ಬೀದರ ಜಿಲ್ಲೆಯ ಸಾರ್ವಜನಿಕರಲ್ಲಿ SP ಬೀದರ ಮನವಿ
ಗ್ರಾಮವೊಂದರಲ್ಲಿ ಕಲುಷಿತ ನೀರು ಕುಡಿದು ಆಸ್ಪತ್ರೆಗೆ ದಾಖಲಾದ ಮಾಹಿತಿಯಂತೆ ಮಾನ್ಯ ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯ ಅಧಿಕಾರಿ ರವರೊದಿಗೆ ಬೀದರ ಜಿಲ್ಲಾ ಸರಕಾರಿ ಆಸ್ಪತ್ರೆ, ಬ್ರೀಮ್ಸ್, ವಾಸು ಆಸ್ಪತ್ರೆಗೆ ಭೆಟ್ಟಿ ನೀಡಿದ್ದು, ಕೇಲವು ದಿವಸಗಳಿಂದ ಸತತವಾಗಿ ಮಳೆಯಿಂದ ಜಿಲ್ಲೆಯಲ್ಲಿ ಪ್ರವಾಹವು ಜಾಸ್ತಿಯಾಗಿದ್ದು, ಪ್ರವಾಹ ಇಳಿದಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳು ಹೆಚ್ಚಾಗಿದೆ. ಅದರಂತೆ ಸೊಳ್ಳೆಗಳ ಉತ್ಪತ್ತಿಯು ಹಚ್ಚಾಗುವುದಲ್ಲದೇ ಅವುಗಳಿಂದ ಮಲೇರಿಯಾ, ಡೆಂಗು, ಚಿಕುಂಗುನ್ಯ, ಮೇದಳು ಜ್ವರ ಹಾಗು ಆನೆಕಾಲು ರೋಗಗಳು ಬರುವ ಸಂಭವ ಅಧಿಕವಾಗಿರುತ್ತದೆ. ಕಲುಷತ ನೀರು ಕುಡಿಯುವುದರಿಂದ ವಾಂತಿ, ಭೇದಿ, ಕಣ್ಣಿಗೆ ಸಂಬಂಧಿಸಿದ (ಮದ್ರಾಸ್ ಐ) ಇತರೆ ಸಾಂಕ್ರಾಮಿಕ ರೋಗಗಳು ಉಂಟಾಗುವ ಸಂಭವ ಇರುವದರಿಂದ ತಾವುಗಳು ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಲು ಜಿಲ್ಲಾ ಆರೋಗ್ಯ ಇಲಾಖೆ ಮನವಿ ಮಾಡಿದೆ.
1) ಮದ್ರಾಸ- ಐ ದಿಂದ ಕಾಪಾಡಿ ಕೊಳ್ಳಲು ಜನ ದಟ್ಟಣೆ ಇರುವ ಕಡೆಗೆ ಹೋಗದಿರುವದು.
2) ನೀರನ್ನು ಕುದಿಸಿ, ಆರಿಸಿ ಕುಡಿಯುವದು.
3) ಮನೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ನಿಲ್ಲದಂತೆ, ಸೊಳ್ಳೆಗಳು ಉತ್ಪತ್ತಿ ಯಾಗದಂತೆ ನೋಡಿಕೊಳ್ಳುವದು.
4) ಅನಾರೋಗ್ಯದ ಲಕ್ಷಣಗಳು ಕಂಡು ಬಂದಲ್ಲಿ ವೈದ್ಯರಿಗೆ ಸಂಪರ್ಕಿಸುವುದು. ಅದರಂತೆ ಆರೋಗ್ಯ ಇಲಾಖಾ ವತಿಯಿಂದ ಹೊರಡಿಸುವ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವದು.