ನೂತನ ಜಿಲ್ಲಾಧ್ಯಕ್ಷರು ರಾಜೇಂದ್ರ ಮಣಿಗೆರೆ.
ಬೀದರ್: ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿ ಸಂಘದ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ರಾಜೇಂದ್ರಕುಮಾರ ಮಣಗೇರೆ ಆಯ್ಕೆಯಾಗಿದ್ದಾರೆ.ಜಿಲ್ಲಾ ಮಾಧ್ಯಮ ವಕ್ತಾರ ಶರದ ಘಂಟೆ.
ನಗರದ ಮೈಲೂರು ರಸ್ತೆಯಲ್ಲಿ ಇರುವ ವಿದ್ಯಾಶ್ರೀ ಪಬ್ಲಿಕ್ ಸ್ಕೂಲ್‍ನಲ್ಲಿ ನಡೆದ ಅನುದಾನ ರಹಿತ ಖಾಸಗಿ ಶಾಲೆಗಳ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಸದಸ್ಯರ ಸಭೆಯಲ್ಲಿ ಜಿಲ್ಲಾ ಘಟಕದ ಪದಾಧಿಕಾರಿಗಳನ್ನು ಸರ್ವ ಸಮ್ಮತಿಯಿಂದ ಆಯ್ಕೆ ಮಾಡಲಾಯಿತು.
ಜಿಲ್ಲಾ ಘಟಕ: ರೇವಣಸಿದ್ದಪ್ಪ ಜಲಾದೆ (ಗೌರವಾಧ್ಯಕ್ಷ), ಗುರುನಾಥ ರೆಡ್ಡಿ (ಪ್ರಧಾನ ಕಾರ್ಯದರ್ಶಿ).
ಬೀದರ್ ಉತ್ತರ ಘಟಕ: ಸಂದೀಪ್ ಶೆಟಕಾರ್ (ಅಧ್ಯಕ್ಷ).
ಬೀದರ್ ದಕ್ಷಿಣ ಘಟಕ: ಸೈಯದ್ ಅಹಮ್ಮದ್(ಅಧ್ಯಕ್ಷ), ಬಸವರಾಜ ಬಶೆಟ್ಟಿ (ಕಾರ್ಯದರ್ಶಿ).
ಔರಾದ್ ತಾಲ್ಲೂಕು ಘಟಕ: ಸಂಜುಕುಮಾರ ಶೆಟಕಾರ್ (ಅಧ್ಯಕ್ಷ).
ಬಸವಕಲ್ಯಾಣ ತಾಲ್ಲೂಕು ಘಟಕ: ಧನರಾಜ ದೊಡ್ಡಮನಿ (ಅಧ್ಯಕ್ಷ).
ಹುಮನಾಬಾದ್ ತಾಲ್ಲೂಕು ಘಟಕ: ಸುರೇಂದ್ರ ಹುಡಗಿಕರ್ (ಅಧ್ಯಕ್ಷ), ದೇವರಾಜ ದೊಡ್ಡಮನಿ (ಕಾರ್ಯದರ್ಶಿ).
ಸಂಘದ ಕಲಬುರಗಿ ವಿಭಾಗ ಅಧ್ಯಕ್ಷ ಸುನೀಲ್ ಹುಡುಗಿ, ಪ್ರಧಾನ ಕಾರ್ಯದರ್ಶಿ ಅರುಣಕುಮಾರ ಪಾಂಚಾಳ್ ಸಭೆಯ ನೇತೃತ್ವ ವಹಿಸಿದ್ದರು.