ಪುಟ್ ಫಾತ್ ಮತ್ತು ರಸ್ತೆ ಒತ್ತುವರಿಗಳನ್ನು ತೆರವುಗೊಳಿಸಿ- ಜಿಲ್ಲಾಧಿಕಾರಿ ಗೋವಿಂದರೆಡ್ಡಿ
ಬೀದರ. ಜೂನ್. 28 :- ಬೀದರ ನಗರ ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಒತ್ತುವರಿಯಾದ ಪುಟ್ ಫಾತ್ ಹಾಗೂ ರಸ್ತೆ ಒತ್ತುವರಿಗಳನ್ನು ತೆರವುಗೊಳಿಸಿ ಇದರಿಂದ ಸಾರ್ವಜನಿಕರಿಗೆ ತಿರುಗಾಡಲು ತೊಂದರೆಯಾಗುತ್ತಿದೆ ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು
ಅವರು ಶುಕ್ರವಾರ ಸಂಜೆ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದರು.
ಈಗಾಗಲೇ ಬೀದರ ನಗರದ ಮುಖ್ಯ ರಸ್ತೆಗಳು ಹಾಗೂ ಪುಟ್ ಫಾತಗಳಲ್ಲಿ ಒತ್ತುವರಿಯಾದ ಜಾಗಗಳನ್ನು ತೆರವುಗೊಳಿಸುತ್ತಿದ್ದು ಅದರಂತೆ ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿ ಈ ಕೆಲಸ ಮಾಡಬೇಕು ಆಯಾ ತಾಲ್ಲೂಕಿನ ತಹಶಿಲ್ದಾರರು. ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಟೀಂ ರೀತಿಯಲ್ಲಿ ಕೆಲಸ ಮಾಡಬೇಕೆಂದು ಹೇಳಿದರು.
ಒಂದು ದಿನ ಮುಂಚಿತವಾಗಿ ಜನರಿಗೆ ಮಾಹಿತಿ ನೀಡಲು ಪತ್ರಿಕೆಯಲ್ಲಿ ಪ್ರಟಕಣೆ ಹಾಗೂ ಸ್ಥಳೀಯವಾಗಿ ಡಂಗೂರ ಸಾರಿ ಮಾಹಿತಿ ನೀಡಬೇಕು. ಕೆಲವೊಂದು ಸರ್ಕಲಗಳಲ್ಲಿ ವಾಹನಗಳು ಸಂಚರಿಸುವಾಗ ಬಹಳಷ್ಟು ಟ್ರಾಫಿಕ್ ಸಮಸ್ಯೆಗಳಾಗುತ್ತಿದೆ. ಅನಧಿಕೃತ ಶೆಡ್ ತೆಗೆಯುವ ಸಂದರ್ಭದಲ್ಲಿ ಕೆಲ ಕಡೆ ಕರೆಂಟ್ ಸಂಪರ್ಕ ಇರುತ್ತದೆ ಹಾಗಾಗಿ ಜೊತೆಯಲ್ಲಿ ಲೈನಮೇನರನ್ನು ಕರೆದುಕೊಂಡು ಹೋಗಬೇಕೆಂದು ಹೇಳಿದರು.
ನಗರ ಪ್ರದೇಶಗಳಲ್ಲಿ ಮಾತ್ರವಲ್ಲದೇ ಕೆಲವೊಂದು ದೊಡ್ಡ ಹೋಬಳಿ ಮಟ್ಟದ ರಸ್ತೆಯಲ್ಲಿಯು ಸಹ ಒತ್ತುವರಿಗಳಾಗಿದ್ದು ಅವುಗಳನ್ನು ತೆರವುಗೊಳಿಸಿ. ಸಣ್ಣ ಪುಟ್ಟ ವ್ಯಾಪಾರ ಮಾಡುವವರು ತಳ್ಳು ಬಂಡಿಯಲ್ಲಿ ವ್ಯಾಪಾರ ಮಾಡಲಿ ಅದಕ್ಕೆ ನಮ್ಮ ಅಭ್ಯಂತರ ಇಲ್ಲ ಆದರೆ ಸಾರ್ವಜನಿಕ ರಸ್ತೆ ಮತ್ತು ಪುಟ್ ಫಾತಗಳ ಮೇಲೆ ಶೆಡಗಳನ್ನು ನಿರ್ಮಿಸಿ ವ್ಯಾಪಾರ ಮಾಡುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುವದರ ಜೊತೆಗೆ ಟ್ರಾಫಿಕ್ ಸಮಸ್ಯೆಗಳಾಗುತ್ತಿವೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್. ಅವರು ಮಾತನಾಡಿ, ಪುಟ್ ಫಾತಗಳ ಮೇಲೆ ಪರ್ಮನೆಂಟ್ ಶೆಡಗಳನ್ನು ಹಾಕಿದಾಗ ಜನರು ರಸ್ತೆಯಲ್ಲಿ ಬರುತ್ತಾರೆ ಇದರಿಂದ ಅಪಘಾತಗಳು ಹೆಚ್ಚಾಗುತ್ತವೆ. ತಳ್ಳುಗಾಡಿಗಳಲ್ಲಿ ತರಕಾರಿ ಮತ್ತು ಹಣ್ಣುಗಳ ವ್ಯಾಪಾರ ಮಾಡುವವರಿಗೆ ಒಂದು ಜಾಗ ನಿಗದಿಪಡಿಸಿ ಟ್ರಾಫಿಕ್ ಸಮಸ್ಯೆಗಳಾಗದಂತೆ ನೋಡಿಕೊಳ್ಳಬೇಕು ಅವರು ತಮ್ಮ ವ್ಯಾಪಾರ ಮುಗಿದ ನಂತರ ಮತ್ತೆ ಸಂಜೆ ತಮ್ಮ ತಳ್ಳುಗಾಡಿಗಳನ್ನು ತೆಗೆದುಕೊಂಡು ಹೋಗಬೇಕು ಅಲ್ಲೆ ಬಿಡುವ ಹಾಗಿಲ್ಲ ಎಂದು ಹೇಳಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ ಅವರು ಮಾತನಾಡಿ ದೊಡ್ಡ- ದೊಡ್ಡ ಪಂಚಾಯತಿ ವ್ಯಾಪ್ತಿಯಲ್ಲಿಯ ಹಳ್ಳಿಗಳ ರಸ್ತೆಯಲ್ಲಿ ಒತ್ತುವರಿಯಾಗಿದ್ದರೆ ಅವುಗಳ ತೆರವುಗೊಳಿಸಲು ಪಿ.ಡಿ.ಓ ಗಳಿಗೆ ಮಾಹಿತಿ ನೀಡಿ. ಸಾರ್ವಜನಿಕ ಸ್ಥಳಗಳ ಒತ್ತುವರಿಯಿಂದ ಜನರಿಗೆ ದಿನಾಲು ತಿರುಗಾಡಲು ತೊಂದರೆ ಆಗುತ್ತದೆ ಎಂದು ಹೇಳಿದರು.
ಈ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಬೀದರ ಸಹಾಯಕ ಆಯುಕ್ತರಾದ ಲವೀಶ್ ಓರ್ಡಿಯಾ. ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಚಂದ್ರಕಾAತ ಪೂಜಾರ,ಡಿವೈಎಸ್ಪಿ ಶಿವನಗೌಡ ಪಾಟೀಲ, ಬೀದರ ನಗರಸಭೆ ಆಯುಕ್ತರಾದ ಶಿವರಾಜ ರಾಠೋಡ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕಿನ ತಹಶಿಲ್ದಾರರು ಹಾಗೂ ಇತರೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.