುಖ ಪಾತ್ರ ವಹಿಸಿದ್ದಾರೆ ಇವರುಗಳಿಗೂ ಸಹ ನನ್ನ ಅನಂತ ಧನ್ಯವಾದಗಳನ್ನು ಸಲ್ಲಿಸುವುದಾಗಿ ಕೇಂದ್ರ ಸಚಿವರು ತಿಳಿಸಿದ್ದಾರೆ.
ಯಾರೆಲ್ಲಾ ಎಷ್ಟೆ ಅಪಪ್ರಚಾರ ಮಾಡಿದರೂ, ಸತ್ಯ, ಸತ್ಯವೆ ಆಗಿರುತ್ತದೆ, ಒಂದು ಸುಳ್ಳು ಹತ್ತು ಬಾರಿ ಹೇಳಿದರೆ ಅದು ಸತ್ಯವಾಗುವುದಿಲ್ಲ ಎನ್ನುವ ಹಾಗೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯೂ ಆಗಿದೆ, ಕ್ಷೇತ್ರದ ಬುದ್ದಿವಂತ ರೈತ ಬಾಂಧವರಿಗೆ ಮತ್ತೊಮ್ಮೆ ಅನಂತ ಧನ್ಯವಾದಗಳನ್ನು ಕೇಂದ್ರ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.