ಬಿ.ಎಡ್., ಡಿ.ಎಡ್ ವಿದ್ಯಾರ್ಥಿಗಳಿಂದ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ
ಬೀದರ. ಆಗಸ್ಟ್.22 (ಕರ್ನಾಟಕ ವಾರ್ತೆ)-2023-24ನೇ ಸಾಲಿಗೆ ಅಲ್ಪಸಂಖ್ಯಾತ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಹಾಗೂ ಪಾರ್ಸಿ) ಸಮುದಾಯಕ್ಕೆ ಸೇರಿದ ಬಿ.ಎಡ್ ಮತ್ತು ಡಿ.ಎಡ್ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹ ಧನ ಯೋಜನೆಯಡಿ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಇಚ್ಛಿಸುವವರು ನ್ಯಾಷನಲ್ ಕೌನ್ಸಿಲ್ ಫಾರ್ ಟೀರ‍್ಸ್ ಎಜುಕೇಶನ್ ನಿಂದ ಮಾನ್ಯತೆ ಪಡೆದಿರುವ ಬಿ.ಎಡ್ ಹಾಗೂ ಡಿಪಾರ್ಟಮೇಂಟ್ ಆಫ್ ಸ್ಟೇಟ್ ಎಜುಕೇಶನ್ ರೀಸರ್ಚ ಆ್ಯಂಡ್ ಟ್ರೇನಿಂಗ್‌ನಿAದ ನಿಂದ ಮಾನ್ಯತೆ ಪಡೆದಿರುವ ಡಿ.ಎಡ್ ಕೋರ್ಸ್ಗಳಲ್ಲಿ ವ್ಯಾಸಂಗ ಮಾಡುತ್ತಿರಬೇಕು.
ಅದರಂತೆ ಅರ್ಹ ಬಿ.ಎಡ್ ಮತ್ತು ಡಿ.ಎಡ್ ವಿದ್ಯಾರ್ಥಿಗಳು ಆನ್‌ಲೈನ್ ಅರ್ಜಿಯನ್ನು ಸೇವಾಸಿಂಧು ಪೋರ್ಟಲ್‌ನ ಅಧಿಕೃತ ವೆಬ್‌ಸೈಟ್ hಣಣಠಿs://sevಚಿsiಟಿಜhu.ಞಚಿಡಿಟಿ
ಅರ್ಜಿಯನ್ನು ಆನ್‌ಲೈನ್ ಮೂಲಕ ಸಲ್ಲಿಸಿದ ನಂತರ ಅರ್ಜಿಯ ಸ್ವೀಕೃತಿ ಹಾಗೂ ದಾಖಲೆಯೊಂದಿಗೆ ಇಲ್ಲಿಗೆ ಸಲ್ಲಿಸುವುದು. ತಡವಾಗಿ ಬಂದ ಅರ್ಜಿಗಳನ್ನು ಪರಿಗಣಿಸುವುದಿಲ್ಲ. ಸದರಿ ಕೋರ್ಸಗಳ ಅವಧಿಗೆ ತಕ್ಕಂತೆ ಪ್ರತಿ ವರ್ಷ (ಗರಿಷ್ಟ 2 ವರ್ಷ) ಅನುದಾನವನ್ನು ನೀಡಲಾಗುವುದು. ವಿದ್ಯಾರ್ಥಿಗಳ ಬ್ಯಾಂಕ ಖಾತೆಗೆ ನೇರವಾಗಿ ಹಣ ಸಂದಾಯ ಯೋಜನೆ ಡಿ.ಬಿ.ಟಿ ಮುಖಾಂತರ ಹಣ ವರ್ಗಾವಣೆ ಮಾಡಲಾಗುವುದು, ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಕಡ್ಡಾಯವಾಗಿ ಧೃಡೀಕೃತ ಪ್ರತಿಯನ್ನು ಕಛೇರಿಗೆ ಸಲ್ಲಿಸುವುದು. ಎಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಧಿಕಾರಿ ಅವಿನಾಶ.ಎಮ್.ಎ ಪ್ರಕಟಣೆಯಲ್ಲಿತ ತಿಳಿಸಿದ್ದಾರೆ.