ಬೀದರ್

ದಕ್ಷಿಣ ಮತಕ್ಷೇತ್ರದ ಕಸಾಪ ಯುವ ಘಟಕಕ್ಕೆ ಪದಾಧಿಕಾರಿಗಳ ನೇಮಕ

ಕನ್ನಡ ಸಾಹಿತ್ಯ ಪರಿಷತ್ತನ್ನು ವಲಯ ಗ್ರಾಮ ಮಟ್ಟಕ್ಕೆ ಒಯ್ದು ಹೆಚ್ಚಿನ ಕಾರ್ಯ ಚಟುವಟಿಕೆಗಳಿಗೆ ಉತ್ತೇಜನ ನೀಡಲು ದಕ್ಷಿಣ ಮತಕ್ಷೇತ್ರದ ವಲಯಕ್ಕೆ ಪದಾಧಿಕಾರಿಗಳ ನೇಮಕ ಮಾಡಿ ಕನ್ನಡ ಚಟುವಟಿಕೆಗಳನ್ನು ಕ್ರಿಯಾಶೀಲ ಗೊಳಿಸಲು ನೇಮಕಾತಿ ಮಾಡಿದೆ.

ರೇವಣಪ್ಪ ಚಿಲ್ಲರ್ಗಿ ಕೋಳಾರ (ಬಿ)ರವರನ್ನು ಕಸಾಪ ಯುವ ಘಟಕಕ್ಕೆ ಗೌರವಾಧ್ಯಕ್ಷರು.
ದತ್ತು ಗುತ್ತಿ ಸಂಗೊಳಗಿ ಔರಾದ(ಎಸ್)ವಲಯ ಘಟಕಕ್ಕೆ ಅಧ್ಯಕ್ಷರಾಗಿ, ವಿಜಯಕುಮಾರ ಬಿರಾದಾರ ನೆಲವಾಡ ಔರಾದ(ಎಸ್) ಯುವ ಘಟಕಕ್ಕೆ ಅಧ್ಯಕ್ಷರಾಗಿ, ಗುರು ಪಾಂಪಡೆ ಅವರನ್ನು ಆಣದೂರ ವಲಯದ ಯುವ ಘಟಕದ ಅಧ್ಯಕ್ಷರನ್ನಾಗಿ ಆಕಾಶ ರಾಜಗಿರಾ ಅವರನ್ನು ಮನ್ನಳ್ಳಿ ವಲಯದ ಯುವ ಘಟಕದ ಅಧ್ಯಕ್ಷರಾಗಿ ಹಾಗೂ ಸಾಯಿನಾಥ ಸಿಂದಬಂದಗಿ ಆಣದೂರ ಹಾಗೂ ಮಂಜುನಾಥ ಮುದ್ದಾ ಬೇಮಳಖೇಡಾ ಬೀದರ ಯುವ ಘಟಕದ ಕಾರ್ಯದರ್ಶಿಯಾಗಿ ನೇಮಕ, ಮಹೇಶ ತಳಘಟಕರ ಸಿಕಿಂದ್ರಾಪೂರ ಇವರನ್ನು ಆಣದೂರ ವಲಯ ಕಸಾಪ ಘಟಕದ ಗೌರವ ಕಾರ್ಯದರ್ಶಿ ನೇಮಕಮಾಡಿದೆ.

ಈ ಸರಳ ಪದಾಧಿಕಾರಿಗಳ ನೇಮಕಾತಿ ಸಮಾರಂಭ ವನ್ನು ಜಿಲ್ಲಾ ಕ.ಸಾ.ಪ.ಅಧ್ಯಕ್ಷರಾದ ಸುರೇಶ ಚನ್ನಶೆಟ್ಟಿ ಅಧ್ಯಕ್ಷತೆಯಲ್ಲಿ ನೆರವೇರಿತು, ಸಮಾರಂಭದಲ್ಲಿ ಕೋಶಾಧ್ಯಕ್ಷರಾದ ಶಿವಶಂಕರ ಟೋಕರೆ ಸಂಘಟನಾ ಕಾರ್ಯದರ್ಶಿ ವೀರಶೆಟ್ಟಿ ಚನ್ನಶೆಟ್ಟಿ, ತಾ.ಉಪಾಧ್ಯಕ್ಷರಾದ ಸಿದ್ಧಾರೂಢ ಭಾಲ್ಕೆ ಹಾಗೂ ಬೀದರ ತಾಲ್ಲೂಕಿನ ಯುವ ಘಟಕದ ಅಧ್ಯಕ್ಷರಾದ ಗುರುನಾಥ ರಾಜಗಿರಾ ಬೀದರ ದಕ್ಷಿಣ ಕ್ಷೇತ್ರದ ಯುವ ಘಟಕದ ಅಧ್ಯಕ್ಷರಾದ ಬಸವರಾಜ ಬಶೆಟ್ಟಿ ನಗರ ಘಟಕದ ಯುವ ಅಧ್ಯಕ್ಷ ಸಂತೋಷ ಭಂಡೆ ಅವರ ಉಪಸ್ಥಿತಿಯಲ್ಲಿ ನೆರವೇರಿತು.

Ghantepatrike kannada daily news Paper

Leave a Reply

error: Content is protected !!