ಬೀದರ್‍ನಲ್ಲಿ ಮೈಕಲ್ ಜಾಕ್ಸನ್ ಜನ್ಮ ದಿನಾಚರಣೆ ಸೋಲೋ ನೃತ್ಯ ಸ್ಪರ್ಧೆ ವಿಜೇತರಿಗೆ ಬಹುಮಾನ
ಬೀದರ್ ಆ. 30 ಇಲ್ಲಿನ ಡಿ-ಡ್ಯಾನ್ಸ್ ಅಕಾಡೆಮಿಯಿಂದ ನಗರದ ಮೋಹನ ಮಾರ್ಕೆಟ್‍ನಲ್ಲಿ ಮೈಕಲ್ ಜಾಕ್ಸನ್‍ರ 65ನೇ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಅಲ್ಲದೇ ಸೋಲೋ ನೃತ್ಯ ಸ್ಪರ್ಧೆ ಜರುಗಿತು.
ಮುಖ್ಯ ಅತಿಥಿಗಳಾಗಿ ಮಾಣಿಕರಾವ ಪಂಚಾಳ ಭಾಗವಹಿಸಿ ಮೈಕಲ್ ಜಾಕ್ಸನ್‍ರ ಜೀವನ ಚರಿತ್ರೆ ಕುರಿತು ಸವಿಸ್ತಾರವಾಗಿ ವಿವರಿಸಿ ಮೈಕಲ್ ಜಾಕ್ಸನ್ ಅತಿ ಚಿಕ್ಕ ವಯಸ್ಸಿನಲ್ಲಿಯೇ ವಿಶ್ವವಿಖ್ಯಾತ ನೃತ್ಯಗಾರನೆಂದು ಮತ್ತು ಸಂಗೀತಗಾರನೆಂದು ಹೆರಸುವಾಸಿಯಾಗಿದ್ದರು ಎಂದರು.
ಬಸವರಾಜ ಮಲ್ಗೆ ಮಾತನಾಡಿ, ಶಿಕ್ಷಣದ ಜೊತೆಗೆ ಇತರೆ ಚಟುವಟಿಕೆಗಳೆಂದರೆ ನೃತ್ಯ, ಸಂಗೀತ, ಮನೋರಂಜನೆ ಕೂಡ ಇಂದಿನ ವಿದ್ಯಾರ್ಥಿಗಳಲ್ಲಿ ಇರಬೇಕೆಂದರು.
ಡಿ-ಡಾನ್ಸ್ ಅಕಾಡೆಮಿಯ ಅಧ್ಯಕ್ಷರಾದ ದತ್ತಾತ್ರಿ ಬೆಳ್ಳೂರೆ ನೇತೃತ್ವದಲ್ಲಿ ಸೋಲೋ ನೃತ್ಯ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಈ ಸ್ಪರ್ಧೆಯಲ್ಲಿ ಒಟ್ಟು 45 ವಿದ್ಯಾರ್ಥಿಗಳು ಭಾಗವಹಿಸಿದರು. ಈ ನೃತ್ಯ ಸ್ಪರ್ಧೆಗೆ ತೀರ್ಪುಗಾರರಾಗಿ ನೃತ್ಯ ಸಂಯೋಜಕರಾಗಿ ಸುಶೀಲಕುಮಾರ ವಂಕೆ, ನವೀನ ಜೀರ್ಗೆ ಹಾಗೂ ಪ್ರಶಾಂತ ಭೋಸ್ಲೆ ಭಾಗವಹಿಸಿದರು.
ಸೋಲೋ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕು. ತನ್ವಿ ಎಸ್. ಪರ್ಮಾ ಬೀದರ್ ಇವರಿಗೆ 2100 ರು., ಟ್ರೋಫಿ, ಪದಕ ಮತ್ತು ಪ್ರಮಾಣ ಪತ್ರವನ್ನು ನೀಡಲಾಯಿತು.
ದ್ವಿತೀಯ ಸ್ಥಾನ ಪಡೆದ ಕು. ಶಿವಲೀಲಾ ಎಸ್. ಹಲ್ಸೆ, ಭಾಲ್ಕಿ ಇವರಿಗೆ 1100 ರು., ಟ್ರೋಫಿ, ಪದಕ ಮತ್ತು ಪ್ರಮಾಣ ಪತ್ರ ನೀಡಲಾಯಿತು. ಹಾಗೂ ತೃತೀಯ ಸ್ಥಾನ ಪಡೆದ ವಿಶಾಲ ಡಿ. ಕಳಕೇರೆ, ಬೀದರ ಇವರಿಗೆ ಟ್ರೋಫಿ, ಪದಕ ಮತ್ತು ಪ್ರಮಾಣ ಪತ್ರವನ್ನು ನೀಡಲಾಯಿತು. ಮತ್ತು ಸದರಿ ಸ್ಪರ್ಧೆಯಲ್ಲಿ ಭಾಗಹಿಸಿದ 42 ಮಕ್ಕಳಿಗೆ ಪದಕ ಮತ್ತು ಪ್ರಮಾಣ ಪತ್ರವನ್ನು ನೀಡಲಾಯಿತು.
ವಿಜಯಕುಮಾರ ಬೆಳ್ಳೂರೆ ಅಧ್ಯಕ್ಷತೆ ವಹಿಸಿದರು. ಅನಿಲಕುಮಾರ ಮಜಗೆ, ಸಂತೋಷ ದಾನಾ, ವಿಜಯಕುಮಾರ ಶಾಮನೂರ, ಶಿವಾನಂದ ಸಾಲೆ, ವಿಜಯಕುಮಾರ ಸ್ವಾಮಿ, ಸಿದ್ಧಾರ್ಥ ಮಂಠಾಳೆ, ಸಂಜೀವ ಟಿಳ್ಳೆಕರ್, ಅನುಪ ವರ್ಮಾ, ವೀರೇಶ ಪಾಟೀಲ, ಮಾಣಿಕರಾಜ, ಉದಯರಾಜ, ಉಮೇಶ, ಆದಿತ್ಯ, ಸಂಜೀವಕುಮಾರ ಎಮ್. ಕು. ಶ್ವೇತಾ, ಪಾಲಕರು ಮತ್ತು ಇತರೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.