ನಾಗಮಣಿ ಮಣಗೆ ಅವರ 9ನೇ ಪುಣ್ಯಸ್ಮರಣೆ ಪ್ರಯುಕ್ತ ರೋಟರಿ ಕ್ಲಬ್ ಸದಸ್ಯರು ಸಸಿ ನೆಟ್ಟರು
ಬೀದರ್: ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ವತಿಯಿಂದ ಇಲ್ಲಿಯ ಗುರುದ್ವಾರ- ಚಿಕ್ಕಪೇಟೆ ರಸ್ತೆ ವಿಭಜಕದ ಮಧ್ಯೆ ಸಸಿ ನೆಡಲಾಯಿತು.
ನಾಗಮಣಿ ಮಣಗೆ ಅವರ 9ನೇ ಪುಣ್ಯಸ್ಮರಣೆ ಪ್ರಯುಕ್ತ ವಿಭಜಕದ ನಡುವೆ ಗುರುವಾರ ಮಳೆಯಲ್ಲೇ ಕ್ಲಬ್ ಪದಾಧಿಕಾರಿಗಳು ಹಾಗೂ ಸದಸ್ಯರು ವಿವಿಧ ಬಗೆಯ ಸಸಿಗಳನ್ನು ನೆಟ್ಟರು.
ಪರಿಸರ ಸಂರಕ್ಷಣೆ ಭಾಗವಾಗಿ ಸಸಿಗಳನ್ನು ನೆಡಲಾಗಿದೆ. ಬರುವ ದಿನಗಳಲ್ಲಿ ನಗರದ ವಿವಿಧೆಡೆ ಸಸಿಗಳನ್ನು ನೆಡುವ ಉದ್ದೇಶ ಇದೆ ಎಂದು ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ಅಧ್ಯಕ್ಷ ಡಾ. ಕಪಿಲ್ ಪಾಟೀಲ ತಿಳಿಸಿದರು.
ಸ್ವರ್ಣ ಕನ್ಸ್ಟ್ರಕ್ಷನ್ಸ್ ಮುಖ್ಯಸ್ಥ ವೀರಶೆಟ್ಟಿ ಮಣಗೆ, ಕ್ಲಬ್ ಉಪಾಧ್ಯಕ್ಷ ಡಾ. ರಿತೇಶ ಸುಲೆಗಾಂವ್, ಕಾರ್ಯದರ್ಶಿ ಶಿವಕುಮಾರ ಪಾಖಾಲ್, ಖಜಾಂಚಿ ಜಯೇಶ್ ಪಟೇಲ್, ಸದಸ್ಯರಾದ ಸೂರ್ಯಕಾಂತ ರಾಮಶೆಟ್ಟಿ, ನಿತಿನ್ ಕರ್ಪೂರ, ಡಾ. ನಿತೇಶಕುಮಾರ ಬಿರಾದಾರ, ಡಾ. ಉಮೇಶ ಮಾಲಿಪಾಟೀಲ, ಸಿದ್ದು ಮಣಗೆ, ಮಹಮ್ಮದ್ ಫರ್ದಿನ್, ಡಾ. ರಘು ಕೃಷ್ಣಮೂರ್ತಿ, ಡಾ. ಶರಣ ಬುಳ್ಳಾ, ಡಾ. ಲೋಕೇಶ ಹಿರೇಮಠ, ಚೇತನ್ ಮೇಗೂರ, ದತ್ತಾತ್ರೇಯ ಪಾಟೀಲ, ಸುಧೀಂದ್ರ ಸಿಂದೋಲ್ ಮೊದಲಾದವರು ಇದ್ದರು.