ದಿನನಿತ್ಯ ಇದರಿಂದ ಸಂಚರಿಸುವ ಸಾರ್ವಜನಿಕರು ತುಂಬಾ ತೊಂದರೆ
ಚಿಂಚೋಳಿ ವಿಧಾನಸಭಾ ಕ್ಷೇತ್ರದ ಕೋಡ್ಲಿ ಮುಖ್ಯ ರಸ್ತೆ ಆದರೆ ತಾವು ತಿಳಿದುಕೊಂಡಿರಬಹುದು ಯಾವುದೋ ಒಂದು ಹೊಲ ದಲ್ಲಿ ಕೆಸರು ಇದ್ದಿರಬಹುದು ಆದರೆ ಅದು ತಾವು ತಿಳಿದುಕೊಂಡಿರುವುದು ಅಂತೆ ಅಲ್ಲ ಇದು ಚಿಂಚೋಳಿ ಕಲ್ಬುರ್ಗಿ ಮುಖ್ಯ ರಸ್ತೆಯಾಗಿದ್ದು ಹಲವಾರು ವರ್ಷಗಳಿಂದ ಈ ರಸ್ತೆ ಕಾಮಗಾರಿಯನ್ನು ಪೂರ್ಣಗೊಂಡಿಲ್ಲ ದಿನನಿತ್ಯ ಇದರಿಂದ ಸಂಚರಿಸುವ ಸಾರ್ವಜನಿಕರು ತುಂಬಾ ತೊಂದರೆ ಅನುಭವಿಸುತ್ತಿದ್ದು, ಕೆಲ ದ್ವಿಚಕ್ರ ವಾಹನ ಸವಾರರು ಬಿದ್ದಿದ್ದು, ಲಘು ವಾಹನ ಗಳು ಸಿಕ್ಕಿಹಾಕಿಕೊಂಡಿರುವ ಎಷ್ಟೋ ಘಟನೆಗಳು ನಡೆದಿದ್ದರೂ ಕೂಡ ಇದಕ್ಕೆ ಸಂಬಂಧಪಟ್ಟ ಅಧಿಕಾರಿ ಹಾಗೂ ಗುತ್ತೇದಾರ ಅವರಿಗೆ ಕಣ್ಣಿಗೆ ಏನು ಕಾಣಿಸುತ್ತಾ ಇಲ್ಲ ಇದರಿಂದ ದಿನನಿತ್ಯ ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿ ಹಾಗೂ ಗುತ್ತೇದಾರರನ್ನು ಹಿಡಿ ಶಾಪವನ್ನು ಹಾಕುತ್ತಿದ್ದಾರೆ. ಅಶೋಕ್ ವಾಹನ ಚಾಲಕ ಪ್ರತಿಕ್ರಿಯಿಸಿ ನಾವು ಪ್ರತಿನಿತ್ಯ ಚಿಂಚೋಳಿಯಿಂದ ಕಲಬುರ್ಗಿಗೆ ಪ್ರಯಾಣ ಮಾಡಬೇಕಾಗಿದ್ದು ಈ ಕೊಡ್ಲಿ ಕ್ರಾಸ್ ದಾಟಬೇಕೆಂದರೆ ಹರಸಾಹಸ ಮಾಡಬೇಕು ಎಷ್ಟೋ ಸಾರಿ ನನ್ನ ಲಘು ವಾಹನ ಸಿಕ್ಕಿಹಾಕಿಕೊಂಡಿದ್ದು ಅದೇ ರೀತಿ ವಾಹನದ ಚೇಸಿ ಕಟ್ಟಾಗಿದ್ದು ತುಂಬಾ ಹಣ ರಿಪೇರಿಗಾಗಿ ಖರ್ಚು ಆಗಿದೆ ಆದಷ್ಟು ಬೇಗ ಈ ಮುಖ್ಯ ರಸ್ತೆಯನ್ನು ರಿಪೇರಿ ಗೊಳಿಸಿ ವಾಹನಗಳು ಸರಗವಾಗಿ ಚಲಿಸುವಂತೆ ಮಾಡಿಕೊಡಬೇಕೆಂದು ಆಗ್ರಹಿಸಿದ್ದಾರೆ.