ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಭದ್ರೆಶ್ವರ ಸ್ವಾಮಿಯ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯ
ಬೀದರ್: ತಾಲೂಕಿನ ಬಾವಗಿ ಗ್ರಾಮದಲ್ಲಿ ಬುಧವಾರ ಧರ್ಮಸ್ಥಳ ಸಂಘದಿಂದ ದೇವಸ್ಥಾನ ಸ್ವಚ್ಛತಾ ಕಾರ್ಯಕ್ರಮ ನಡೆಸುವ ಮೂಲಕ ಅಧಿಕ ಶ್ರಾವಣ ಮಾಸ ಆಚರಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಬಾವಗಿ ಅಕ್ಕಮಹಾದೇವಿ ಸಂಘ ಗ್ರಾಮಾಭಿವೃದ್ಧಿ ಯೋಜನೆ ಧರ್ಮಸ್ಥಳ ಸ್ವಸಹಾಯ ಸಂಘದ ಸದಸ್ಯರು ಉತ್ಸಾಹದಿಂದ ಪಾಲ್ಗೊಂಡರು. ಅತಿ ಹೆಚ್ಚು ಸಂಖ್ಯೆಯಲ್ಲಿ ಹೆಣ್ಮಕ್ಕಳು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದು ವಿಶೇಷವಾಗಿತ್ತು. ಗ್ರಾಮದ ಭದ್ರೆಶ್ವರ ಸ್ವಾಮಿಯ ದೇವಸ್ಥಾನ ವೆಂಕಟೇಶ್ವರ ದೇವಸ್ಥಾನ ಸ್ವಚ್ಛತೆ ಮಾಡಲಾಯಿತು. ಸ್ವಚ್ಛತಾ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಭದ್ರೆಶ್ವರ ಮಠದ ಶ್ರೀ ಶಿವುಕುಮಾರ ಸ್ವಾಮಿ ಮಾತನಾಡಿ, ಮೊದಲು ನಮ್ಮ ಮನೆ ಬಳಿಕ ನಮ್ಮ ನೆರೆ ಹೊರೆ ಹೀಗೆ ಗ್ರಾಮ ಸ್ವಚ್ಛವಾದಲ್ಲಿ ನಮ್ಮ ಸ್ತುಮುತ್ತಲಿನ ವಾತಾವರಣ ಆರೋಗ್ಯಕರವಾಗಿರುತ್ತದೆ. ಸ್ವಚ್ಛತೆ ಎಲ್ಲರ ಜವಾಬ್ದಾರಿ ಎಂದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಚಾಲಕಿ ಗೀತಾ ನೆಲವಾಡ ಅಕ್ಕಮಹಾದೇವಿ ಸಂಘದ ರೇಣುಕಾ ಸ್ವಾಮೀ ಪೂರ್ಣಿಮಾ ಶಾಂತಮ್ಮ ಶೋಭಾವತಿ ಗಿರಮ್ಮ ಜಗದೇವಿ ನಾಗೇಶ್ವರಿ ಜ್ಞಾನೇಶ್ವರ ಊರಿನ ಗ್ರಾಮಸ್ಥರು ಭಾಗವಹಿಸಿದ್ದರು. 9900812104