ಬೀದರ್

ಬೀದರ ಜಿಲ್ಲಾ ಉಸ್ತುವಾರಿ ಸಚಿವರಿಗೆ ಕೆ.ಕೆ.ಆರ್.ಡಿ.ಬಿ ಅಧ್ಯಕ್ಷರನ್ನಾಗಿ ಮಾಡುವುದಕ್ಕೆ ಒತ್ತಾಯದ ಮನವಿ ಪತ್ರ.

ಕರ್ನಾಟಕ ರಕ್ಷಣಾ ವೇದಿಕ (ಪ್ರವೀಣ ಶೆಟ್ಟಿ ಬಣ)ದ ಜಿಲ್ಲಾ ಸಮಿತಿ ವತಿಯಿಂದ ಕರ್ನಾಟಕ ಸರ್ಕಾರದಲ್ಲಿ ಅರಣ್ಯ, ಪರಿಸರ ಜೈವಿಕ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಈಶ್ವರ ಬಿ. ಖಂಡ್ರೆಯವರು ಇವರು ರಾಜ್ಯದ ಕಾಂಗ್ರೇಸ್ ಪಕ್ಷದ ಕಾರ್ಯಧ್ಯಕ್ಷರಾಗಿ ಇವರ ನೇತ್ರತ್ವದಲ್ಲಿ ಈ ಬಾರಿ ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರದಲ್ಲಿ ತರಲು ಹಗಲು ರಾತ್ರಿಯೆನ್ನದೆ ಪಕ್ಷದ ಸಂಘಟನೆ ಬಲಪಡಿಸುವಲ್ಲಿ ಮುಖ್ಯ ಪಾತ್ರ ವಹಿಸಿರುತ್ತಾರೆ. ಕಲ್ಯಾಣ ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಮಂಡಳಿಯ ಅದ್ಯಕ್ಷರನ್ನಾಗಿ ಮಾಡಿದರೆ ಕರ್ನಾಟಕ ರಾಜ್ಯದಲ್ಲಿಯೇ ಅತಿ ಹಿಂದುಳಿದ ಜಿಲ್ಲೆಯ ಗಡಿ ಭಾಗದಲ್ಲಿ ಅಭಿವೃದ್ಧಿ ಕಾಮಗಾರಿಗಳು ಕೈಗೆತ್ತಿಕೊಳ್ಳುವಲ್ಲಿ ಸಹಾಯವಾಗುತ್ತದೆ. ಈ ಸಂಬಂಧ ಬೀದರ ಜಿಲ್ಲೆಯು ರಾಜ್ಯದಲ್ಲಿಯೇ ಅತಿ ಹಿಂದುಳಿದ ಜಿಲ್ಲೆಯೆಂಬ ಹೆಸರನ್ನು ಪಡೆದಿರುವುದನ್ನು ರದ್ದುಗೊಳಸಬೇಕಾದರೆ ನಿಷ್ಠಾವಂತ, 4 ಬಾರಿ ಶಾಸಕರಾಗಿ, 2 ಬಾರಿ ಸಚಿವರಾಗಿ 1 ಸಲ ಜಿಲ್ಲಾ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿದ್ದ ಅನುಭವನ್ನು ಹೊಂದಿರುವ ಇವರನ್ನು ಸದರಿ ಕೆ.ಕೆ.ಅರ್.ಡಿ.ಬಿಯ ಅಧ್ಯಕ್ಷರನ್ನಾಗಿ ನೇಮಿಸಿದರೆ ಹಿಂದುಳಿದ ಜಿಲ್ಲೆಯೆಂಬ ಹಣಡಪಟ್ಟಿಯನ್ನು ಕಳಚುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ)ಜಿಲ್ಲಾ ಸಮಿತಿ ವತಿಯಿಂದ ಇಂದು ಜಿಲ್ಲಾಧಿಕಾರಿಗಳ ಅಚೇರಿ ತಲುಪಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರು ಪೀಟರ್ ಚಿಟಗುಪ್ಪಾ, ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಸುನಿತಾ.ಬಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಪ್ರಕಾಶ ಬಗದಲಕರ್, ಜಿಲ್ಲಾಉಪಾಧ್ಯಕ್ಷರು ಗುರುರಾಜ ಮೇತ್ರೆ , ಪ್ರದೀಪ ಕೋಟೆ, ಮಂಗಲಾ, ಜಗದೇವಿ, ಕಾವೇರಿ, ಅಜಯ ಕೋಟೆ, ನಿಲೇಶ ರಾಠೋಡ, ಆನಂದ ಕೋಡಗಾಂವೆ, ಸುಧಾಕರ ಕಾಂಬಳೆ, ಮೋಹನ ಕೆ.ವಿ, ಚಂದ್ರಕಾಂತ ಪೋಳ, ಸೈಮನ್ ಮೇತ್ರೆ, ರಾಜಕುಮಾರ ಜಾಧವ, ಶ್ರೀನಿವಾ ಮೇತ್ರೆ, ಕೈಲಾಸ ಹಿರೇಮಠ, ಯೆಹ್ವಾನ್ ಮೀಸೆ, ಸಾಗರ ಮೇತ್ರೆ, ಅನೀಲ ಮೇತ್ರೆ ಇದ್ದರು

Ghantepatrike kannada daily news Paper

Leave a Reply

error: Content is protected !!