ದೇಶದ ಆಂತರಿಕ ರಕ್ಷಣೆಯ ಹೊಣೆ ಪೊಲೀಸರ ಮೇಲಿದೆ: ಜಿಲ್ಲಾಧಿಕಾರಿ ಗೋವಿಂದರೆಡ್ಡಿ
ಬೀದರ. ಅಕ್ಟೋಬರ್ 21 :- ಸೈನಿಕರು-ಪೊಲೀಸರು ಒಂದು ನಾಣ್ಯದ ಎರಡು ಮುಖಗಳಿಂದAತೆ. ದೇಶದ ಗಡಿ ರಕ್ಷಣೆಯ ಹೊಣೆ ಸೈನಿಕರ ಮೇಲಿದ್ದರೆ, ಆಂತರಿಕ ರಕ್ಷಣೆಯ ಹೊಣೆ ಪೊಲೀಸರ ಮೇಲಿದೆ. ಇಂದು ದೇಶದ ಜನರು ನೆಮ್ಮದಿಯ ನಿದ್ರೆ ಮಾಡುತ್ತಿದ್ದರೆ ಅದಕ್ಕೆ ಕಾರಣ ಪೊಲೀಸರು ಎಂದು ಜಿಲ್ಲಾಧಿಕಾರ ಗೋವಿಂದರೆಡ್ಡಿ ಹೇಳಿದರು.
ಅವರು ಶನಿವಾರ ಮಂಗಲಪೇಟ್ ಬಳಿಯ ಪೊಲೀಸ್ ಕವಾಯತ್ತು ಮೈದಾನದಲ್ಲಿ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಪೊಲೀಸ್ ಹುತಾತ್ಮರಿಗೆ ನುಡಿ ನಮನ ಸಲ್ಲಿಸಿ ಮಾತನಾಡಿದರು.
ಪೊಲೀಸರು ತಮ್ಮ ಪ್ರಾಣವನ್ನು ಒತ್ತೆ ಇಟ್ಟು ದೇಶದ ನಾಗರಿಕ ರಕ್ಷಣೆ ಹಾಗೂ ದೇಶದ ಸುಭದ್ರತೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಇಂದು ದೇಶದಲ್ಲಿ ಶಾಂತಿಯತೆ, ಉತ್ತಮ ಆಡಳಿತ, ಕಾನೂನು ಸುವ್ಯವಸ್ಥೆಗಳು ಸುವ್ಯವಸ್ಥಿತವಾಗಿ ನಡೆಯುತ್ತಿದ್ದರೆ ಅದಕ್ಕೆ ಪೊಲೀಸ್ ಇಲಾಖೆಯೆ ಕಾರಣವಾಗಿದೆ ಎಂದು ಹೇಳಿದರು.
ಇತ್ತೀಚಿಗೆ ನಮ್ಮ ರಾಜ್ಯದಲ್ಲಿ ಹೂಡಿಕೆದಾರರ ಪ್ರಮಾಣ ಹೆಚ್ಚಳವಾಗಿದೆ. ಇದಕ್ಕೆ ಪರೋಕ್ಷವಾಗಿ ಪೊಲೀಸ್ ಇಲಾಖೆಯೆ ಕಾರಣವಾಗಿದೆ. ಕರ್ನಾಟಕ ಪ್ರಸ್ತುತ ಹುಡಿಕೆ ಪ್ರಮಾಣದಲ್ಲಿ ಎರಡನೆ ಸ್ಥಾನದಲ್ಲಿದೆ. ಒಬ್ಬ ಹೂಡಿಕೆದಾರರು ಒಂದು ರಾಜ್ಯದಲ್ಲಿ ಹೂಡಿಕೆ ಮಾಡಬೇಕು ಎಂದಾದರೆ ಅವರು ಅಲ್ಲಿನ ಕಾನೂನು ಸುವ್ಯವಸ್ಥೆಯನ್ನು ಮೊದಲು ಅರಿಯುತ್ತಾರೆ ನಂತರ ಹೂಡಿಕೆ ಮಾಡುತ್ತಾರೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಮಾತನಾಡಿ, 1959ರ ಅಕ್ಟೋಬರ್ 21 ರಂದು ಭಾರತ-ಚೀನಾ ಗಡಿಭಾಗವಾದ ಲಡಾಕ್ ಪ್ರದೇಶದಲ್ಲಿ ಗಡಿ ರಕ್ಷಣೆಗಾಗಿ 20 ಸೈನಿಕರು ನಿಯೋಜನೆಗೊಂಡಿದ್ದರು. ಇದೇ ಸಂದರ್ಭದಲ್ಲಿ ಚೀನಾ ದಾಳಿನಡೆಸಿತ್ತು, ಭಾರತದ ಸೈನಿಕರ ಬಳಿ ಆಧುನಿಕ ಶಸ್ತಾçಸûçಗಳು ಇಲ್ಲದಿದ್ದರೂ ಚೀನಾ ಸೈನಿಕರ ವಿರುದ್ದ ಹೋರಾಡಿ ನಮ್ಮ 10 ಜನ ಪೊಲೀಸ್ ಯೋಧರು ವೀರ ಮರಣ ಹೊಂದಿದ್ದರು. ಅವರ ನೆನಪಿಗಾಗಿಗೆ ಪ್ರತಿ ವರ್ಷ ಅಕ್ಟೋಬರ್ 21 ರಂದು ಹುತಾತ್ಮರ ದಿನಾಚಾರಣೆಯನ್ನು ಆಚರಿಸಲಾಗುತ್ತಿದೆ. ಈ ದಿನದಂದು ನಮ್ಮ ದೇಶದ ರಕ್ಷಣೆಗಾಗಿ ಮಡಿದ ಪೊಲೀಸರಿಗೆ ಗೌರವ ಸಲ್ಲಿಸಲಾಗುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ದೇಶದಲ್ಲಿ ಕಳೆದ ವರ್ಷ ಹುತ್ಮಾತ್ಮರಾದ 189 ಜನ ಪೊಲೀಸ ಅಧಿಕಾರಿ ಹಾಗೂ ಸಿಬ್ಬಂಧಿಗಳ ಹೆಸರು ವಾಚಿಸಿ ಅವರಿಗೆ ನುಡಿ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ.ಎಂ., ಬೀದರ ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನತಿ.ಎಂ.ಎA., ಬೀದರ ಏರ್‌ಫೊರ್ಸ ಗ್ರೂಪ್ ಕಮಾಂಡರ್ ರಿತೇಶ ಶರ್ಮಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಶ ಮೆಘಣ್ಣನವರ, ಬೀದರ ಉಪ ಪೊಲೀಸ್ ಅಧೀಕ್ಷಕ ಶಿವನಗೌಡ ಪಾಟೀಲ್, ಹುಮನಾಬಾದ ಉಪ ಪೊಲೀಸ್ ಅಧೀಕ್ಷಕ ಜೆ.ಎಸ್. ನ್ಯಾಮೆಗೌಡ, ಭಾಲ್ಕಿ ಉಪ ಪೊಲೀಸ್ ಅಧೀಕ್ಷಕ ಶಿವಾನಂದ ಪವಾಡಶೇಟ್ಟಿ, ಬೀದರ ಡಿ.ಆರ್. ಉಪ ಪೊಲೀಸ್ ಅಧೀಕ್ಷಕ ಸುನೀಲ್ ಕೋಡ್ಲಿ, ಪೊಲೀಸ್ ಅಧಿಕಾರಿಗಳು ಸಿಬ್ಬಂಧಿಗಳು, ಜಿಲ್ಲೆಯ ಗಣ್ಯರು, ಸೇರಿದಂತೆ ಇತರರು ಉಪಸ್ಥಿತರಿದ್ದರು.