ಬೀದರ್

ನಿತ್ಯ ಯೋಗಾಸನ ಕ್ರಮದಿಂದ ಶಾರೀರಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಸಾಧ್ಯ – ಶ್ರೀ ಗಂಗಾಧರ ಶಿವಾಚಾರ್ಯ ಮಹಾಸ್ವಾಮಿಜಿ

ಬೀದರಃ-11, ಸೂರ್ಯ ನಮಸ್ಕಾರ ಮತ್ತು ಯೋಗಾಸನದಿಂದ ನಮ್ಮ ಆರೋಗ್ಯ ಕಾಪಾಡಿಕೊಂಡು ಸದೃಢ ವ್ಯಕ್ತಿತ್ವ ನಿರ್ಮಿಸಿಕೊಳ್ಳಲು ಸಾಧ್ಯವಾಗುತ್ತದೆ. ದಿನನಿತ್ಯ ನಾವು ಮಾಡುವ ಯೋಗಾಸನ ಕ್ರಮದಿಂದ ನಮ್ಮ ಶಾರೀರಿಕ ಸ್ವಾಸ್ತ್ಯ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಯಾವುದೇ ರೋಗ-ರುಜಿನಗಳು ಬಾರದಂತೆ ಯೋಗಾಸನ ಸಹಾಯ ಮಾಡುತ್ತದೆ ಎಂದು ಬೀದರ ನಗರದ ಲಾಡಗೇರಿ ಹಿರೇಮಠ ಸಂಸ್ಥಾನದ ಶ್ರೀ ಗಂಗಾಧರ ಶಿವಾಚಾರ್ಯ ಮಹಾಸ್ವಾಮಿಜಿಗಳು ನುಡಿದರು.
ಅವರು ದಿನಂಕ 11-8-2023 ರಂದು ಬೀದರ ನಗರದ ಲಾಡಗೆರಿ ಹಿರೇಮಠದ ಶ್ರೀ ಪರ್ವತಲಿಂಗ ಶಿವಾಚಾರ್ಯ ಪೂರ್ವ ಪಾಥರ್Àಮಿಕ ಶಾಲೆಯಲ್ಲಿ ಸೂರ್ಯ ನಮಸ್ಕಾರ ಸಂಘದ ವತಿಯಿಂದ ಆಯೋಜಿಸಿದ ‘ಸೂರ್ಯನಮಸ್ಕಾರ ಹಾಗೂ ಯೋಗಾಸನದ ಲಾಭಗಳು’ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತಿದ್ದರು.
ಅವರು ಮುªಂದುವರೆದು ಮಾತನಾಡಿ ನಾವು ದಿನನಿತ್ಯ ನಮ್ಮಕೆಲಸ-ಕಾರ್ಯಗಳ ಜೊತೆಗೆ ಯೋಗಾಸನವೂ ತಪ್ಪದೆ ಮಾಡಬೇಕು ಎಂದು ಕರೆ ನೀಡಿದರು.
ಸಂಸ್ಥೆಯ ಆಡಳಿತಾಧಿಕಾರಿಗಳಾದ ಸಿದ್ರಾಮಯ್ಯ ಹಿರೇಮಠ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮಕ್ಕಳಲ್ಲಿ ಚಿಕ್ಕಂದಿನಿಂದಲೇ ಯೋಗಾಸನ ತರಬೇತಿ ಅತ್ಯವ್ಯಶಕವಾಗಿದೆ ಈ ನಿಟ್ಟಿನಲ್ಲಿ ಸೂರ್ಯ ನಮಸ್ಕಾರ ಸಂಘವು ಮಾಡುತ್ತಿರುವ ಇಂತಹ ಯೋಗಾಸನ ಕುರಿತು ಜಾಗೃತಿ ಕಾರ್ಯಕ್ರಮಗಳು ಜನಮೆಚ್ಚುಗೆಯ ಕಾರ್ಯವಾಗಿದೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದ ಆಯೋಜಕ ಹಾಗೂ ಸೂರ್ಯನಮಸ್ಕಾರ ಸಂಘದ ಅಧ್ಯಕ್ಷರಾದ ಕಾಮಶೆಟ್ಟಿ ಚಿಕಬಸೆ ಅವರು ಮಾತನಾಡಿ, ಮಕ್ಕಳಲ್ಲಿ ಶಿಕ್ಷಣದ ಜೊತೆಗೆ ನೈತಿಕ ಪಾಠ ಹಾಗೂ ಯೋಗಸನವು ಹೇಳಿಕೊqಬೇಕು. ಇದರಿಂದ ಮಕ್ಕಳಲ್ಲಿ ಆತ್ಮಸ್ಥೈರ್ಯ ಮೂಡುತ್ತದೆ. ಇಂದಿನ ಮಕ್ಕಳೆ ನಾಳಿನ ಭವ್ಯ ಭಾರತದ ಪ್ರಜೆಗಳು, ಪಾಲಕರು ಮತ್ತು ಶಿಕ್ಷಕರು ಮಕ್ಕಳಿಗೆ ಶಾಲಾ ಪಠ್ಯದ ಜೊತೆಗೆ ನೀತಿ ಪಾಠ ಹಾಗೂ ಯೋಗಾಸನದಂತ ಶಾರೀರಿಕ ಚಟುವಟಿಕೆಗಳ ಬಗ್ಗೆ ಗಮನ ಹರಿಸಬೇಕೆಂದರು. ಈ ನಿಟ್ಟಿನಲ್ಲಿ ನಮ್ಮ ಸಂಘವು ಸದಾ ಕ್ರೀಯಶೀಲವಾಗಿದೆ ಎಂದು ವಿವರಿಸಿದರು..
ಶಿಕ್ಷಕಿಯರಾದ ಜೈಶ್ರೀ, ಅಶ್ವಿನಿ ಡಿ., ಪ್ರೀಯಾ, ಮಹಾದೇವಿ, ಸಂತೋಷಿ ಅವರುಗಳು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕಾಮಶೆಟ್ಟಿ ಚಿಕಬಸೆಯವರಿಗೆ ಸಂಸ್ಥೆಯ ಪರವಾಗಿ ಶಾಲು ಹೊದಿಸಿ ಸನ್ಮಾನಿಸಲಾಯಿತು. ಶಾಲೆಯ ಮುಖ್ಯೋಪಾಧ್ಯಾಯಿನಿ ಲಕ್ಷ್ಮಿ ಕಾಜಿ, ಸ್ವಾಗತಿಸಿದರು. ಕೊನೆಯಲ್ಲಿ ಅಶ್ವಿನಿ ದಯಾನಂದ ಸ್ವಾಮಿ ವಂದಿಸಿದರು.

Ghantepatrike kannada daily news Paper

Leave a Reply

error: Content is protected !!