ಪ್ರಥಮ ಬಹುಮಾನ ಪಡೆದ ಪೊಲೀಸ್ ಇಲಾಖೆ ತಂಡ
ಪ್ರತಿ ವರ್ಷ ಮೇಜರ ಧ್ಯಾನಚಂದ ರವರ ಸ್ಮರಣಾರ್ಥವಾಗಿ ಪ್ರತಿ ವರ್ಷ ಆಚರಿಸುವ ರಾಷ್ಟ್ರೀಯ ಕ್ರೀಡಾ ದಿಚಾಚರಣೆ ಅಂಗವಾಗಿ ದಿನಾಂಕ: 29/08/2023 ರಂದು ಬೀದರದ ಜಿಲ್ಲಾ ನೆಹರೂ ಕ್ರೀಡಾಂಗಣದಲ್ಲಿ ಆಯೋಜಿಸಿದ ವಾಲಿಬಾಲ್ ಪದ್ಯಾವಳಿಯಲ್ಲಿ ಕಂದಾಯ ಇಲಾಖೆ ತಂಡ ಮತ್ತು ಪೊಲೀಸ್ ಇಲಾಖೆ ಅಂತಿಮ ಪಂದ್ಯದಲ್ಲಿ ಪೊಲೀಸ್ ಇಲಾಖೆ ತಂಡ ಶ್ರೀ, ಪ್ರಕಾಶ ರವರ ನೇತೃತ್ವದ ಶ್ರೀ, ರಾಜಕುಮಾರ, ಹಣಮಂತರೆಡ್ಡಿ, ಸೂರ್ಯಕಾಂತ, ಅಂಬಾದಾಸ್, ಸುನೀಲ್, ಶಿವಕುಮಾರ, ನಾಗೇಶ ಮತ್ತು ನರೇಶ ರವರನ್ನೊಳಗೊಂಡ ತಂಡವು ಕಂದಾಯ ಇಲಾಖೆ ತಂಡವನ್ನು ರೋಚಕವಾಗಿ ಮಣಿಸಿ ಪ್ರಥಮ ಬಹುಮಾನ ಪಡೆದುಕೊಂಡಿರುತ್ತಾರೆ.
ಬೀದರ ಜಿಲ್ಲಾ ಪೊಲೀಸ್ ವಾಲಿಬಾಲ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿ ಪ್ರಥಮ ಸ್ಥಾನ ಪಡೆದ ತಂಡಕ್ಕೆ ಶ್ಲಾಘಿಸಿ ಬಹುಮಾನಘೋಷಣೆ ಮಾಡಲಾಗಿದೆ.