ಕಲಬುರಗಿ

ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು……ಸುರೇಶ ಲೇಂಗಟಿ

ದೇಶದಲ್ಲಿರುವ ಪ್ರತಿಯೊಬ್ಬರೂ ನಮ್ಮ ದೇಶದ ಐತಿಹಾಸಿಕ ಹಿನ್ನೆಲೆ, ಸಾಹಿತ್ಯ, ಕಲೆ, ಶಿಲ್ಪಕಲೆ, ಆಚಾರ ,ವಿಚಾರ ತಿಳಿಸುವಲ್ಲಿ ಪತ್ರಗಾರ ಇಲಾಖೆಯ ಕೊಡುಗೆ ಅಪಾರವಾಗಿದೆ ಕಲಬುರಗಿ ಕೇಂದ್ರಿಯ ವಿವಿಯ ಇತಿಹಾಸ ಪ್ರಾಧ್ಯಾಪಕ ಡಾ.ಆರ್.ಅರ್ಜುನ ಹೇಳಿದರು.

ಮಂಗಳವಾರ ಕಮಲಾಪುರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಕರ್ನಾಟಕ ರಾಜ್ಯ ಪತ್ರಗಾರ ಇಲಾಖೆ, ವಿಭಾಗೀಯ ಕಛೇರಿ ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಆಧುನಿಕ ಕರ್ನಾಟಕದ ಚರಿತ್ರೆ‌ ಮತ್ತು ಪತ್ರಗಾರದ ದಾಖಲೆಗಳ ಕುರಿತು
ಒಂದು ದಿನದ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಸುಮಾರು ನೂರು ವರ್ಷಗಳಿಗಿಂತ ಹೆಚ್ಚಿನ ಅವಧಿಯ ಖಚಿತವಾದ ಇತಿಹಾಸ ತಿಳಿಯಪಡಿಸಲು ಸಾವಿರಾರು ಅಧಿಕಾರಿಗಳು, ಸಂಶೋಧಕರ ಶ್ರಮದ ಪ್ರತಿಫಲವಾಗಿದೆ,
ಬ್ರಿಟಿಷ್ ರ ಆಡಳಿತ ವ್ಯವಸ್ಥೆಯಲ್ಲಿ ಅಧಿಕಾರಿ ಪ್ರಾನ್ಸಿಸ್ ಬರ್ನಲ್ ಸಸ್ಯ ರಾಶಿಗಳ‌ ಸಂಗ್ರಹ‌ ಮಾಡಿ ಆಧಾರ ಒದಗಿಸಿದರು,

ಹೈದ್ರಾಬಾದ್ ನಿಜಾಮರ ಆಡಳಿತ…. ರಾಯಚೂರಿನ ಕೆಲ ಭಾಗಗಳಲ್ಲಿ ತಾಮ್ರ & ಬಂಗಾರದ ಮೈನ್ಸ್ ಆರಂಭವಾದವು,
ತದ ನಂತರ ದೇಶಾದ್ಯಂತ
ಚಿನ್ನದ ನಿಕ್ಷೇಪ ಹಾಗೂ ಚಿನ್ನದ ಗಣಿಗಾರಿಕೆ ಮೂಲ ಕಂಡುಕೊಳ್ಳಲಾಯಿತು, ಪತ್ರಾಗಾರ ಇಲಾಖೆಯ ನಿರಂತರ ಶ್ರಮದ ಪ್ರತಿಫಲವಾಗಿ
ಕಲಬುರಗಿ ಪತ್ರಗಾರ ಇಲಾಖೆಯ ಹಿರಿಯ ಸಹಾಯಕ ಡಾ.ವಿರಶೆಟ್ಟಿ ಮಾತನಾಡಿ ನಾನು ಇಲಾಖೆಗೆ ಬಂದ ಬಳಿಕ ಲಕ್ಷಾಂತರ ಸಂಖ್ಯೆಯ ದಾಖಲೆಗಳ ಸಂಗ್ರ ಮಾಡಿದ್ದೇನೆ, ಕಾರಣಾಂತರದಿಂದ ಇಲ್ಲಿಯ ವರೆಗೆ ಕನ್ನಡ ಭಾಷೆಗೆ ಭಾಷಾಂತರ ಗೊಂಡಿಲ್ಲ ಎಂದರು.ಕಮಲಾಪುರ ಕಾಲೇಜಿನ ಪ್ರಾಚಾರ್ಯೆ ಡಾ ಅಮೃತಾ ಕಟಕೆ ಅಧ್ಯಕ್ಷತೆ ವಹಿಸಿದ್ದರು.

ಗೊಷ್ಠಿ -೧ ಕಲ್ಯಾಣ ಕರ್ನಾಟಕ; ಹೊರರಾಜ್ಯಗಳ ಪತ್ರಗಾರದ ದಾಖಲೆಗಳು ಕುರಿತು ಗೋಷ್ಠಿಯಲ್ಲಿ ಮಹಾರಾಷ್ಟ್ರ ವಿದ್ಯಾಪೀಠ ಪುಣೆಯ ಇತಿಹಾಸ ಪ್ರಾಧ್ಯಾಪಕಿ ಡಾ.ನಳಿನಿ ವಾಘ್ಮೋರೆ ವಿಶೇಷ ಉಪನ್ಯಾಸ ನೀಡಿದರು,ಕಮಲಾಪುರ ಕಾಲೇಜಿನ ಪ್ರಾಚಾರ್ಯೆ ಡಾ ಅಮೃತಾ ಕಟಕೆ ಅಧ್ಯಕ್ಷತೆ ವಹಿಸಿದ್ದರು,

ನಿವೃತ್ತ ಶಿಕ್ಷಕ ಪುಂಡಲಿಕರಾವ ಚಿರಡೆ , ಮಹಾಗಾಂವ ಡಿಗ್ರಿ ಕಾಲೇಜಿನ ಪ್ರಾಂಶುಪಾಲ ಡಾ.ಶರಣಪ್ಪ ಮಾಳಗಿ,
ಕಮಲಾಪುರ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಸುರೇಶ ಲೇಂಗಟಿ, ಕಲಬುರಗಿ ಮಹಿಳಾ ಕಾಲೇಜಿನ ಸಹ ಪ್ರಾಧ್ಯಾಪಕ ಮಲ್ಲಿಕಾರ್ಜುನ ಚಕ್ಕಿ, ಮಾತನಾಡಿದರು.

ಈ ಸಂದರ್ಭದಲ್ಲಿ ಚಿತ್ತಾಪುರ ಸರಕಾರಿ ಡಿಗ್ರಿ ಕಾಲೇಜಿನ ಪ್ರಾಂಶುಪಾಲ ಡಾ.ಶಿವಶರಣಪ್ಪ ಬಿರಾದರ, ಭಾಲ್ಕಿ ಸರಕಾರಿ ಡಿಗ್ರಿ ಕಾಲೇಜಿನ ಪ್ರಾಂಶುಪಾಲ ಡಾ.ಚಂದ್ರಶೇಖರ ಬಿರಾದರ, ಫರತಾಬಾದ ಡಿಗ್ರಿ ಕಾಲೇಜಿನ ಪ್ರಾಚಾರ್ಯೆ ಡಾ.ಇಂದುಮತಿ ಪಾಟೀಲ, ಕಲಬುರಗಿ ಸರಕಾರಿ ಡಿಗ್ರಿ ಕಾಲೇಜಿನ ನಿವೃತ್ತ ಉಪನ್ಯಾಸಕ ಅರುಣಕುಮಾರ ನರೋಣಕರ, ಕಮಲಾಪುರ ಕಾಲೇಜಿನ
ಡಾ.ಶಾಂತಾ ಅಸ್ಟಿಗೆ, ಡಾ.ರಮೇಶ ಪೋತೆ, ನಿವೃತ್ತ ಶಿಕ್ಷಕ ಪುಂಡಲಿಕರಾವ ಚಿರಡೆ, ಮಾಜಿ ತಾಪಂ ಸದಸ್ಯ ಅಮೃತ ಗೌರೆ, ಡಾ.ನೀತಾ ಭೋಸ್ಲೆ,ಡಾ.ರವೀಂದ್ರ ಕುಂಬಾರ, ಡಾ.ನಿವೇದಿತಾ ಸ್ವಾಮಿ, ಸತೀಶಕುಮಾರ, ಇತರರು ಇದ್ದರು.

ಡಾ.ಜಗದೇವಪ್ಪ ಧರಣಿ ಪ್ರಾಸ್ತಾವಿಕ ವಾಗಿ ಮಾತನಾಡಿದರು,
. ಡಾ. ಮಹಮ್ಮದ್ ಯೂನುಸ್‌ ಸ್ವಾಗತಿಸಿದರು, ಡಾ.ಜ್ಯೋತಿ ಕಿರಣಗಿ ವಂದಿಸಿದರು.

Ghantepatrike kannada daily news Paper

Leave a Reply

error: Content is protected !!