ಬೀದರ ಜಿಲ್ಲೆಯು ಬಯಲು ಬರ್ಹಿದಸೆ ಮುಕ್ತ ಗ್ರಾಮಗಳಾಗಲಿ.
ಹುಮನಾಬಾದ- ಘಾಟಬೋರಾಳ ಗ್ರಾಮ ಪಂಚಾಯತನಲ್ಲಿ ಸ್ವಚ್ಚ ಭಾರತ, ಬಯಲು ಬರ್ಹಿದಸೆ ಮುಕ್ತ ಅಭಿಯಾನದ ಅಂಗವಾಗಿ ಘಾಟಬೋರಾಳ ಗ್ರಾಮದಲ್ಲಿ ಸ್ವಚ್ಚತೆ ಮತ್ತು ಬಯಲು ಬರ್ಹಿದಸೆ ಮುಕ್ತ ಗ್ರಾಮಕ್ಕಾಗಿ ನೈರ್ಮಲ್ಯ ಕುರಿತು ಕೇಂದ್ರಿಕೃತ ಗುಂಪು ಚರ್ಚೆ, ವಿಷೇಶ ಗ್ರಾಮ ಸಭೆ ಮತ್ತು ತರಬೇತಿಯು ಗ್ರಾಮ ಪಂಚಾಯತಿಯ ಸಭಾಂಗಣದಲ್ಲಿ ಜರುಗಿತು. ಗ್ರಾಮಗಳು ಸ್ವಚ್ಚ ಹಾಗೂ ಸುಚಿಯಾಗಿಡುವುದರ ಜೊತೆಗೆ ಬಹಲು ಬರ್ಹಿದಸೆ ಮುಕ್ತ ಗ್ರಾಮಗಳಾಗಿ ಮಾಡುವುದು ಗ್ರಾಮ ಪಂಚಾಯತಿಯ ಅಧ್ಯಕ್ಷರ ಹಾಗೂ ಎಲ್ಲ ಸದಸ್ಯರ ಜವಬ್ದಾರಿಯಾಗಿದೆ ಆದರಿಂದ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಮತ್ತು ಸದಸ್ಯರು ಬಯಲು ಬರ್ಹಿದಸೆ ಮುಕ್ತ ಗ್ರಾಮಗಳಾಗಿ ಮಾಡಬೇಕೆಂದು ಘಾಟಬೋರಾಳ ಗ್ರಾಮ ಪಂಚಾಯತ ಅಧ್ಯಕ್ಷರಾದ ಪ್ರಭಾವತಿ ಪ್ರಭಾಕರ ಘಂಟೆ ಅವರು ತಿಳಿಸಿದರು. ರಾಷ್ಟಿçÃಯ ಜೀವನೋಪಾಯ ಮಿಷÀನ್ ಹುಮನಾಬಾದ ತಾಲ್ಲೂಕ ಸಮೂಚ್ಛಯ ಮೆಲ್ವೀಚಾರಕಿ ಆರತಿ ಸ್ವಾಮಿ ಅವರು ಮಾತನಾಡಿ ಸ್ವಚ್ಚ ಬೀದರ, ಬಯಲು ಬರ್ಹಿದಸೆ ಮುಕ್ತ ಅಭಿಯಾನ ಅಂಗವಾಗಿ ಶಾಂತೀಶ್ವರಿ ಸ್ವಯಂ ಸೇವಾ ಸಂಸ್ಥೆಯಿAದ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ, ಗ್ರಾಮ ಪಂಚಾಯತ ಸದಸ್ಯರಿಗೆ ಸ್ವ-ಸಹಾಯ ಸಂಘದ ಸದಸ್ಯರಿಗೆ, ಆಶಾ ಅಂಗನವಾಡಿ ಕಾರ್ಯಕರ್ತೆರು ಜಿ.ಪಿ.ಎಲ್,ಎಫ್ ಒಕ್ಕೂಟದ ಸದಸ್ಯರಿಗೆ ನಿರಂತರವಾಗಿ ಜಾಗೃತಿ ಕಾರ್ಯಕ್ರಮ ಪರಸ್ಪರ ಗುಂಪು ಚರ್ಚೆ ಮತ್ತು ತರಬೇತಿ ನೀಡುವುದರ ಮೂಲಕ ಬೀದರ ಜಿಲ್ಲೆಯ ಗ್ರಾಮಗಳು ಬಹಲು ಬರ್ಹಿದಸೆ ಮುಕ್ತ ಗ್ರಾಮಗಳಾಗಿ ಮಾಡಲು ಅಭಿಯಾನ ನಡೆಸುತ್ತಿದೆ ಎಂದರು.
ಇದರ ಅಂಗವಾಗಿ ಗ್ರಾಮದಲ್ಲಿ ಸ್ವಚ್ಚತೆ ಹಾಗೂ ಬಯಲು ಬರ್ಹಿದಸೆ ಮುಕ್ತಕಾಗಿ ಜಾಗೃತಿ ಜಾಥಾ ನಡೆಸಿ ಮಾಹಿತಿ, ಶಿಕ್ಷಣ, ಸಂವಹನ ಕರಪತ್ರ ವಿತರಿಸಿ ಜಾಗೃತಿಯ ಪೊಸ್ಟರ್‌ಗಳು ಅಂಟಿಸಲಾಯಿತು. ಗ್ರಾಮ ಪಂಚಾಯತ ಸದಸ್ಯರಾದ ಕುಮಾರ ಪಾಟೀಲ, ನಾಗನಾಥ ರೆಡ್ಡಿ, ಬಲಭೀಮ, ಗೌರಮ್ಮಾ ಹಾಗೂ ಜಿ,ಪಿ.ಎಲ್.ಎಫ್ ಒಕ್ಕೂಟದ ಅಧ್ಯಕ್ಷರಾದ ಲಕ್ಷಿö್ಮÃಗೋವಿಂದ ರೆಡ್ಡಿ ಕಾರ್ಯದರ್ಶಿ ಮಂಗಲಾ ನರೋಬಾ, ಎಮ್.ಬಿ.ಕೆ ಕವಿತಾ ಪ್ರಭು, ಎಲ್.ಸಿ.ಆರ್.ಪಿ ರಷ್ಮಿ ರಾಜೇಂದ್ರ, ಕಲ್ಪನಾ ಶ್ರಾವಣ, ಪಶುಸಖಿ ಸುಕದೇವಿ ವಿನೋದ ಸೇರಿದಂತೆ ಸ್ವ-ಸಹಾಯ ಸಂಘದ ಸದಸ್ಯರು, ನೈಮಲ್ಯ ಸಂಘದ ಸದಸ್ಯರು ಉಪಸ್ಥಿತರಿದ್ದರು.