ಫಂಢರಾಪೂರಕ್ಕೆ ವಿಶೇಷ ರೈಲಿನ ವ್ಯವಸ್ಥೆ: ಭಗವಂತ ಖೂಬಾ
ಜುಲೈ 17 ರಂದು ಇರುವ ಅಷಾಢ ಏಕಾದಶಿಯ ನಿಮಿತ್ಯ ಕ್ಷೇತ್ರದ ಜನತೆಯ ಅನುಕೂಲಕ್ಕಾಗಿ ಬೀದರ ನಿಂದ ಪಂಢರಾಪೂರಕ್ಕೆ ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದೆ, ಎಲ್ಲಾ ಸದ್ಭಕ್ತರು ಇದರ ಸದೂಪಯೋಗ ಪಡೆದುಕೊಳ್ಳಬೇಕೆಂದು ಮಾಜಿ ಕೇಂದ್ರ ಸಚಿವರಾದ ಭಗವಂತ ಖೂಬಾ ತಿಳಿಸಿದ್ದಾರೆ.
ಈ ವಿಶೇಷ ರೈಲು, (ರೈಲು ಸಂಖ್ಯೆ: 07505), ದಿನಾಂಕ: 16-07-2024, ಮಂಗಳವಾರದಂದು ಅಕೋಲಾದಿಂದ ಬೆಳಿಗ್ಗೆ 11.00 ಗಂಟೆಗೆ ಹೊರಟು ಲಾತೂರ ರೋಡ್, ಉದಗಿರ, ಭಾಲ್ಕಿ (ರಾ. 9.15) ಮಾರ್ಗವಾಗಿ ಬೀದರ ನಿಂದ ರಾತ್ರಿ 09.50ಕ್ಕೆ ಹೊರಟು, ಜಹಿರಾಬಾದ, ವಿಕಾರಾಬಾದ, ಚಿತ್ತಾಪೂರ, ಕಲಬುರಗಿ, ಸೊಲಾಪೂರ ಮಾರ್ಗವಾಗಿ ಮರುದಿನ 17-07-2024ರ ಬೆಳಿಗ್ಗೆ 10.50 ಗಂಟೆಗೆ ಪಂಢರಾಪೂರಕ್ಕೆ ತಲುಪಲಿದೆ.
ಅದೇ ದಿನ 17-07-2024, ಬುಧವಾರ (ರೈಲು ಸಂಖ್ಯೆ: 07506) ರಾತ್ರಿ 09.40ಕ್ಕೆ ಪಂಢರಾಪೂರದಿಂದ ಹೊರಟು ಬಂದ ಮಾರ್ಗವಾಗಿ ಮರುದಿನ 18-07-2024ರ ಬೆಳಿಗ್ಗೆ 07.15ಕ್ಕೆ ಬೀದರ ಮತ್ತು 8.00 ಗಂಟೆಗೆ ಭಾಲ್ಕಿಗೆ ತಲುಪಲಿದೆ. ನಂತರ ರಾತ್ರಿ 8.00 ಗಂಟೆಗೆ ಅಕೋಲಾ ತಲುಪಲಿದೆ.
ಎಲ್ಲಾ ಸದ್ಭಕ್ತರು ಈ ವಿಶೇಷ ರೈಲಿನ ಸದೂಪಯೋಗ ಪಡೆದುಕೊಂಡು, ಸಮಾಧಾನ ಮತ್ತು ಸುರಕ್ಷಿತವಾಗಿ ಪಂಢರಾಪೂರಕ್ಕೆ ತೆರಳಿ, ಪಂಡರಿನಾಥನ ದರುಶನ ಮಾಡಿಕೊಂಡು ಬರಲು ಮಾಜಿ ಸಚಿವ ಭಗವಂತ ಖೂಬಾ ಎಲ್ಲಾ ಭಕ್ತರಲ್ಲಿ ವಿನಂತಿಸಿಕೊಂಡಿದ್ದಾರೆ.