ನಿರ್ಣಾಯಕರು ಉತ್ತಮ ಪ್ರತಿಭೆಗಳನ್ನು ಗುರುತಿಸುವಂತಾಗಲಿ – ಲೋಖಂಡೆ
ಭಾಲ್ಕಿ: ಪ್ರತಿಭಾ ಕಾರಂಜಿಯಂತಹ ಸ್ಪರ್ಧೇಗಳಲ್ಲಿ ನಿರ್ಣಾಯಕರು ಯಾವುದೇ ತಾರತಮ್ಯ ಮಾಡದೇ ಉತ್ತಮ ಪ್ರತಿಭೆಗಳನ್ನು ಗುರುತಿಸುವಂತಾಗಬೇಕು ಎಂದು ತಾಲೂಕು ಯುವ ಮುಖಂಡ ಶಿವಕುಮಾರ ಲೋಖಂಡೆ ಹೇಳಿದರು.
ಪಟ್ಟಣದ ಶಾರದಾ ಪಬ್ಲಿಕ್ ಶಾಲೆಯಲ್ಲಿ, ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ಕ್ಷೇತ್ರ ಸಮನ್ವಯ ಕೇಂದ್ರದ ಸಿಆರ್ಪಿ ವತಿಯಿಂದ ಬುಧವಾರ ಆಯೋಜಿಸಿದ್ದ ಭಾಲ್ಕಿಕೇಂದ್ರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳ ಪ್ರತಿಭೆ ಗುರುತಿಸುವುದೇ ಪ್ರತಿಭಾ ಕಾರಂಜಿಯ ಮೂಲ ಉದ್ದೇಶವಾಗಿದೆ. ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಅವರಲ್ಲಿಯೇ ಹುದುಗಿಸದೇ, ಅವರಲ್ಲಿರುವ ಸೂಪ್ತ ಪ್ರತಿಭೆಯನ್ನು ಹೊರತರುವ ನಿಟ್ಟಿನಲ್ಲಿ ಸರ್ಕಾರ ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮ ಆಯೋಜಿಸುತ್ತಿದೆ. ಹೀಗಾಗಿ ನಿರ್ಣಾಯಕರು ಯಾವುದೇ ತಾರತಮ್ಯ ಮಾಡದೇ ಉತ್ತಮ ಪ್ರತಿಭೆಗಳನ್ನು ಗುರುತಿಸಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಬೆಳೆಯುವಂತೆ ಮಾಡಬೇಕು ಎಂದು ಸಹಲೆ ನೀಡಿದರು.
ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಮಲ್ಲಿನಾಥ ಸಜ್ಜನ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಉತ್ತಮ ಪ್ರತಿಭೆಗಳಿವೆ, ಅವುಗಳನ್ನು ಗುರುತಿಸಿ ಜಗತ್ತಿಗೆ ಪ್ರಸ್ತುತ ಪಡಿಸುವ ಕಾರ್ಯ ಶಿಕ್ಷಕರದ್ದಾಗಿದೆ. ಪ್ರತಿಭಾ ಕಾರಂಜಿಯಲ್ಲಿ ನಡೆಯುವ ಎಲ್ಲಾ ಸ್ಪರ್ಧೆಗಳಲ್ಲಿಯೂ ಭಾಗವಿಸಿದ ವಿದ್ಯಾರ್ಥಿಗಳಿಗೆ ಪ್ರೊತ್ಸಾಹ ನೀಡುವ ಕಾರ್ಯವಾಗಬೇಕು ಎಂದು ಹೇಳಿದರು.
ಶ್ರೀವಿಶ್ವ ಶಾರದಾ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ವಂಸತ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಕಿ ಪ್ರತಿಬಾ ವಸಂತ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಸಂಯೋಜಕಿ ಕುಸುಮಕುಮಾರಿ ರಡ್ಡಿ, ನಿರಂಜಪ್ಪ ಪಾತ್ರೆ, ಭೀಮಣ್ಣಾ ಕೊಂಕಣೆ, ಅನೀಲಕುಮಾರ ಗಾಯಕವಾಡ, ಗೋವಿಂದರಾವ ಬಿರಾದಾರ, ಮೈತ್ರಾದೇವಿ ಚಂದ್ರಕಾಂತ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಯರಾಜ ದಾಬಶೆಟ್ಟಿ, ಬಸವಪ್ರಭು ಸೋಲಾಪೂರೆ, ಗಣಪತಿ ಬೋಚರೆ, ಸಂತೋಷ ಬಿಜಿಪಾಟೀಲ, ಸ್ವಾಮಿ ಭದ್ರೇಶ ಗುರಯ್ಯಾ, ಅಶೋಕ ಜೋಳದಪಕೆ, ಉತ್ತಮ ಸಿಂದೆ, ಸೋಮನಾಥ ವರದಾ, ನೀಲಕಂಠ ಕುರ್ಣೆ, ಸಂದೀಪ ವಾಡೆಕರ, ಸವಿತಾ ಗಬಾಳೆ, ಸಂತೋಷಿಕುಮಾರಿ ವಾಡೆ, ಜಾಲಿಂದರ ಆಳವಾಯಿ ಉಪಸ್ಥಿತರಿದ್ದರು.
ಸಿಆರ್ಪಿ ಅಂಬರೀಶ ಖಂಡ್ರೆ ಸ್ವಾಗತಿಸಿದರು. ವಿಠಲರಾವ ಬಿರಾದಾರ ನಿರೂಪಿಸಿದರು. ಅಶೋಕ ಜೊಳದಪಕೆ ವಂದಿಸಿದರು.