ಬೀದರ್

ಬಸವಣ್ಣ ಭುವನದ ಬೆಳಕು – ಡಾ. ಶೈಲೇಂದ್ರ ಬೆಲ್ದಾಳೆ

ಬಸವಣ್ಣ ಭುವನದ ಬೆಳಕು ಸಮಾನತೆಯ ಹರಿಕಾರರು. 12 ನೇ ಶತಮಾನದಲ್ಲಿ ಶರಣರ ವಿಚಾರ ಧಾರೆಗಳನ್ನು ಜನ ಸಾಮಾನ್ಯರಿಗೆ ಮುಟ್ಟಿಸಲು ಅನುಭವ ಮಂಟಪ ರಚನೆ ಮಾಡಿದ್ದು ಒಂದು ಐತಿಹಾಸಿಕ ದಾಖಲೆ ಎಲ್ಲಾ ಸಮುದಾಯದವರನ್ನು ಒಂದೇ ಸೂರಿನಡಿಯಲ್ಲಿ ಇಂಬಿಟ್ಟುಕೊಂಡು ಅವರಿಂದಲೇ ಅಚ್ಚ ಗನ್ನಡದಲ್ಲಿ ವಚನಗಳನ್ನು ಬರೆಸಿರುವುದು ಒಂದು ದೊಡ್ಡ ಕ್ರಾಂತಿ, ಕಹಳೆ ಮೊಳಗಿಸಿದೆ ಎಂದು ಬೀದರ ದಕ್ಷಿಣ ಮತ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ನುಡಿದರು.
ವಿದ್ಯಾನಗರದ ಬಸವ ಕೇಂದ್ರದಲ್ಲಿ ಒಂದು ತಿಂಗಳಕಾಲ ಜೀವನ ದರುಶನ ಪ್ರವಚನ ಮಂಗಲ ಸಮಾರಂಭದಲ್ಲಿ ಮಾನ್ಯ ಶಾಸಕರು ಸಮಾರೋಪ ಭಾಷಣ ಮಾಡುತ್ತ ಇಂದು ನಮ್ಮೆಲ್ಲರಿಗೆ ವಚನಗಳು ಅತ್ಯಮೂಲ್ಯ ಸಂದೇಶ ನೀಡುತ್ತಿವೆ. ವಚನಗಳು ಜೀವನಕ್ಕೆ ಮೌಲ್ಯ ನೀಡುತ್ತೀವೆ. ಒಂದು ವರ್ಷದಲ್ಲಿ ಅನೇಕ ಚಟುವಟಿಕೆಗಳಲ್ಲಿ ನಾವು ಭಾಗಿಯಾಗುತ್ತೇವೆ. ಆದರೆ ಶ್ರಾವಣಮಾಸ ಇದು ಒಂದು ಪವಿತ್ರ ತಿಂಗಳಾಗಿದ್ದು ಅನೇಕ ವೈಚಾರಿಕ ತತ್ವಗಳನ್ನು ಕೇಳಿ ಜೀವನ ಪಾವನಮಾಡಿಕೊಳ್ಳಲು ಇದೊಂದು ಸುವರ್ಣವಕಾಶ ಎಂದು ನುಡಿದರು.
ನೂತನ ಸಿಂಡಿಕೇಟ್ ಸದಸ್ಯರಾದ ಸಿದ್ದಪ್ಪ ಮೂಲಗೆ ಸನ್ಮಾನ ಸ್ವೀಕರಿಸಿ ಮಾತನಾಡಿ ನಮ್ಮ ಧರ್ಮ ಅತ್ಯಂತ ಪ್ರಫುಲ್ಲವಾಗಿದ್ದು ಅದರ ಅನುಷ್ಠಾನ ಅಂದಿಗಿಂತ ಇಂದು ಅವಶ್ಯಕ, ದೇವರು ಧರ್ಮದ ಬಗ್ಗೆ ಅನಾವಶ್ಯಕ, ಗೊಂದಲ ಗೊಜಿಗೆ ಹೋಗದೆ ಸಹಬಾಳ್ವೆಯಿಂದ ನೆಮ್ಮದಿ ಜೀವನ ಸಾಗಿಸಲು ಶರಣರು ನಮಗೆ ಅನೇಕ ವಚನಗಳನ್ನು ನೀಡಿದ್ದಾರೆ. ಬಸವ ತತ್ವ ಅಂದು ಮುಂದು ಪ್ರಸ್ತುತವಾಗಿದೆ ಎಂದರು.
ಪ್ರವಚನಕಾರರಾದ ಪ್ರೊ. ಸಿದ್ದು ಯಾಪಲಪರವಿ ಮಾತನಾಡಿ ವ್ಯಕ್ತಿ ತನ್ನ ಬದುಕಿನಲ್ಲಿ ವಿಶ್ವಾಸದಿಂದ ಮುನ್ನುಗಬೇಕು. ಬೇರೆಯವರ ಒಲೈಕೆಗಾಗಿ ತಮ್ಮ ತನವನ್ನು ಮಾರಿಕೊಳ್ಳಬಾರದು. ಈ ಕೆಂಪು ನೆಲ ಬೀದರ ಜಿಲ್ಲೆ ಕ್ರಾಂತಿಯ ಕ್ಷೇತ್ರವಾಗಿದೆ. ಇಲ್ಲಿ ಅನೇಕ ಶರಣರು ತಮ್ಮ ಪ್ರಾಣವನ್ನೇ ತ್ಯಾಗಮಾಡಿ ರಕ್ತ ಹರಿಸಿ ಸಮಾನತೆಯ ತತ್ವ ನಮ್ಮ ಕೈಗೆ ನೀಡಿದ್ದು ಇಂದು ಸಹ ಪ್ರಸ್ತುತವಾಗಿದೆ. ವಚನ ಸಂಸ್ಕøತಿ ಎಲ್ಲರನ್ನು ಇವ ನಮ್ಮವ ಇವ ನಮ್ಮವ ಎಂದು ಹೇಳಿ ಅಸಮಾನತೆಯನ್ನು ದೂರಮಾಡಿದೆ. ಎಂದು ಹೇಳಿದರು. ಈ ಸಂದರ್ಭದಲ್ಲಿ ಪ್ರೊ. ಸಿದ್ದು ಯಾಪಲಪರವಿ, ದಾಸೋಹಿಗಳಾದ ಚನ್ನಬಸವ ಹೇಡೆ, ಲಿಂಗಾರತಿ ಅಲ್ಲಮಪ್ರಭು ನಾವದಗೇರೆ ಶಿವಪುತ್ರಪ್ಪ ಪಾಟೀಲ, ರೇವಣಪ್ಪ ಮೂಲಗೆ, ವೀರುಪಾಕ್ಷ ದೇವರು, ಕವಿತಾ ಶಿವದಾಸ ಸ್ವಾಮಿ, ಕೋಟೆ ಸೂರ್ಯಕಾಂತ, ಶರಣಯ್ಯ ಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಶರಣಪ್ಪ ಮಿಠಾರೆ ವಹಿಸಿದರೆ ಪೂಜ್ಯ ಪಂಚಯ್ಯ ಸ್ವಾಮಿ ಸಾನಿಧ್ಯ ವಹಿಸಿದರು.
ಮೊದಲಿಗೆ ಸುರೇಶ ಚನ್ನಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರೆ, ವಿದ್ಯಾವತಿ ಬಲ್ಲೂರ ಸ್ವಾಗತಿಸಿದರೆ ಶಿವಶಂಕರ ಟೋಕರೆ ನಿರೂಪಿಸಿದರೆ, ಶಿವಪುತ್ರ ಪಾಟೀಲ ವಂದಿಸಿದರು.

Ghantepatrike kannada daily news Paper

Leave a Reply

error: Content is protected !!