ದುವ್ರ್ಯಸನ ದುಶ್ಚಟಗಳ ಭಿಕ್ಷೆ ಬೇಡಿದ ಡಾ ಮಹಾಂತ ಅಪ್ಪಗಳು – ಶರಣಪ್ಪ ಮಿಠಾರೆ
ಬೀದರ: ದುವ್ರ್ಯಸನ ದುಶ್ಚಟಗಳ ಬಗ್ಗೆ ಸಾರ್ವಜನಿಕವಾಗಿ ಅರಿವು ಮೂಡಿಸಿ, ಮನಪರಿವರ್ತಿಸಿ ಜನರಲ್ಲಿನ ದುಶ್ಚಟಗಳನ್ನೆ ತಮ್ಮ ಜೋಳಿಗೆಯಲ್ಲಿ ಭಿಕ್ಷೆಯ ರೂಪದಲ್ಲಿ ಸಂಗ್ರಹಿಸಿ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದವರು ಡಾ ಮಹಾಂತ ಅಪ್ಪಗಳು ಎಂದು ಜಿಲ್ಲಾ ಬಸವಕೇಂದ್ರ ಅಧ್ಯಕ್ಷರಾದ ಶರಣಪ್ಪ ಮಿಠಾರೆ ನುಡಿದರು.
ಅವರು ರೋಟರಿ ಕ್ಲಬ್ ಬೀದರ ಸಂಸ್ಥೆ ಆಯೋಜಿಸಿದ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ನಾಡಿನೆಲ್ಲಡೆ ಹಲವಾರು ಮಠ ಪೀಠಗಳಿದ್ದು ಅಲ್ಲಿರುವ ಅನೇಕ ಪೂಜ್ಯರು ಹಣಕ್ಕಾಗಿ ಬಿಕ್ಷೆಬೇಡಿದ್ರೆ ಡಾ ಮಹಾಂತ ಶಿವಯೋಗಿಗಳು ಮಹಾಂತ ಜೋಳಿಗೆ ಮೂಲಕ ಊರು ಕೇರಿಗಳನ್ನು ತಿರುಗಿ ದುಶ್ಚಟಗಳ ಬಿಕ್ಷೆ ಬೇಡಿದಂತ ಏಕೈಕ ಸ್ವಾಮಿಜಿ ಎಂದು ಬಣ್ಣಿಸಿದರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಕಾಂತ ಕಾಡಾದಿ ಅವರು ಮಾತನಾಡಿ ಇಡಿ ಜಗತ್ತಿನಲ್ಲಿಯೇ ಪೆÇೀಲಿಯೊ ನಿರ್ಮೂಲನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರೋಟರಿ ಸಂಸ್ಥೆ ಶಿಕ್ಷಣ ಆರೋಗ್ಯ ಪರಿಸರ ಮಹಿಳಾ ಸಬಲಿಕರಣ ಮಕ್ಕಳ ಅಭಿವೃದ್ಧಿ ಸೇರಿದಂತೆ ನೂರಾರು ಜನಹಿತ ಕಾರ್ಯ ಮಾಡುತ್ತಿದೆ ಇಂದಿನ ದಿನಮಾನಗಳಲ್ಲಿ ಎಲ್ಲಂದರಲ್ಲೆ ಸಾರಾಯಿ, ಗುಟಕಾ, ಸಿಗರೇಟು ಸೇರಿದಂತೆ ಮತ್ತು ಬರಿಸುವ ಔಷಧಗಳು ಬೇಕಾಬಿಟ್ಟೆಯಾಗಿ ಮಾರಾಟ ಮಾಡುತ್ತಿದ್ದು ವಿμÉೀಷವಾಗಿ ಕಾಲೇಜು ವಿದ್ಯಾರ್ಥಿಗಳು, ಯುವಕರು ದುಶ್ಚಟಗಳಿಗೆ ಬಲಿಯಾಗಿ ಆರೋಗ್ಯದ ಜೊತೆ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ ಜಿಲ್ಲೆಯ ಎಲ್ಲಾ ಜನಪರ ಸಂಘಟನೆಗಳು ಒಂದೆಡೆ ಸೇರಿ ನಶೆ ಮುಕ್ತ ಬೀದರ ಜಿಲ್ಲೆ ಮಾಡಲು ಪಣತೊಡಬೇಕಾಗಿದೆ ಎಂದು ನುಡಿದರು ರೋಟರಿ ಕ್ಲಬ್ ಕಾರ್ಯದರ್ಶಿ ಸೋಮಶೇಖರ ಪಾಟೀಲ ಸ್ವಾಗತಿಸಿದರು ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ನಿರೂಪಿಸಿದರೆ ರೋಟರಿ ಕ್ಲಬ್ ಕೋಶಾಧ್ಯಕ್ಷ ಅನೀಲ ಮಸೂದಿ ವಂದಿಸಿದರು.