ಬೀದರ್

ತಾಲೂಕಾ ಕಚೇರಿ ಆಹಾರ ಶಿರಸ್ತೆದಾರ್ ಅನೀಲ ಕಾಂಬಳೆ ಆರೋಗ್ಯ ವಿಚಾರಿಸಿದ ಈಶ್ವರಸಿಂಗ್ ಠಾಕೂರ್

ಬೀದರ: ತಾಲೂಕಾ ಕಚೇರಿಯ ಆಹಾರ ಶಿರಸ್ತೆದಾರ್‍ರಾದ ಅನೀಲಕುಮಾರ ಕಾಂಬಳೆ ಅವರ ಮೇಲೆ ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳಿಗೆ ಕಾನೂನಿನ ಪ್ರಕಾರ ತಕ್ಕ ಶಿಕ್ಷೆ ವಿಧಿಸಬೇಕು. ಹಲ್ಲೆಗೊಳಗಾದ ಅನೀಲಕುಮಾರ ಕಾಂಬಳೆ ಅವರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಭಾರತೀಯ ಜನತಾ ಪಕ್ಷದ ವಿಭಾಗೀಯ ಸಹ ಪ್ರಭಾರಿಗಳು ಹಾಗೂ ಬೀದರ ವಿಧಾನಸಭಾ ಕ್ಷೇತ್ರದ ನಾಯಕ ಈಶ್ವರಸಿಂಗ್ ಠಾಕೂರ್ ತಿಳಿಸಿದರು.
ನಗರದ ಬ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅನೀಲಕುಮಾರ ಕಾಂಬಳೆಯವರಿಗೆ ಭೇಟಿಯಾಗಿ ಆರೋಗ್ಯ ವಿಚಾರಿಸಿದ ಬಳಿಕ ಪ್ರಕಟಣೆ ಮೂಲಕ ಅವರು ತಿಳಿಸಿದ್ದಾರೆ. ಇತ್ತಿಚಿಗೆ ನಗರದಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿವೆ. ಹಾಡುಹಗಲೇ ಈ ರೀತಿ ಮಾರಣಾಂತಿಕ ಹಲ್ಲೆಗಳು ನಡೆಯುತ್ತಿವೆ. ಕಾಂಬಳೆಯವರ ಮೇಲಿನ ಹಲ್ಲೆಯ ತನಿಖೆ ನಡೆಸಬೇಕು. ಮತ್ತು ಅಪರಾಧಗಳ ಸಂಖ್ಯೆ ಕಡಿಮೆಯಾಗುವಂತೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷಕರು ಹೆಚ್ಚಿನ ಕ್ರಮ ವಹಿಸಬೇಕೆಂದು ಕೋರಿದ್ದಾರೆ.

Ghantepatrike kannada daily news Paper

Leave a Reply

error: Content is protected !!