ಬೀದರ್

ಪ್ರಗತಿ ಸಂಗೀತ ಕಲಾ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಸಂಗೀತ ಸಂಜೆ ಕಾರ್ಯಕ್ರಮ

ಬೀದರ, ಜೂ.30 ವಿಶ್ವ ಸಂಗೀತ ದಿನಾಚರಣೆ ಪ್ರಯುಕ್ತ ಪ್ರಗತಿ ಸಂಗೀತ ಕಲಾ ಸಂಸ್ಥೆ ವತಿಯಿಂದ ನಗರದಲ್ಲಿ ಆಯೋಜಿಸಿದ್ದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಕಲಾವಿದರು ಸಂಗೀತ ಸುಧೆ ಹರಿಸಿದರು.

ಯುವ ಮತ್ತು ಹಿರಿಯ ಕಲಾವಿದರು ಪ್ರಸ್ತುತಪಡಿಸಿದ ವಿವಿಧ ಪ್ರಕಾರಗಳ ಸಂಗೀತಕ್ಕೆ ಪ್ರೇಕ್ಷಕರು ತಲೆದೂಗುವಂತೆ ಮಾಡಿತು. ಹಿಂದೂಸ್ಥಾನಿ ಗಾಯನ, ತಬಲಾ- ಹಾರ್ಮೋನಿಯಂ ಸೋಲೋ ಮತ್ತು ಗಿಟಾರ್ ವಾದನ ಪ್ರೇಕ್ಷಕರನ್ನು ರಂಜಿಸಿತು.

ವಿದ್ಯಾಲಯದ ವಿದ್ಯಾರ್ಥಿಗಳಾದ ಡಾ. ಶ್ರದ್ಧಾ ಪೊತ್ತಾರ್ ಅವರು ಯಮನ್ ರಾಗ, ಶ್ರೀವರ್ಧನ್ ಎಖ್ಖೆಳ್ಳಿ ಅವರು ಬಡಾಖ್ಯಾಲ್, ಮಧುವಂತಿ ರಾಗವನ್ನು ಹಾಗೂ ಶಶಾಂತ್ ಕುಲಕರ್ಣಿ ಅವರು ಗಿಟಾರ್ ವಾದನವನ್ನು ಪ್ರದರ್ಶಿಸಿದರು. ಸಂಸ್ಥೆಯ ಅಧ್ಯಕ್ಷರಾದ ರಮೇಶ ಕೋಳಾರ್ ಮತ್ತು ಅವರ ಪುತ್ರ ರೋಶನ್ ಕೋಳಾರ್ ಅವರು ತಬಲಾ ಸಾಥ್ ನೀಡಿದರು. ಈ ವೇಳೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಕಲಾವಿದ ರಾಜೇಂದ್ರಸಿಂಗ್ ಪವಾರ್ ಮತ್ತು ರೋಶನ್ ಅವರ ತಬಲಾ- ಹಾರ್ಮೋನಿಯಂ ಸೋಲೋ ಮಂತ್ರಮುಗ್ದರನ್ನಾಗಿಸಿತು. ಕೊನೆಗೆ ಜಿಲ್ಲೆಯ ಹಿರಿಯ ಕಲಾವಿದ ಪಂಡಿತ್ ರಾಮಲು ಗಾದಗಿ ಅವರು ಭೈರವಿಯಲ್ಲಿ ಛೋಟಾಖ್ಯಾಲ್ ಮತ್ತು ಪಂ. ಭೀಮಸೇನ್ ಜೋಶಿಯವರ ಭಜನೆ ಹಾಡಿ ಮುಕ್ತಾಯಗೊಳಿಸಿದರು.

ಇದಕ್ಕೂ ಮುನ್ನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪಂ. ರಾಮಲು ಗಾದಗಿ, ಸಂಗೀತ ಕಠಿಣ ವಿದ್ಯೆಯಾಗಿದ್ದು, ಅಭ್ಯಾಸದಿಂದ ಮಾತ್ರ ಸಾಧನೆ ಮಾಡಲು ಸಾಧ್ಯ. ಶಾಸ್ತ್ರೀಯ ಸಂಗೀತ ನಮ್ಮ ಪರಂಪರೆ, ಸಂಸ್ಕøತಿಯಾಗಿದ್ದು, ಕಲೆಯನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ಯುವ ಪೀಳಿಗೆ ಮೇಲಿದೆ. ಕೋಳಾರ್ ಕುಟುಂಬ ಸಂಗೀತಕ್ಕಾಗಿ ದುಡಿಯುತ್ತಿದೆ. ಉದಯೋನ್ಮುಖ ಕಲಾವಿದರಿಗೆ ವೇದಿಕೆ ಕಲ್ಪಿಸಿ, ಪ್ರೋತ್ಸಾಹಿಸುವ ಕೆಲಸವನ್ನು ಪ್ರಗತಿ ಸಂಸ್ಥೆ ಮಾಡುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ರಮೇಶ ಕೋಳಾರ್ ಅವರು ಅಧ್ಯಕ್ಷತೆ ವಹಿಸಿದ್ದರು. ಪ್ರಗತಿ ಕೋಳಾರ್ ನಿರೂಪಿಸಿದರೆ ಶ್ರೇಯಾ ವಂದಿಸಿದರು. ತ್ರಿವೇಣಿ ಕೋಳಾರ್ ಮತ್ತಿತರರು ಪಾಲ್ಗೊಂಡಿದ್ದರು.

Ghantepatrike kannada daily news Paper

Leave a Reply

error: Content is protected !!