ತೆಲಂಗಾಣದ ಮಲ್ಲಯ್ಯಗಿರಿ ಆಶ್ರಮದಲ್ಲಿ ಜುಲೈ 21 ರಂದು ಡಾ. ಬಸವಲಿಂಗ ಅವಧೂತರ ಜನ್ಮದಿನ ಸಮಾರಂಭ
ಬೀದರ್: ನೆರೆಯ ತೆಲಂಗಾಣದ ಮಲ್ಲಯ್ಯಗಿರಿ ಆಶ್ರಮದಲ್ಲಿ ಜುಲೈ 21 ರಂದು ಆಶ್ರಮದ ಪೀಠಾಧಿಪತಿ ಡಾ. ಬಸವಲಿಂಗ ಅವಧೂತರ 48ನೇ ಜನ್ಮದಿನ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಡಾ. ಬಸವಲಿಂಗ ಅವಧೂತರು ಸಸಿ ನೆಡುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಲಿದ್ದಾರೆ. ಭಕ್ತರು ರುದ್ರಾಕ್ಷಿಯಿಂದ ಶ್ರೀಗಳ ತುಲಾಭಾರ ಮಾಡಲಿದ್ದಾರೆ.
ಸರಳ ಸ್ವಾಮೀಜಿಗಳೆಂದೇ ಹೆಸರಾಗಿರುವ ಅವಧೂತರು ಪರಿಸರ ಪ್ರಿಯರೂ ಆಗಿದ್ದಾರೆ.
ಧಾರ್ಮಿಕ, ಸಸಿ ನೆಡುವಿಕೆ, ಪರಿಸರ ಜಾಗೃತಿ ಮೊದಲಾದ ಸಮಾಜ ಸೇವಾ ಚಟುವಟಿಕೆಗಳ ಮೂಲಕ ತಮ್ಮ ಜನ್ಮದಿನ ಆಚರಿಸಿಕೊಂಡು ಬರುತ್ತಿದ್ದು, ಎಲ್ಲರ ಗಮನ ಸೆಳೆದಿದ್ದಾರೆ.
ಜನ್ಮದಿನ ಸಮಾರಂಭದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಆಶ್ರಮ ಟ್ರಸ್ಟ್ ಪ್ರಮುಖರು ಮನವಿ ಮಾಡಿದ್ದಾರೆ.