ಪ್ರಥಮ ಚಿಕಿತ್ಸೆ ನೀಡಿ ಆಂಬುಲೇನ್ಸ್ದಲ್ಲಿ ಆಸ್ಪತ್ರೆಗೆ ಕಳುಹಿಸಿಕೊಟ್ಟ ಪೊಲೀಸ್ ಶ್ರೀ, ಮಲ್ಲಪ್ಪಾ
ಹುಮನಾಬಾದ ತಾಲೂಕಿನ ಅಲ್ಲೂರ ಗ್ರಾಮದ ಹತ್ತಿರ ದ್ವೀಚಕ್ರ ವಾಹನ ಅಪಘಾತ ಸಂಭವಿಸಿದ್ದು, ಚಾಲಕನಿಗೆ ತಲೆಗೆ ಭಾರಿ ಪಟ್ಟಾಗಿದ್ದು, ಹೆಲ್ಮೆಟ್ ಧರಿಸದೆ ಇರುವುದಾಗಿದೆ. ಮಾಹಿತಿಯಂತೆ E.R.S.S 112 ವಾಹನವು ಕೆಲವೇ ನಿಮಿಷದಲ್ಲಿ ಸ್ಥಳಕ್ಕೆ ಭೇಟಿ ನೀಡಿ, ಚಾಲಕನಿಗೆ ಪ್ರಥಮ ಚಿಕಿತ್ಸೆ ನೀಡಿ ಆಂಬುಲೇನ್ಸ್ದಲ್ಲಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ. ಪ್ರಥಮ ಚಿಕಿತ್ಸೆ ನೀಡಿದ ಸಿಬ್ಬಂದಿ ಶ್ರೀ, ಮಲ್ಲಪ್ಪಾ ಸಿಹೆಚ್.ಸಿ-972, ಹಳ್ಳಿಖೇಡ ಪೊಲೀಸ್ ಠಾಣೆ ರವರಿಗೆ ಶ್ಲಾಘಿಸಿ ಬಹುಮಾನ ಘೋಷಿಸಲಾಗಿದೆ. ಹಾಗು ಚಾಲಕನು ಬೇಗ ಗುಣ ಮುಖವಾಗಲಿ .. ಹೆಲ್ಮೆಟ್ ಧರಿಸಿ ಪ್ರಾಣ ಉಳಿಸಿ ಕೊಳ್ಳಿ.