ಬೀದರ್

ನೆಲದ ಸಂಸ್ಕøತಿ ಪವಿತ್ರವಾದದ್ದು ಈ ಪರಂಪರೆಯನ್ನು ಉಳಿಸೋಣ : ಅಧ್ಯಕ್ಷ ಗೊಲ್ಲಹಳ್ಳಿ

ಬೀದರ್:ಶ್ರಮ ಮತ್ತು ಜನಪದ ಒಟ್ಟಿಗೆ ಬೆಳೆದಿದ್ದೆ ಜಾನಪದವು ಇಂದು ಮೊಬೈಲ್ ಹಾವಳಿಯಿಂದ ಮಾಯವಾಗುತ್ತಿದ್ದು ಅದಕ್ಕೆ ಮರುಜೀವ ತುಂಬುವ ಕೆಲಸ ಮಾಡಲಾಗುವುದು ಎಂದು ನೂತನ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಶಿವಪ್ರಸಾದ ಗೊಲ್ಲಹಳ್ಳಿ ನುಡಿದರು.
ಅವರು ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದಿಂದ ಕರ್ನಾಟಕ ಜಾನಪದ ಅಕಾಡೆಮಿಗೆ ನೂತನವಾಗಿ ಅಧ್ಯಕ್ಷರಾಗಿ ನೇಮಕಗೊಂಡು ಬೀದರ ಜಿಲ್ಲೆಗೆ ಪ್ರಥಮ ಬಾರಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಜಾನಪದದ ಶ್ರೇಷ್ಠ ಪದಗಳ ಮುಂದೆ ಸಿನೆಮಾ ರಂಗ ಎನು ಇಲ್ಲ ಆದರೂ ಕೂಡ ಜನರು ಜನಪದ ಮರೆಯುತಿದ್ದಾರೆ ಎಂದರು.
ನೆಲದ ಸಂಸ್ಕøತಿ ಪವಿತ್ರವಾದದ್ದು ನಮ್ಮ ಪರಂಪರೆಯ ಆಧಾರದ ಮೇಲೆ ಸಮಾಜವನ್ನು ಕಟ್ಟಿದ್ದಾರೆ ಜಾತಿ ಸಮಾನತೆಯ ಮನೋಭಾವ ಹೊಂದಿರುವ ಜಾನಪದ ಸಮಸ್ಯೆಗಳನ್ನು ಬಗೆಹರಿಸುವ ಕೆಲಸವನ್ನು ಅಕಾಡೆಮಿ ಅಧ್ಯಕ್ಷನ್ನಾಗಿ ನನ್ನ ಜಾವಾಬ್ದಾರಿ ಎಂದು ಭಾವಿಸಿದ್ದೇನೆ ಎಂದರು.
ಅಕಾಡೆಮಿ ಅಧ್ಯಕ್ಷರಾಗಿ ಇಡಿ ರಾಜ್ಯದಲ್ಲಿರುವ ಜಾನಪದ ಕಲಾ ಪ್ರಕಾರಗಳು ಹಾಗೂ ವಾದ್ಯಗಳಿಗೆ ಮತ್ತೆ ಮರುಜೀವ ತುಂಬಬೇಕಾಗಿದೆ. ಇದು ಬಸವಣ್ಣ ನಡೆದಾಡುವ ನೆಲವಾಗಿದ್ದರಿಂದ ಸಾಧು, ಶರಣ ವಚನಕಾರರ ಮಾತುಗಳನ್ನು ಬಿತ್ತುವ ಪ್ರಕ್ರಿಯೆಗೆ ಪ್ರಥಮಾಧ್ಯತೆ ಕೊಡುತ್ತೇವೆ ಎಂದರು.
ಕಲ್ಯಾಣ ಕರ್ನಾಟಕ ಭಾಗದ ಕಲಾವಿದರಿಗೆ ಹೆಚ್ಚಿನ ಅವಕಾಶ ನೀಡುವುದಲ್ಲದೇ ಈ ಭಾಗದ ಕಲಾವಿದರಿಗೆ ರಾಜ್ಯ ಮಟ್ಟದಲ್ಲಿ ಪರಿಚಯಿಸುವ ಕಾರ್ಯ ಮಾಡಲಾಗುವುದು ಎಂದು ಭರವಸೆ ನೀಡಿದರು.
ಬೀದರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈ ನೆಲದ ಸಂಸ್ಕೃತಿ ಜನಪದ ಸಂಸ್ಕೃತಿಯಾಗಿದೆ ಹೀಗಾಗಿ ಸಾಂಸ್ಕೃತಿಕ ರಾಯಭಾರಿ ಎಂದರೆ ಜನಪದ ಕಲಾವಿದರಾಗಿದ್ದಾರೆ ಎಂದರು.
ಜಾನಪದ ಕಲಾವಿದರು ದೊಡ್ಡ ಸಾಂಸ್ಕೃತಿಕರಿದ್ದರು ಕೂಡ ಇವರಿಗೆ ಅನೇಕ ಸಮಸ್ಯೆಗಳಿವೆ ಹೀಗಾಗಿ ಅವರ ಬದುಕು ಮಾತ್ರ ಬಡವಾಗಿದೆ. ಶಿವಪ್ರಸಾದ ಗೊಲ್ಲಹಳ್ಳಿ ಅಧ್ಯಕ್ಷರಾಗಿ ಜಾನಪದ ಕಲಾವಿದರ ಸಮಸ್ಯೆಗಳನ್ನು ಬಗೆಹರಿಸಿ ಅವರಿಗೆ ಸೌಲಭ್ಯಗಳನ್ನು ನೀಡುವ ಮೂಲಕ ತಮ್ಮ ಅವಧಿಯ ಹೆಜ್ಜೆ ಗುರುತನ್ನು ಬಿಟ್ಟು ಹೊಗಿ ಎಂದು ಮನವಿ ಮಾಡಿದರು.
ಹುಮನಾಬಾದ ತಾಲೂಕು ಪಂಚಾಯತ ಮಾಜಿ ಅಧ್ಯಕ್ಷ ರಮೇಶ ಡಾಕುಳಗಿ ಅವರು ಶಿವಪ್ರಸಾದ ಗೋಲ್ಲಹಳ್ಳಿ ಅವರು ನಡೆದು ಬಂದ ದಾರಿ ಹಾಗೂ ಅವರ ಜೀವನ ಚರಿತ್ರೆ ಕುರಿತು ಮಾತನಾಡು ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಯ ಕಲಾವಿದರ ಬೇಡಿಕೆಗಳನ್ನು ಈಡೇರಿಸುವ ಮೂಲಕ ಇವರಿಗೆ ನ್ಯಾಯ ಒದಗಿಸಿ ಅಲ್ಲದೇ ವಿಜಯಕುಮಾರ ಸೋನಾರೆ ಅವರನ್ನು ಮತ್ತೋಂದು ಅವಧಿಗೆ ಜಾನಪದ ಅಕಾಡೆಮಿಗೆ ಸದಸ್ಯರನ್ನಾಗಿ ಮುಂದುವರಿಸಿ ಎಂದು ಮನವಿ ಮಾಡಿದರು.
ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷರಾದ ವಿಜಯಕುಮಾರ ಸೋನಾರೆ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತನಾಡಿ, ಕಲಾವಿದರ ಮಾಸಾಶನ ವಯಸ್ಸು 58 ರಿಂದ 50ಕ್ಕೆ ಇಳಿಸಬೇಕು. ಕಲಾವಿದರು ಯಾವುದೇ ಘಟನೆಯಲ್ಲಿ ಮೃತರಾದರೆ ಅವರ ಕುಟುಂಬಕ್ಕೆ 5 ರಿಂದ 10 ಲಕ್ಷ ಪರಿಹಾರ ನೀಡಬೇಕು. ನೀಜವಾದ ಕಲಾವಿದರಿಗೆ ಮಾಸಾಶನ ಸಿಗುವಂತಾಗಬೇಕು ಅವರಿಗೆ ಯಾವುದೇ ಪ್ರಮಾಣ ಪತ್ರಗಳನ್ನು ತರಬೇಕೆಂಬ ಷರತ್ತಿನಿಂದ ವಿನಾಯಿತಿ ನೀಡಬೇಕು ಸೇರಿದಂತೆ ಅನೇಕ ಬೇಡಿಕೆಗಳನ್ನು ಇಟ್ಟರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಶಿಂದೆ, ಡಿಎಸ್ಎಸ್ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಭೌದ್ದೆ, ರೇವಣಸಿದ್ದಪ್ಪ ಜಲಾದೆ, ಮುಖಂಡರಾದ ಫನಾರ್ಂಡಿಸ್ ಹಿಪ್ಪಳಗಾಂವ, ರಾಜಕುಮಾರ ಬನ್ನೇರ್, ಶಂಭುಲಿಂಗ ವಾಲ್ದೋಡ್ಡಿ, ಸಿಜಿಕೆ ಪ್ರಶಸ್ತಿ ಪುರಸ್ಕೃತ ಅನಿಲ ಬಿರಾದಾರ, ಹಿರಿಯ ಮಹಿಳಾ ಕಲಾವಿದೆ ಸಂಗಮ್ಮ ಇದ್ದರು.
ಇದೇ ಸಂದರ್ಭದಲ್ಲಿ ಹಿರಿಯ ರಂಗ ಕಲಾವಿದ ಅನೀಲ ಬಿರಾದರ ಅವರಿಗೆ 2024 ನೇ ಸಾಲಿನ ಸಿ.ಜಿ.ಕೆ ರಂಗ ಪುರಸ್ಕಾರ ಪ್ರದಾನ ಮಾಡಲಾಯಿತು.
ಒಕ್ಕೂಟದ ಪದಾಧಿಕಾರಿಗಳಾದ ಸುನೀಲ ಕಡ್ಡೆ, ದೇವಿದಾಸ ಚಿಮಕೊಡ, ಏಸುದಾಸ ಅಲಿಂಬರ, ಬಕ್ಕಪ್ಪ ದಂಡಿನ್, ಸಂಗಮೇಶ ಬೆಲ್ದಾಳೆ ಸೇರಿದಂತೆ ಜಿಲ್ಲೆಯ, ಸಾಹಿತಿಗಳು, ಜಾನಪದ ಕಲಾವಿದರು ಭಾಗವಹಿಸಿದರು.

Ghantepatrike kannada daily news Paper

Leave a Reply

error: Content is protected !!