ಬೀದರ್

ನಾಟ್ಯಶ್ರೀ ನೃತ್ಯಾಲಯದ ಕಲಾವಿದರಿಂದ ಕಲಾ ಪ್ರದರ್ಶನ ಮನ ರಂಜಿಸಿದ ಸಾಂಸ್ಕøತಿಕ ಸಂಜೆ

ಬೀದರ್: ನಾಟ್ಯಶ್ರೀ ನೃತ್ಯಾಲಯವು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಕಾರದೊಂದಿಗೆ ಇಲ್ಲಿಯ ಗುಂಪಾ ರಸ್ತೆಯಲ್ಲಿನ ರಿಲಯನ್ಸ್ ಟ್ರೆಂಡ್ಸ್ ಕೆಳಗಡೆ ಇರುವ ಮಹಾಲಕ್ಷ್ಮಿ ಕಾಂಪ್ಲೆಕ್ಸ್‍ನ ನಾಟ್ಯಶ್ರೀ ಸಾಂಸ್ಕøತಿಕ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಸಾಂಸ್ಕøತಿಕ ಸಂಜೆ ಸಭಿಕರ ಮನ ರಂಜಿಸಿತು.
ಕಲಾವಿದರು ಸಂಗೀತ, ನೃತ್ಯ, ನೃತ್ಯ ರೂಪಕಗಳ ಮೂಲಕ ಕಲಾ ಲೋಕವನ್ನೇ ಸೃಷ್ಟಿಸಿದರು. ವಿಷ್ಣುವಿನ ಹತ್ತು ಅವತಾರಗಳ ದಶಾವತಾರ ನೃತ್ಯ ರೂಪಕ, ಜಕ್ಕಣಕ ಜಾನಪದ ನೃತ್ಯ, ಗಣೇಶ ಸ್ತುತಿ ಮೊದಲಾದವು ನೆರೆದವರ ಕರತಾಡನಕ್ಕೆ ಪಾತ್ರವಾದವು.
ಪೂರ್ವಿಕ ಮತ್ತು ತಂಡದವರು ದಶಾವತಾರ ನೃತ್ಯ ರೂಪಕ, ಅಮೃತಾ ಶೆಟ್ಟಿ ಹಾಗೂ ತಂಡ ಶಾಸ್ತ್ರೀಯ ಸಂಗೀತ, ಮಹೇಶಕುಮಾರ ಮತ್ತು ತಂಡ ಜಾನಪದ ಗೀತೆ, ರಶ್ಮಿ, ಶ್ವೇತಾ ಹಾಗೂ ತಂಡ ಭರತನಾಟ್ಯ, ನಿತ್ಯ ಮತ್ತು ತಂಡ ಸಮೂಹ ನೃತ್ಯ, ರಾಜೇಶ್ವರಿ ಹಾಗೂ ತಂಡದವರು ಜಾನಪದ ನೃತ್ಯ ಪ್ರದರ್ಶಿಸಿದರು.
ವ್ಯಕ್ತಿತ್ವ ವಿಕಸನ ತರಬೇತುದಾರರೂ ಆದ ಉಡುಪಿಯ ಉಪನ್ಯಾಸಕಿ ಅಕ್ಷಯಾ ಗೋಖಲೆ ಉದ್ಘಾಟಿಸಿದರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಂಜೀವಕುಮಾರ ಅತಿವಾಳೆ, ಜ್ಞಾನಸುಧಾ ವಿದ್ಯಾಲಯದ ನಿರ್ದೇಶಕ ಮುನೇಶ್ವರ ಲಾಖಾ, ಡಾ. ಲೀಲಾವತಿ ನಿಂಬೂರೆ, ಚಿಂತಕಿ ಶೀಲಾ ಪಾಟೀಲ ಗಾದಗಿ ಮುಖ್ಯ ಅತಿಥಿಯಾಗಿದ್ದರು. ನಾಟ್ಯಶ್ರೀ ನೃತ್ಯಾಲಯದ ಅಧ್ಯಕ್ಷೆ ರಾಣಿ ಸತ್ಯಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ರಾಮಕೃಷ್ಣ ಸಾಳೆ, ನಾರಾಯಣರಾವ್ ಮುಖೇಡಕರ್, ಕೆ. ಗುರುಮೂರ್ತಿ, ಭಾರತಿ ವಸ್ತ್ರದ್, ಪ್ರತಿಭಾ ಚಾಮಾ ಮತ್ತಿತರರು ಇದ್ದರು.
ಭಾನುಪ್ರಿಯ ಅರಳಿ ಪ್ರಾರ್ಥನೆ ನಡೆಸಿಕೊಟ್ಟರು. ನಾಟ್ಯಶ್ರೀ ನೃತ್ಯಾಲಯದ ನಿರ್ದೇಶಕ ಸತ್ಯಮೂರ್ತಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಮೂಲಗೆ, ದೇವಿದಾಸ ಜೋಶಿ ನಿರೂಪಿಸಿದರು. ರಾಘವೇಂದ್ರ ಅಡಿಗ ವಂದಿಸಿದರು.

Ghantepatrike kannada daily news Paper

Leave a Reply

error: Content is protected !!