ಬೀದರ್

ಬೀದರ್ : ಸಿಲ್ವರ್ ಸ್ಟಾರ್ ರೋಟರಿ ಕ್ಲಬ್ ನಿಂದ 500 ಸಸಿನೆಟ್ಟು, ಪರಿಸರ ಜಾಗೃತಿ

ಬೀದರ್ : ನಗರದ ಹೊಸ ಬಸ್ ನಿಲ್ದಾಣ ಸಮೀಪ   ರೋಟರಿ ಕ್ಲಬ್ ಆಫ್ ಬೀದರ್ ಸಿಲ್ವರ್ ಸ್ಟಾರ್ ವತಿಯಿಂದ ಹಸಿರೇ ಉಸಿರು ಎಂಬ ಧ್ಯೇಯದೊಂದಿಗೆ ನಗರದಲ್ಲಿ 500 ಸಸಿ ನೆಟ್ಟುವ ಮೂಲಕ ಪರಿಸರ ಜಾಗೃತಿ ಮೂಡಿಸಲಾಯಿತು.

ಬೀದರ್ ನಲ್ಲಿ ಕೂಡ ಉತ್ತಮ ಹಸಿರು ವಾತಾವರಣ ನರ‍್ಮಾಣವಾಗಬೇಕು ಎಂಬ ಉದ್ದೇಶದಿಂದ ನಾವು ಬೀದರ್ ನಗರದಲ್ಲಿ ಒಟ್ಟು 500 ಗಿಡಗಳನ್ನು ನೆಟ್ಟು ಪೋಷಣೆ ಮಾಡುತ್ತೇವೆ ಎಂದು  ಕ್ಲಬ್ ನ ಅಧ್ಯಕ್ಷರಾದ ಸರದಾರ್ ಪುನೀತ್ ಸಿಂಗ್ ಹೇಳಿದ್ರು..

ಇದೇ ವೇಳೆ ಮಾತನಾಡಿದ ಕ್ಲಬ್ ನ ಸಲಹೆಗಾರರಾದ ಹಾಗು ಜಿಲ್ಲಾಧ್ಯಕ್ಷರು, ನಿಯೋಜಿತ ತಿಂಗಳುಗಳು ಬಸವರಾಜ್ ಧನ್ನೂರು ಅವರು ಬೀದರ್ ಕೂಡ ಬೆಂಗಳೂರು ಮಾದರಿಯಲ್ಲಿ ಹಸಿರುಮಯವಾಗಬೇಕು. ಅದಕ್ಕಾಗಿ ನಮ್ಮ ಸಿಲ್ವರ್ ಸ್ಟಾರ್ ಗಳು ಒಂದು ಮಹತ್ತರ ಕರ‍್ಯಕ್ಕೆ ಕೈಜೋಡಿಸಿದ್ದಾರೆ ಬೀರ‍್ನಲ್ಲಿ 500ಕ್ಕೂ ಅಧಿಕ ಸಸ್ಯಗಳನ್ನು ನೆಟ್ಟು ಘೋಷಣೆ ಮಾಡುತ್ತೇವೆ ಅಂತ ಸಂಕಲ್ಪವನ್ನು ಕೂಡ ಮಾಡಿದ್ದಾರೆ ಎಂದು ಕ್ಲಬ್ ಸದಸ್ಯರ ಕೆಲಸಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.

ಇದೆ ವೇಳೆ ಕರ‍್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ  ಜಿಲ್ಲಾ ಗರ‍್ನರ್ ಸಾಧು ಗೋಪಾಲ ಕೃಷ್ಣ ಖI ಆisಣ. 3160 –  ಅವರು ನಮ್ಮ ರೋಟರಿ ಕ್ಲಬ್ನ ಸದಸ್ಯರು ಮಾಡುತ್ತಿರುವಂತಹ ಕರ‍್ಯ ಮೆಚ್ಚುವಂತದ್ದು. ಇಂದಿನ ದಿನದಲ್ಲಿ ಇಂಗಾಲ ಡೈ ಆಕ್ಸೈಡ್ ಪ್ರಮಾಣ ಹೆಚ್ಚಾಗಿ ಆಮ್ಲಜನಕದ ಪ್ರಮಾಣ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಇಂತಹ ನಿಟ್ಟಿನಲ್ಲಿ ಪರಿಸರದ ಉಳಿವಿಗಾಗಿ ನಮ್ಮ ರೋಟರಿಯನ್ಸ್ ಮಾಡುತ್ತಿರುವ ಕರ‍್ಯ ಮೆಚ್ಚುವಂತದ್ದು ಎಂದರು.

ಕರ‍್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ ಬೀದರ್ ನಗರ ಸಭೆಯ ಅಧ್ಯಕ್ಷ ಮಹಮ್ಮದ್ ಗೌಸ್ ಮಾತನಾಡಿ ರೋಟರಿ ಕ್ಲಬ್ ಆಫ್ ಬೀದರ್ ನ ಸಿಲ್ವರ್ ಸ್ಟಾರ್ ಮಾಡುತ್ತಿರುವಂತಹ ಕರ‍್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ನಮ್ಮ ರ‍್ಕಾರ ಪರಿಸರದ ಉಳಿವಿಗೆ ಅನೇಕ ಮಹತ್ವದ ಕರ‍್ಯಗಳನ್ನು ಕೈಗೊಂಡಿದೆ ಇಂಥದರಲ್ಲಿ ಸಮಾಜದಲ್ಲಿನ ಸಂಘ ಸಂಸ್ಥೆಗಳು ಕೂಡ ಇದೇ ರೀತಿಯಲ್ಲಿ ಕೈಜೋಡಿಸಿದರೆ ಉತ್ತಮ ಪರಿಸರವನ್ನು ನರ‍್ಮಾಣ ಮಾಡಬಹುದು ಎಂದರು. ರೋಟರಿಯನ್ಸ್ ನೆಟ್ಟಂತಹ ಸಸಿಗಳಿಗೆ ಜವಾಬ್ದಾರಿಯಿಂದ ನಗರಸಭೆಯಿಂದ ಪೋಷಣೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಈ ಸಂರ‍್ಭದಲ್ಲಿ ಕ್ಲಬ್ ನ ಜಿಲ್ಲಾ ಕರ‍್ಯರ‍್ಶಿ ಬಿ ಶಿವರಾಮಿ ರೆಡ್ಡಿ ,ಸಹಾಯಕ ಗರ‍್ನರ್, ಕಲ್ಯಾಣ ವಲಯಸರ‍್ಯಕಾಂತ ರಾಮಶೆಟ್ಟಿ,

ರೋಟರಿ ಕ್ಲಬ್ ಆಫ್ ಬೀದರ್ ಸಿಲ್ವರ್‌ಸ್ಟಾರ್ ಉಪಾಧ್ಯಕ್ಷ ಅಧೀಶ್ ಆರ್.ವಾಲಿ,ಪೂಜಾ ಜರ‍್ಜ್ ಸ್ಯಾಮ್ಯುಯೆಲ್ – ಕರ‍್ಯರ‍್ಶಿ ,ಸ್ಫರ‍್ತಿ ಧನ್ನೂರು – ಜಂಟಿ ಕರ‍್ಯರ‍್ಶಿ ,ಯೋಜನಾ ಸಂಯೋಜಕ:ಆನಂದ ಕುಲರ‍್ಣಿ, ಮಂಜುನಾಥ ಹೂಗಾರ, ಸಂಗಮೇಶ ವಡಗಾವೆ
ನರ‍್ದೇಶಕರು: ಸಹನಾ ಪಾಟೀಲ್, ಗುರು ಸಿಂದೋಲ್, ಕರ‍್ತಿ ವಾಲೆ, ಭಾವೇಶ್ ಪಟೇಲ್, ಲವನೀತ್ ಸಿಂಗ್
ಸದಸ್ಯರಾದ ಆನಂದ ಕೋರ‍್ಕಿ, ಮನೋಜ ರಬಗಾರ, ಗುರು ಮೈಲಾಪುರ, ನವೀನ್ ಗೋಯಲ್, ಪ್ರಸನ್ನ ಸಿಂದೋಲ್, ಕಿರಣ ಸ್ಯಾಮುಯೆಲ್, ಗಣೇಶ ಪಾಟೀಲ್, ಮಂಜುನಾಥ ಖೋಬಾ, ಅಶೋಕ ಹೆಬ್ಬಾಳೆ
ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ಅಧ್ಯಕ್ಷ ಶಿವಕುಮಾರ್ ಪಾಖಲ್ ಮತ್ತು ಕರ‍್ಯರ‍್ಶಿ ಪ್ರಭು ತಡಪತಿ ಉಪಸ್ಥರಿದ್ದರು.

Ghantepatrike kannada daily news Paper

Leave a Reply

error: Content is protected !!