ನಾಳೆ ಬ್ರಹ್ಮಕುಮಾರಿ ಶಿವಶಕ್ತಿ ಭವನದಲ್ಲಿ ಪತ್ರಕರ್ತರಿಗೆ ವಿಶೇಷ ಸನ್ಮಾನ
ಬೀದರ್: ನಾಳೆ(28/08/2024) ಬುಧವಾರ ಮಧ್ಯಾಹ್ನ 12 ಗಂಟೆಗೆ ನಗರದ ರಾಂಪುರೆ ಬಡಾವಣೆಯಲ್ಲಿರುವ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ರಾಜಯೋಗ ಕೇಂದ್ರ ಶಿವಶಕ್ತಿ ಭವನದಲ್ಲಿ ಜಿಲ್ಲೆಯ ಪತ್ರಕರ್ತರಿಗೆ ರಕ್ಷಾ ಬಂಧನದ ಪ್ರಯುಕ್ತ ವಿಶೇಷ ಸನ್ಮಾನ ಹಾಗೂ ಬ್ರಹ್ಮಾಭೋಜನ ಆಯೋಜಿಸಲಾಗಿದೆ.
ಬ್ರಹ್ಮಾಕುಮಾರಿ ಶಿವಶಕ್ತಿ ಭವನದಲ್ಲಿ ಇದೇ ಮೊದಲ ಬಾರಿಗೆ ಈ ಅಪರೂಪದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಪತ್ರಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ಬ್ರಹ್ಮಾಕುಮಾರಿ ಕೇಂದ್ರ ಶಿವಶಕ್ತಿ ಭವನದ ಸಂಚಾಲಕಿ ಬಿ.ಕೆ ಸುನಂದಾ ಬಹೆನ್ ಜಿ ಪ್ರಕಟಣೆ ಮೂಲಕ ಕೋರಿರುತ್ತಾರೆ.