ನಿವೇಶನ ರಹಿತ ಪತ್ರಕರ್ತರಿಗೆ ಸರ್ಕಾರದಿಂದ ಸೈಟ್ ನೀಡಬೇಕೆಂದು : ಸಚಿವ ಈಶ್ವರ ಖಂಡ್ರೆ ಅವರಿಗೆ ಮನವಿ
ಬೀದರ್: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೀದರ್ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಕೆ ಗಣಪತಿ ಅವರು ಕಳೆದ ಒಂದು ವರ್ಷ ಜಿಲ್ಲಾಧ್ಯಕ್ಷರಾಗಿ ಮಾಡಿರುವ ಕಾರ್ಯ ರಾಜ್ಯ ಸಂಘಕ್ಕೆ ತೃಪ್ತಿ ತಂದಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ರಾಜ್ಯ ಘಟಕದ ಅಧ್ಯಕ್ಷರಾದ ಶಿವಾನಂದ ತಗಡೂರು ಹೇಳಿದರು.
ಸೋಮವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೀದರ್ ಜಿಲ್ಲಾ ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿರುವ ಅವರು, ಬೀದರ್ ಜಿಲ್ಲಾ ಸಂಘ ಇಷ್ಟು ವರ್ಷ ಹುಟ್ಟಿ ಒಂದು ಅಕೌಂಟ್ ತೆಗೆಯಲು ಸಾಧ್ಯವಾಗಲಿಲ್ಲ. ಆದರೆ ಡಿ.ಕೆ ಗಣಪತಿ ಹಾಗೂ ಶಿವಕುಮಾರ ಸ್ವಾಮಿ ಜೊತೆಗೂಡಿ ಖಾತೆ ತೆಗೆದು ಅದರ ಮುಖೇನ ವ್ಯವಹರಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.
ಹಿAದೆ ೨೦೦೬ರಲ್ಲಿ ಹಾಲಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿರುವ ಬಸವರಾಜ ಕಾಮಶೆಟ್ಟಿ ಅವರು ರಾಜ್ಯ ಸಮ್ಮೇಳನ ಮಾಡಿ ಜಿಲ್ಲಾ ಸಂಘದ ಘನತೆ ಹೆಚ್ಚಿಸಿದರು. ಆದರೆ ಅಶೋಕಕುಮಾರ ಕರಂಜಿ ಅವರು ಸಂಘ ನಿಭಾಯಿಸುವಲ್ಲಿ ಸ್ವಲ್ಪ ಎಡವಿದರೂ ಸಂಘದಲ್ಲಿಯೇ ಉಳಿದುಕೊಳ್ಳುವ ಮನಸ್ಸು ಮಾಡಿರುವುದು ಸಂತಸದ ಸಂಗತಿ ಎಂದರು.
ಜಿಲ್ಲೆಯಲ್ಲಿ ಸಂಘದ ಗುರುತಿನ ಚೀಟಿ ಇನ್ನು ಕೆಲವರಿಗೆ ದೊರೆತಿಲ್ಲವೆಂಬ ಕೂಗು ನಮ್ಮ ಗಮನಕ್ಕೆ ಬಂದಿದ್ದು, ಆಯಾ ತಾಲೂಕಿನ ಅಧ್ಯಕ್ಷ-ಪ್ರಧಾನ ಕಾರ್ಯದರ್ಶಿಗಳು ನೇರವಾಗಿ ನಮ್ಮ ಗಮನಕ್ಕೆ ತನ್ನಿ. ಅದನ್ನು ಸರಿ ಪಡಿಸೋಣ. ಇಲ್ಲಿ ಅಧಿಕಾರ ಮುಖ್ಯವಲ್ಲ, ನಾವು ಮಾಡುವ ಕಾರ್ಯ ಬಹು ಮುಖ್ಯ. ನಾವೆಲ್ಲ ಪಾತ್ರಧಾರಿಗಳಷ್ಟೆ. ನಾವಿದ್ದರೂ ಸಂಘ ಇರುತ್ತದೆ, ಇಲ್ಲದಿದ್ದರೂ ಅದು ತನ್ನಿಂದ ತಾನೆ ನಡೆಯುತ್ತದೆ. ತಾಲೂಕು ಸಮಘದವರು ನೀವು ನಿರ್ಭಯವಾಗಿ ನಿಮ್ಮ ಕಾರ್ಯ ಮಾಡಿಕೊಂಡು ಹೋಗಿ. ನಿಮಗೆ ಸಮಸ್ಯೆಗಳೆನಾದರೂ ಇದ್ದರೆ ರಾಜ್ಯ ಉಪಾಧ್ಯಕ್ಷರು ಹಾಗೂ ಈ ಜಿಲ್ಲೆಯ ಉಸ್ತುವಾರಿಗಳಾದ ಭವಾನಿಸಿಂಗ್ ಠಾಕೂರ್ ಅವರ ಗಮನಕ್ಕೆ ತನ್ನಿ ಎಂದವರು ತಿಳಿಸಿದರು.
ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ನಿವೇಶನ ರಹಿತ ಪತ್ರಕರ್ತರಿಗೆ ಸರ್ಕಾರದಿಂದ ಸೈಟ್ ನೀಡಬೇಕೆಂದು ಈಗಾಗಲೇ ಈ ಜಿಲ್ಲೆಯ ಉಸ್ತುವಾರಿ ಮಂತ್ರಿಗಳು ಹಾಗೂ ರಾಜ್ಯದ ಅರಣ್ಯ, ಪರಿಸರ ಹಾಗೂ ಜೀವಶಾಸ್ತç ಸಚಿವ ಈಶ್ವರ ಖಂಡ್ರೆ ಅವರಿಗೆ ಮನವಿ ಮಾಡಲಾಗಿದೆ. ಒ.ಬಿ.ಸಿ ಪತ್ರಕರ್ತರ ಜಾಹಿರಾತಿನ ಸಮಸ್ಯೆ ಸ್ವಲ್ಪ ದಿನಗಳಲ್ಲಿ ಬಗೆಹರಿಯಲಿದೆ. ಗ್ರಾಮೀಣ ಭಾಗದ ಪತ್ರಕರ್ತರ ಬಸ್ ಪಾಸ್ ಯಾವ ರೀತಿ ನೀಡಬೇಕೆಂಬ ಮಾನದಂಡ ಸದ್ಯದಲ್ಲೆ ಆರಂಭವಾಗಲಿದೆ. ತಾಲೂಕಿನ ಪದಾಧಿಕಾರಿಗಳು ನೈಜ ಪತ್ರಕರ್ತರ ಯಾದಿ ಸಿದ್ದಪಡಿಸಿ ಜಿಲ್ಲಾ ಸಂಘದ ಮೂಲಕ ರಾಜ್ಯ ಘಟಕಕ್ಕೆ ಕಳುಹಿಸಿಸುವಂತೆ ಕರೆ ನೀಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷರು ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಭವಾನಿಸಿಂಗ್ ಠಾಕೂರ್ ಮಾತನಾಡಿ, ಸಂಘಟನೆ ವಿಚಾರದಲ್ಲಿ ನಾವು ಮುಖ್ಯರಲ್ಲ, ನಮ್ಮ ಕಾರ್ಯವೈಖರಿ ಮುಖ್ಯ. ಹಾಗಾಗಿ ನಮ್ಮ ಕಾರ್ಯಾವಧಿಯಲ್ಲಿ ನಮ್ಮ ಹೆಜ್ಜೆ ಗುರುತುಗಳು ಬಿಟ್ಟು ಹೋದರೆ ಮುಂದಿನ ಪತ್ರಕರ್ತರಿಗೆ ಮಾದರಿಯಾಗುತ್ತದೆ. ಇದು ನಮ್ಮ ಮನೆ ಇದ್ದಂತೆ, ನಮ್ಮ ಭಿನ್ನಾಭಿಪ್ರಾಯಗಳು ಬೀದಿಗೆ ಬರುವುದು ಒಳ್ಳೆಯ ಲಕ್ಷಣವಲ್ಲ ಎಂದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀನಿವಾಸ ಚೌದ್ರಿ, ಸದಸ್ಯರಾದ ರಮೇಶ ರೆಡ್ಡಿ, ರಾಚಯ್ಯ ಸ್ವಾಮಿ, ಕಾರ್ಯದರ್ಶಿ ಪ್ರಥ್ವಿರಾಜ, ಸುನಿಲ ಕುಲಕರ್ಣಿ, ತಾಲೂಕು ಅಧ್ಯಕ್ಷರುಗಳಾದ ಮಾರ್ಥಂಡ ಜೋಷಿ, ಶಿವಕುಮಾರ ಮುಕ್ತೆದಾರ ಹಾಗೂ ಇತರರು ತಮ್ಮ ಅಭಿಪ್ರಾಯ ಮಂಡಿಸಿದರು.
ಸAಘದ ಜಿಲ್ಲಾಧ್ಯಕ್ಷ ಡಿ.ಕೆ ಗಣಪತಿ, ಅಶೋಕಕುಮಾರ ಕರಂಜಿ, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಬಸವರಾಜ ಕಾಮಶೆಟ್ಟಿ, ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಷ್ಟಿçÃಯ ಕಾರ್ಯಕಾರಿಣಿ ಸದಸ್ಯರಾದ ಅಪ್ಪಾರಾವ ಸೌದಿ, ದೀಪಕ ಮನ್ನಳ್ಳಿ, ಸಂಘದ ಹಿರಿಯ ಸದಸ್ಯರಾದ ಆನಂದ ದೇವಪ್ಪ, ಜಿಲ್ಲಾ ಉಪಾಧ್ಯಕ್ಷರಾದ, ನಾಗಶೆಟ್ಟಿ ಧರಂಪುರ, ಜಿಲ್ಲಾ ಕಾರ್ಯಕಾರಿಣಿ ಸದಸ್ಯರು, ಎಲ್ಲ ತಾಲೂಕುಗಳ ಅಧ್ಯಕ್ಷ, ಪದಾಧಿಕಾರಿಗಳು, ಇತರೆ ಸದಸ್ಯರು ಸಭೆಯಲ್ಲಿ ಹಾಜರಿದ್ದರು. ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ಸರ್ವರನ್ನು ಸ್ವಾಗತಿಸಿದರು.