ಪಂ. ಪುಟ್ಟರಾಜ ಸಾಹಿತ್ಯ ಪುರಸ್ಕಾರಕ್ಕೆ ಪುಸ್ತಕ ಆಹ್ವಾನ
ಗದಗ: ಪೂಜ್ಯರ ಅಭಿಮಾನಿ ಭಕ್ತರ ಮಹಾ ಬಳಗವಾದ ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯು, ‘ತ್ರಿಭಾಷಾ ಕವಿ’ ಗುರು ಪುಟ್ಟರಾಜರ ಸಾಹಿತ್ಯ ಸೇವೆಯನ್ನು ಸ್ಮರಿಸಿಕೊಳ್ಳುವ ಘನ ಉದ್ದೇಶದಿಂದ, ಕಳೆದ 23 ವರ್ಷಗಳಿಂದಲೂ ಪಂ. ಪುಟ್ಟರಾಜ ಸಾಹಿತ್ಯ ಪುರಸ್ಕಾರ ರಾಜ್ಯ ಪ್ರಶಸ್ತಿ ನೀಡುತ್ತಾ ಬಂದಿದೆ. ಅದರಂತೆ ಈ ವರ್ಷವೂ ಕೂಡಾ ಈ ಪ್ರಶಸ್ತಿಗಾಗಿ 2023-24 ಸಾಲಿನಲ್ಲಿ ಪ್ರಕಟವಾದ, ಕನ್ನಡ, ಹಿಂದಿ ಮತ್ತು ಸಂಸ್ಕøತ ಭಾಷೆಯ ಸಾಹಿತ್ಯದ ಎಲ್ಲಾ ಪ್ರಕಾರಗಳ ಕೃತಿಗಳನ್ನು ಆಹ್ವಾನಿಸಲಾಗಿದೆ. ಆದರೆ, ಈ ಪ್ರಶಸ್ತಿಗೆ ಕನ್ನಡದ ಕೃತಿಗಳನ್ನು ಮಾತ್ರ ಆಯ್ಕೆ ಮಾಡಲಾಗುವುದು ಹಿಂದಿ ಮತ್ತು ಸಂಸ್ಕøತ ಕೃತಿಗಳಲ್ಲಿ ಉತ್ತಮ ಕೃತಿ ಆಯ್ಕೆಮಾಡಿ ಉತ್ತಮ ಕೃತಿ ಕರ್ತರಿಗೆ ಪುಟ್ಟರಾಜ ಸಾಹಿತ್ಯ ಸಮ್ಮಾನ ನೀಡಲಾಗುವದು.
ಪಂ. ಪುಟ್ಟರಾಜ ಸಾಹಿತ್ಯ ಪುರಸ್ಕಾರ ರಾಜ್ಯ ಪ್ರಶಸ್ತಿಯು 5 ಸಾವಿರ ರೂ ನಗದು, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಪ್ರಶಸ್ತಿಗೆ ಆಯ್ಕೆಯಾದ ಕೃತಿ ಕರ್ತರಿಗೆ ಡಾ. ಪಂ. ಪುಟ್ಟರಾಜರ ಪುಣ್ಯಸ್ಮರಣೋತ್ಸವದ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು ಮತ್ತು ಇದೇ ಸಂದರ್ಭದಲ್ಲಿ ಪ್ರಶಸ್ತಿಗೆ ಸಮೀಪದ ಪ್ರತಿ ಸ್ಪರ್ದಿಯಾದ ವಿವಿದ ಪ್ರಕಾರದ 10 ಕೃತಿಗಳನ್ನು ಗುರುತಿಸಿ ವರ್ಷದ ಶ್ರೇಷ್ಠ ಕೃತಿ ರತ್ನ ಸಮ್ಮಾನ ನೀಡಿ ಗೌರವಿಸಲಾಗುವುದು. ಎಂದು ಸೇವಾ ಸಮಿತಿಯ ಕಾರ್ಯಕಾರಿಣಿ ಸದಸ್ಯರು ಮತ್ತು ಸಾಹಿತ್ಯ ಪುರಸ್ಕಾರ ಆಯ್ಕೆ ಸಮಿತಿಯ ಸದಸ್ಯ ಸಂಚಾಲಕರೂ ಆಗಿರುವ, ಆಕಾಶವಾಣಿ ದೂರದರ್ಶನ ಕಲಾವಿದೆ ಡಾ. ಸುಮಾ ಹಡಪದ ಹಳಿಯಾಳ ಇವರು ಪತ್ರಿಕಾ ಪ್ರಕಟಣೆ ಮೂಲಕ ವಿನಂತಿಸಿಕೊಂಡಿದ್ದಾರೆ.
ಆಸಕ್ತ ಲೇಖಕರು ತಮ್ಮ ಭಾವಚಿತ್ರ ಸಹಿತ ಪರಿಚಯ ಪತ್ರ, ಎಪ್ರೀಲ್ 1, 2023 ರಿಂದ 2024 ಮಾರ್ಚ 31 ರ ಒಳಗಾಗಿ ಪ್ರಕಟವಾದ 3 ಕೃತಿಗಳೊಂದಿಗೆ 10 ಜುಲೈ 2024 ರ ಒಳಗಾಗಿ ತಲುಪುವಂತೆ ಕಳಿಸಿಕೊಡಲು ಕೋರಲಾಗಿದೆ. ಪುಸ್ತಕಗಳನ್ನು ಕಳಿಸಿಕೊಡುವ ವಿಳಾಸ, ಸಿ. ಕೆ. ಹೆಚ್ ಶಾಸ್ತ್ರೀ (ಕಡಣಿ) ಸದಸ್ಯರು: ಪಂ. ಪುಟ್ಟರಾಜ ಸಾಹಿತ್ಯ ಪುರಸ್ಕಾರ ಪ್ರಶಸ್ತಿ ಆಯ್ಕೆ ಸಮಿತಿ ‘ಗಿರಿಜಾ ನಿವಾಸ’ ಪಂಚಾಕ್ಷರಿ ನಗರ 3ನೆಯ ಅಡ್ಡರಸ್ತೆ ಗದಗ-582101.