ಪಂಚಗವ್ಯ ಉಚಿತ ತಪಾಸಣೆ ಶಿಬಿರ ಇಂದು
ಬೀದರ್: ಗೋ ಸೇವಾ ಗತಿ ವಿಧಿ ಕರ್ನಾಟಕ ಉತ್ತರ ಪ್ರಾಂತ ಹಾಗೂ ನಾಗೋರಾದ ಕಾಮಧೇನು ಗೋಶಾಲೆ ವತಿಯಿಂದ ನಗರದ ಮಾಧವನಗರದ ಮುಕ್ತಿ ಧಾಮ ಮಠದಲ್ಲಿ ಜೂನ್ 19 ರಂದು ಬೆಳಿಗ್ಗೆ 11 ರಿಂದ ಸಂಜೆ 4 ರ ವರೆಗೆ ಪಂಚಗವ್ಯ ಉಚಿತ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ.
ಖ್ಯಾತ ಆಯುರ್ವೇದ ಮತ್ತು ಪಂಚಗವ್ಯ ತಜ್ಞ ಡಾ. ಡಿ.ಪಿ. ರಮೇಶ ಅವರು ರಕ್ತದೊತ್ತಡ, ಮಧುಮೇಹ, ಸೋರಿಯಾಸಿಸ್, ಕ್ಯಾನ್ಸರ್ ಮೊದಲಾದ ರೋಗಗಳ ತಪಾಸಣೆ ಮಾಡುವರು. ಅಕ್ಯುಪ್ರೇಶರ್ ಪರಿಣಿತ ಶ್ರೀಕಾಂತ ಮೋದಿ ಸಹ ಶಿಬಿರದಲ್ಲಿ ಪಾಲ್ಗೊಳ್ಳುವರು.
ಹೆಸರು ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗೆ ಕಾಮಧೇನು ಗೋಶಾಲೆ ಸಂಚಾಲಕರೂ ಆದ ಗೋ ಉತ್ಪನ್ನಗಳ ತಯಾರಕ ಶಿವಕುಮಾರ ಹಿರೇಮಠ (ಮೊ: 7411993300) ಅಥವಾ ಸಿ.ಬಿ. ರೆಡ್ಡಿ (9449829468) ಅವರನ್ನು ಸಂಪರ್ಕಿಸಬಹುದು ಎಂದು ಕಾಮಧೇನು ಗೋಶಾಲೆ ಪ್ರಕಟಣೆ ತಿಳಿಸಿದೆ.