ಬೀದರ್

ದಾನಗಳಲ್ಲಿ ಅತ್ಯಂತ ಶ್ರೇಷ್ಠದಾನ ರಕ್ತದಾನ– ಡಾ. ರಜನೀಶ್ ವಾಲಿ

ದಾನಗಳಲ್ಲಿ ಅತ್ಯಂತ ಶ್ರೇಷ್ಠದಾನ ರಕ್ತದಾನ. ರಕ್ತದಾನ ಸಂಕಷ್ಟದಲ್ಲಿರುವ ಅನೇಕ ಜೀವಗಳನ್ನು ಉಳಿಸುವಂತಹ ಮಹತ್ವದ ಕಾರ್ಯವನ್ನು ಮಾಡುತ್ತದೆ ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಡಾ. ರಜನೀಶ್ ವಾಲಿ ಅವರು ಹೇಳಿದರು.
ಇಂದು ನಗರದ ಹೈ ಕ ಶಿ ಸಂಸ್ಥೆಯ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜಿಲ್ಲಾ ಆಸ್ಪತ್ರೆ ಸಹಯೋಗದಲ್ಲಿ ವಿಶ್ವ ರಕ್ತದಾನ ದಿನದಂದು ರಕ್ತದಾನ ಶಿಬಿರವನ್ನು ಉದ್ಘಾಟಿಸಿದ ಅವರು ರಕ್ತದಾನದ ಮಹತ್ವದ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಎಲ್ಲಾ ವಿದ್ಯಾರ್ಥಿಗಳ ರಕ್ತದ ಪ್ರಮಾಣ ಪರೀಕ್ಷಿಸಿ, ಆಯ್ಕೆಯಾದ ವಿದ್ಯಾರ್ಥಿಗಳಿಂದ ರಕ್ತವನ್ನು ಸಂಗ್ರಹಿಸಲಾಯಿತು .ವಿದ್ಯಾರ್ಥಿಗಳಾದ ಚಂದ್ರಪ್ಪ ,ನಿಖಿಲ್, ರೋಹಿತ್, ಸಂಗಮೇಶ್, ಆಶಾ, ಸಾಯಿನಾಥ್ ,ನಿಂಗಪ್ಪ ಮತ್ತು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾಕ್ಟರ್ ಮಲ್ಲಿಕಾರ್ಜುನ್ ಸಿ ಕನಕಟ್ಟೆ ಹಾಗೂ ಉಪನ್ಯಾಸಕರಾದ ರಾಜಕುಮಾರ ಶಿಂದೆ ಹಾಗೂ ಪಾಂಡುರAಗ ಕುಂಬಾರ್ , ನೂರ್ ಪಾಷಾ ರಕ್ತವನ್ನು ದಾನ ಮಾಡಿದರು.
ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಉಪನ್ಯಾಸಕರದ ಡಾ. ಸಂತೋಷ್ ಕುಮಾರ್ , ಶಿಲ್ಪಾ ಹಿಪ್ಪರಗಿ , ವೀಣಾ ಜಲದೇ, ಸಿಬ್ಬಂದಿ ವರ್ಗದವರು ಹಾಗೂ ಬಿ ವಿ ಬಿ ಮಹಾವಿದ್ಯಾಲಯದ ಪ್ರಾಂಶುಪಾಲರು ಉಪಸ್ಥಿತರಿದ್ದರು .

Ghantepatrike kannada daily news Paper

Leave a Reply

error: Content is protected !!