ಬೀದರ್

ದಲಿತ ಚಳುವಳಿ ಗಾಯಕಃ ಬಕ್ಕಪ್ಪ ದಂಡಿನಗೆ ಕರ್ನಾಟಕ ಸಾಂಸ್ಕೃತಿಕ ರಾಜ್ಯ ಮಟ್ಟದ ಪ್ರಶಸ್ತಿ.

 ಬೀದರ: ಕರ್ನಾಟಕ ರಾಜ್ಯದಲ್ಲಿ ಎಲ್ಲಾ ಚಳುವಳಿಯ ತಾಯಿಬೇರು ದಲಿತ ಚಳುವಳಿ. 70 ದಶಕದಲ್ಲಿ ರಾಜ್ಯವ್ಯಾಪ್ತಿಯಲ್ಲಿ ಪ್ರೊ. ಬಿ ಕೃಷ್ಣಪ್ಪ, ನಾಡಿನ ಖ್ಯಾತ ಸಾಹಿತಿಗಳಾದ ಡಾ. ಸಿದ್ದಲಿಂಗಯ್ಯ, ದೇವನೂರು ಮಹಾದೇವಪ್ಪ, ಮಾವಳಿಶಂಕರ, ಡಿ ಜಿ ಸಾಗರ, ವೈಜಿನಾಥ ಸೂರ್ಯವಂಶಿ, ಶಂಕರ ದೊಡ್ಡಿ, ತಿಪ್ಪಣ್ಣ ಮೈಲೂರುಕರ್, ಇವರ ಜೋತೆಗೆ ಬೀದರನ ದಲಿತ ಚಳುವಳಿಯ ಹಾಡುಗಾರ, ಬಕ್ಕಪ್ಪ ದಂಡಿನ ನಾಡಿನ ಸಾಹಿತಿಗಳು ರಚನೆ ಮಾಡಿರುವ ಕ್ರಾಂತಿಕಾರಿ ಹಾಡುಗಳು ಹಾಡುವುದರ ಮೂಲಕ ನಾಲ್ಕು ದಶಕದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಸರಳ, ಸಜ್ಜನ, ಯಾವ, ಆಶೆ, ಆಕಾಕ್ಷಗಳನ್ನು ಬಯಸದ, ಸಮಾಜ ಕಾಳಜಿ ಕಳಕಳಿಯುಳ್ಳವರು. ಮೈಸೂರು ರಾಜ್ಯಕ್ಕೆ ಕರ್ನಾಟಕ ರಾಜ್ಯವೆಂದು ಐವತ್ತು ವರ್ಷದ ಸಂಭ್ರಮ ನಿಮಿತ್ತವಾಗಿ, ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕ ವತಿಯಿಂದ ರಾಜ್ಯ ಮಟ್ಟದ ಕರ್ನಾಟಕ ಸಾಂಸ್ಕೃತಿಕ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆಯೆಂದು ಪತ್ರಿಕಾ ಪ್ರಕಟಣೆಯಲ್ಲಿ ಸಂಸ್ಥೆ ಅಧ್ಯಕ್ಷ ಡಾ. ಸುಬ್ಬಣ್ಣ ಕರಕನಳ್ಳಿ ತಿಳಿಸಿದ್ದಾರೆ. ದಂಡಿನ ರವರು ಜಿಲ್ಲೆಯೊಳ್ಳಗೆ ಅಂದಿನ ಜಿಲ್ಲಾಧಿಕಾರಿ ಕೆ ರತ್ನಪ್ರಭಾ ರವರ ಜನಪರ ಕಾರ್ಯಕ್ರಮಗಳಲ್ಲಿ ಒಂದಾದ ಸಾಕ್ಷರತ ಕಾರ್ಯಕ್ರಮ. ಅಕ್ಷರದಿಂದ ವಂಚಿತರಾದವರಿಗೆ ಅಕ್ಷರ ಕಲಿಸುವ ಕಾರ್ಯಕ್ರಮ. ಸಾಕ್ಷರತದ ಅಕ್ಷರ ಚಳುವಳಿ ಹೆಗಲು ಹೊತ್ತು 20 ವರ್ಷಗಳ ಕಾಲ ಅಲ್ಪ ಸಂಬಳದಲ್ಲಿ ಹಿರಿಯ ನಾಗರಿಕರಿಗೆ ಅಕ್ಷರ ಕಲಿಸುವ ಕೆಲಸವನ್ನು ದಂಡಿನವರು ಮಾಡಿರುತ್ತಾರೆ. ದಲಿತ ಸಂಸ್ಕೃತಿಕ ಚಿಂತನೆಗೆ ಸಂಬAಧಿಸಿದ ಹಾಡುಗಳು , ಬಿದಿ ನಾಟಕಗಳು, ಗ್ರಾಮೀಣವಾದ್ಯಗಳ ಮೂಲಕ ತಂಡದೊAದಿಗೆ ಹಾಡುವ ಕಲೆ ಇವರದು. ಎನನ್ನೂ ಬಯಸದ ಉಚಿತ ಸೇವೆ ನೀಡುತ್ತಾಬಂದಿರುವ ಶ್ರೀ ಬಕ್ಕಪ್ಪ ದಂಡಿನ ರವರಿಗೆ ರಾಜ್ಯ ಮಟ್ಟದ ಕರ್ನಾಟಕ ಸಾಂಸ್ಕೃತಿಕ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

Ghantepatrike kannada daily news Paper

Leave a Reply

error: Content is protected !!