ಬೀದರ್

ಧರಿನಾಡು ಸೌಹಾರ್ದ ಸಹಕಾರ ಸಂಘದ ಕಚೇರಿಯ ಉದ್ಘಾಟನೆ

ಬೀದರ: ಆಡು ಮುಟ್ಟದ ಸೋಪ್ಪಿಲ್ ಸಹಕಾರಿ ಮುಟ್ಟದ ಕ್ಷೇತ್ರವಿಲ್ಲ ಇಂದಿನ ಪ್ರತಿಯೊಂದು ಸಮಸ್ಸೆಗೂ ಸಹಕಾರದಿಂದ ಮಾತ್ರ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಷ.ಬ್ರ.ಡಾ. ರಾಜಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಜ್ಞಾನ ಯೋಗಾಶ್ರಮ ನೌಬಾದ ಇವರು ನಗರದ ಹೆಣ್ಣು ಮಗು ವೃತ್ತದ ಹತ್ತಿರದಲ್ಲಿನ ಧರಿನಾಡು ಸಹಕಾರ ಸಂಘದ ಕಛೇರಿಉದ್ಘಾಟನ ಸಮಾರಂಭದ ದಿವ್ಯಸಾನಿಧ್ಯ ವಹಿಸಿ ಆಶಿರ್ವಚನ ನೀಡಿದರು.
ಕಛೇರಿಯ ಉದ್ಘಾಟಕರಾಗಿ ಆಗಮಿಸಿದ ರಾಜ್ಯ ಸಂಯುಕ್ತ ಸಹಕಾರಿಯ ನಿರ್ದೇಶಕ ಗುರುನಾಥ ಜ್ಯಾಂತಿಕರ್ ಮಾತನಾಡಿ ಸಹಕಾರ ಸಂಘಗಳು ಲಾಭಗಳಿಸುವ ಸಂಸ್ಥೆಗಳಾಗದೆ ಸದಸ್ಯ ಹಿತವನ್ನು ಕಾಯುವ ಸಂಸ್ಥೆಯಾಗಿ
ಕಾರ್ಯನಿರ್ವಹಿಸಬೇಕು.ಆಡಳಿತ ಮಂಡಳಿಯು ಸದಸ್ಯರಿಗೆ ಅನುಕುಲವಾಗುವ ಕಾರ್ಯಯೋಜನೆಯನ್ನು ರೂಪಿಸಿಕೊಂಡುಜಾರಿಗೊಳಿಸಬೇಕು. ಸಹಕಾರಿಯ ಸಾಲ ಪಡೆದ ಸದಸ್ಯರು ಪ್ರಾಮಾಣಿಕವಾಗಿ ಮರುಪಾವತಿ ಮಾಡುವ ಮೂಲಕ ಸಹಕಾರಿಯಬೆಳವಣಿಗಗೆ ಕಾರಣರಾಗಬೇಕು ಧರಿನಾಡು ಸಹಕಾರ ಸಂಘವು ಧರಿ ನಾಡು ಮಿರಿ ಬೆಳೆಯಲಿ ಎಂದು ಶುಭ ಕೊರಿದರು.
ಮುಖ್ಯ ಅತಿಥಿಗಳಾದಗಿ ಆಗಮಿಸಿದ ದಿಶಾ ಸಮಿತಿಯ ಸದಸ್ಯರಾದ ಶಿವಯ್ಯ ಸ್ವಾಮಿ ಮಾತನಾಡಿ ಧರಿನಾಡಿನಲ್ಲಿ ಯುವಕರ ಸಂಘ ಉತ್ತಮ ಕಾರ್ಯ ಮಾಡಿದಾರೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗು ಸಹಕಾರದಿಂದ ಸೇವೆಯನ್ನು ನೀಡುವ ಮೂಲಕ ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಶಕ್ತಿ ಇದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾದ ಖಾದಿ ಮತ್ತು ಗ್ರಾಮೀಣ ಕೈಗಾರಿಕಾ ಇಲಾಖೆಯ ಉಪನಿರ್ದೇಶಕರಾದ ರಾಜಕುಮಾರ ಪಾಟೀಲ್ ಮಾತನಾಡಿ ಗ್ರಾಮಕ್ಕೊಂದು ಪಂಚಾಯತ್ ಶಾಲೆ ಮತ್ತು ಸಹಕಾರ ಸಂಘಗಳು ಗ್ರಾಮೀಣ ಜನರ ಆಸ್ತಿಯಾಗಿದೆ ಎಂದು ತಿಳಿಸಿದರು. ಕರ್ನಾಟಕ ಸಹಕಾರಿಗಳ ತವರೂರು ದೇಶದಲ್ಲಿ ಮೊದಲು ಸಹಕಾರ ಸಂಘ ಸ್ಥಾಪನೆಯಾಗಿದ್ದು ನಮ್ಮ ಗದುಗಿನ ಕಣಗಿನಹಾಳ ಗ್ರಾಮ ಅಲ್ಲಿ ಸಿದ್ದನಗೌಡ ಸಣ್ಣರಾಮನಗೌ ಪಾಟೀಲರು ಹುಟ್ಟುಹಾಕಿದರು ಎಂದು ತಿಳಿಸಿದರು.
ಸಂಘದ ಅಧ್ಯಕ್ಷರಾದ ಶಿವಶಂಕರ ಬೆಮಳಗಿ ಮಾತನಾಡಿ ಹಿರಿಯರ ಆಶಿರ್ವಾದ ಮತ್ತು ಮಾರ್ಗದರ್ಶನದಿಂದ ಸಂಘವನ್ನು ಕಟ್ಟಲಾಗುವುದು ಸದಾ ಎಲ್ಲರು ಹಿಗೆ ಮಾರ್ಗದರ್ಶನ ನೀಡುವಂತೆ ತಿಳಿದರು. ಕಾರ್ಯಕ್ರಮದಲ್ಲಿರುವ ಸರ್ವರನ್ನು ಪ್ರವೀಣ ಮಠ ಸ್ವಾಗತಿಸಿದರು. ಅಮರನಾಥ ಬಿರಾದರ ವಂದಿಸಿದರು. ಉದ್ಘಾಟನೆಯ ಸಮಾರಂಬದಲ್ಲಿ ಸಂಘದ ನಿರ್ದೇಶಕರಾದ ಕಲ್ಲಪ್ಪ ಸೋಲಪೂರೆ, ನಾಗರಾಜ ಮಠ, ಮಹಾದೇವ ಲಾಡೆ, ಲೋಕೇಶ ಸಲಗರ, ನಾಗಭೂಷಣ ರೆಡ್ಡಿ ಅಭಿವೃದ್ದಿ ಅಧಿಕಾರಿ ವೀರಶಟ್ಟಿ, ಒಕ್ಕೂಟ ಸಿಇಓ ಅಮೃತ ಹೊಸಮನಿ ಸಂಘದ ಸದಸ್ಯರು ಉಪಸ್ಥಿತರಿದ್ದರು.

Ghantepatrike kannada daily news Paper

Leave a Reply

error: Content is protected !!