ಬೀದರ್

ನೂತನ ಬೀದರ ವಿಶ್ವವಿದ್ಯಾಲಯದಲ್ಲಿ ಸ್ನಾತಕ ಪದವಿಯ ಫಲಿತಾಂಶದ ಸಂಭ್ರಮ

ಕರ್ನಾಟಕದ ಕಿರೀಟ ಬೀದರ ಜಿಲ್ಲೆಗೆ ನೂತನ ಬೀದರ ವಿಶ್ವವಿದ್ಯಾಲಯವು ವರದಾನವಾಗಿ ದೊರೆತಿರುವುದು ಹೆಮ್ಮೆಯ ಸಂಗತಿ. ಕೇವಲ ಒಂದು ವರ್ಷದ ಪ್ರಾಯದಲ್ಲಿರುವ ವಿಶ್ವವಿದ್ಯಾಲಯದ ಆಡಳಿತ ಅತ್ಯಂತ ಕ್ರಿಯಾಶೀಲವಾಗಿ ಮುಂದುವರೆಯುತ್ತಿರುವುದು ಸಮಾಧಾನಕರ ಸಂಗತಿ. ಪಠ್ಯಕ್ರಮವು ವೇಳಾಪಟ್ಟಿಯಂತೆ ಸಮಯಕ್ಕೆ ತಕ್ಕಂತೆ ಬೋಧನೆ ಹಾಗೂ ನಿಗದಿತ ದಿನಾಂಕದಂದು ಪದವಿ ಪರೀಕ್ಷೆಗಳನ್ನು ನಡೆಸಿದ ಕೀರ್ತಿಗೆ ಪಾತ್ರವಾಗಿದೆ. ಈಗ ಇನ್ನೊಂದು ಹೆಜ್ಜೆ ಮುಂದೆ ಎಂಬಂತೆ ಪ್ರಥಮ ಸೆಮೆಸ್ಟರ್ ಪದವಿಯ ಫಲಿತಾಂಶವು ಪ್ರಕಟಣೆಯಾಗುತ್ತಿರುವ ಸಂತೋಷದ ಘಳಿಗೆ. ಬೀದರ ವಿಶ್ವವಿದ್ಯಾಲಯದ ಸ್ನಾತಕ ಪದವಿಯ ಫಲಿತಾಂಶವನ್ನು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಘೋಷಿಸಲಾಯಿತು.

ಪದವಿ ಪರೀಕ್ಷೆಯ ಫಲಿತಾಂಶ ಘೋಷಣೆಯ ಐತಿಹಾಸಿಕ ಸಂದರ್ಭದಲ್ಲಿ ನೂತನ ವಿಶ್ವವಿದ್ಯಾಲಯದ ಪ್ರಥಮ ಕುಲಪತಿಗಳಾದ ಪ್ರೊ.ಬಿ.ಎಸ್.ಬಿರಾದಾರ ಹಾಗೂ ಬೀದರ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಶ್ರೀ ನಾಗಭೂಷಣ ಮಡೆಪ್ಪಾ ಕಮಠಾಣೆ, ಶ್ರೀ ಶಾಂತಲಿಂಗ ಸಾವಳಗಿ, ಹಾಗೂ ಮೌಲ್ಯಮಾಪನ ಕುಲಸಚಿವರಾದ ಪ್ರೊ.ಪರಮೇಶ್ವರ ನಾಯ್ಕ.ಟಿ ಹಾಗೂ ಕುಲಸಚಿವರಾದ ಶ್ರೀ ಮಹ್ಮದ್ ಶಕೀಲ್‌ರವರು ಹಾಗೂ ವಿಶೇಷಾಧಿಕಾರಿಗಳಾದ ಡಾ.ರವೀಂದ್ರನಾಥ ಗಬಾಡಿಯವರು ಪಾಲ್ಗೊಂಡಿದ್ದರು. ಸಮಾರಂಭದಲ್ಲಿ ವಿಶ್ವವಿದ್ಯಾಲಯದ ಅಧ್ಯಾಪಕ, ಅಧ್ಯಾಪಕೇತರರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಸಿಹಿ ಹಂಚಿ ಐತಿಹಾಸಿಕ ಸಮಾರಂಭಕ್ಕೆ ಸಾಕ್ಷಿಯಾದರು.

Ghantepatrike kannada daily news Paper

Leave a Reply

error: Content is protected !!