ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಸುಳ್ಳು ಜಾತಿ ಪ್ರಮಾಣಪತ್ರ ವಿರೋಧಿ ಹೋರಾಟ ಸಮಿತಿಯ ನೂತನ ಪದಾಧಿಕಾರಿಗಳ ನೇಮಕ
ನಗರದ ಮಯೂರಾ ಬರೀದ್ ಶಾಹಿ ಹೋಟೆಲ್ ನಲ್ಲಿ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಕುಮಾರ ಮೂಲಭಾರತಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬೀದರ ಜಿಲ್ಲಾ ನೂತನ ಸಮಿತಿಯನ್ನು ಪುನರ್ ರಚನೆ ಮಾಡಿ ಪದಾಧಿಕಾರಿಗಳ ನೇಮಕ ಮಾಡಲಾಗಿದೆ. ಸಮಿತಿಯ ಜಿಲ್ಲಾ ಗೌರಧ್ಯಕ್ಷರಾಗಿ ಉಮೇಶಕುಮಾರ ಸ್ವಾರಳ್ಳಿಕರ್, ಜಿಲ್ಲಾಧ್ಯಕ್ಷರಾಗಿ ಅಭಿ ಕಾಳೆ, ಕಾರ್ಯಾಧ್ಯಕ್ಷರಾಗಿ ಚಿತ್ರಾ ಪೂಜಾರಿ ರವರನ್ನು ನೇಮಕ ಮಾಡಲಾಯಿತು.
ಸಭೆಯಲ್ಲಿ ಮಹೇಶ ಗೋರನಾಳಕರ್, ಸಂತೋಷ ಏಣಕೂರ, ರಾಜಕುಮಾರ ಗೂನ್ನಳಿ,ತುಕಾರಾಮ ಗೌರೆ, ರವಿ ಭೂಸಂಡೆ, ಬಸವರಾಜ ಮೇತ್ರೆ,ನರಸಪ್ಪಾ ಸರ್ ಅಂಬೇಡ್ಕರ್ ಬೌದ್ದೆ, ಅರುಣ ವರ್ಮಾ, ಮಾರುತಿ ಏಣಕೂರ, ನರಸಿಂಗ್ ಮಿರಾಗಂಜ್ ಇನ್ನಿತರರು ಉಪಸ್ಥಿತರಿದ್ದರು ಎಂದು ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ ಗೋರನಾಳಕರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದಾರೆ