ಡಾ|| ಬಸವಲಿಂಗ್ ಪಟ್ಟದೇವರ ಶೈಕ್ಷಣಿಕ, ಆಧ್ಯಾತ್ಮಿಕ, ಸಾಮಾಜಿಕ ಸೇವೆ ಮಾಡುತ್ತಿರುವುದು ಸಮಾಜಕ್ಕೆ ಬಹುದೊಡ್ಡ ಕೊಡುಗೆ :ಡಾ|| ಮಹೇಶ ಬಿರಾದಾರ
ಬೀದರ: ನಗರದ ಬ್ರೀಮ್ಸ್ ಆಸ್ಪತ್ರೆಯಲ್ಲಿ ಡಾ|| ಬಸವಲಿಂಗ್ ಪಟ್ಟದೇವರ 74ನೇ ಹುಟ್ಟು ಹಬ್ಬ ಹಾಗೂ ಸುದೈವಿ ಮಕ್ಕಳ ದಿನಾಚರಣೆ ಪ್ರಯುಕ್ತ ಪ್ರಸಾದ ನಿಲಯದ ವತಿಯಿಂದ ಹಣ್ಣು-ಹಂಪಲ ವಿತರಿಸುವ ಮೂಲಕ ಆಚರಿಸಲಾಯಿತು.
ಜಿಲ್ಲಾ ಶಸ್ತçಚಿಕಿತ್ಸಕ ತಜ್ಞರಾದ ಡಾ|| ಮಹೇಶ ಬಿರಾದಾರ ರವರು ಗುರುಬಸವ ಪೂಜೆ ನೇರವೆರಿಸಿ ಕಾರ್ಯಕ್ರಮ ಉದ್ಛಾಟಿಸಿ ಮಾತನಾಡುತ್ತಾ, ಪೂಜ್ಯರು ಈ ಭಾಗದಲ್ಲಿ ಶೈಕ್ಷಣಿಕ, ಆಧ್ಯಾತ್ಮಿಕ, ಸಾಮಾಜಿಕ ಸೇವೆ ಮಾಡುತ್ತಿರುವುದು ಸಮಾಜಕ್ಕೆ ಬಹುದೊಡ್ಡ ಕೊಡುಗೆಯಾಗಿದೆ. ತಮ್ಮ ಹುಟ್ಟು ಹಬ್ಬವನ್ನು ಅನಾಥ ಮಕ್ಕಳ ದಿನಾಚರಣೆ ಮಾಡಿಕೊಳ್ಳುತ್ತಿರುವುದು ಸಮಾಜಕ್ಕೆ ಮಾದರಿಯಾಗಿದೆ, ತಿಪ್ಪೆಯಲ್ಲಿ ಬಿದ್ದ ಮಕ್ಕಳನ್ನು ತಂದು ಅವರಿಗೆ ಬದುಕನ್ನು ಕೊಡುತ್ತಿರುವುದು ಶ್ರೇಷ್ಠ ಮಾನವಿಯ ಮೌಲ್ಯವಾದದು. ಅವರರೊಬ್ಬರು ಅನಾಥ ಮಕ್ಕಳ ಕಣ್ಮಣಿ ಮತ್ತು ಮಾತೃ ಹೃದಯಿಗಳಾಗಿದ್ದಾರೆ. ಮುಂದುವರೆದು ಮಾತನಾಡುತ್ತಾ, ಅವರ ಜನ್ಮ ದಿನವನ್ನು ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು-ಹಂಪಲ ವಿತರಿಸುವ ಮೂಲಕ ರೋಗಿಗಳ ಮಾನಸಿಕ ಮತ್ತು ದೈಹಿಕ ಸ್ವಾಸ್ಥತೆ ಮತ್ತು ಅವರಿಗೆ ಪೂಜ್ಯರ ಆಶೀರ್ವಾದವಾಗಿದೆ. ಇವರೊಬ್ಬರು ಮಾನವ ಕುಲದ ಶ್ರೇಷ್ಠ ಸಂತರಾಗಿದ್ದಾರೆ ಎಂದರು.
ಹಿರೇಮಠ ಸಂಸ್ಥಾನದ ಪೂಜ್ಯರಾದ ಮಹಾಲಿಂಗ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಆರ್ಶಿವರ್ಚನ ನೀಡುತ್ತಾ, ಡಾ|| ಬಸವಲಿಂಗ ಪಟ್ಟದೇವರು ಈ ಭಾಗದಲ್ಲಿ ಮಕ್ಕಳಿಗಾಗಿ ಉತ್ತಮ ಸಂಸ್ಕೃತಿ, ಸಂಸ್ಕಾರ ಮತ್ತು ಪ್ರತಿಭೆಯನ್ನು ಅರಳಿಸುವಂತಹ ಹಾಗೂ ಮಕ್ಕಳ ಬದುಕನ್ನು ಕಟ್ಟಿಕೊಳ್ಳುವುದಕ್ಕಾಗಿ ಶಾಲಾ-ಕಾಲೇಜುಗಳನ್ನು ಪ್ರಾರಂಭಿಸಿ ಜ್ಞಾನ ದಾಸೋಹ ಮಾಡುತ್ತಿರುವುದು ಮತ್ತು ಬಸವ ತತ್ವ ಸುಗಂಧವನ್ನು ಮನೆ ಮತ್ತು ಮನಕ್ಕೆ ತಲಪುವಂತೆ ಅವಿರತ ಪ್ರಯತ್ನ ಮಾಡುತ್ತಿರುವುದು ಪ್ರಶಂಸನೀಯವಾದದು. ಇವರು ಬಡವರ, ದಿನ ದಲಿತರ, ಬಡ ಪ್ರತಿಭಾವಂತ ಮಕ್ಕಳ ಮಹಾ ಬೆಳಕು ಆಗಿದ್ದಾರೆ ಎಂದು ನುಡಿದರು.
ಶ್ರಾವಣಮಾಸ ಪ್ರವಚನ ಸಮಿತಿ ಅಧ್ಯಕ್ಷರಾದ ಉಮಾಕಾಂತ ಮೀಸೆ ರವರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಮೇಲೆ ಅತಿಥಿಗಳಾದ ಮಲ್ಲಿಕಾರ್ಜುನ ಹುಡಗೆ, ರಾಮನಗೌಡ ಬಿರಾದಾರ, ಶಾಕೀರ ಅಲಿ, ವಿಶ್ವನಾಥ ಗಜರೆ, ಡಾ|| ಅಭಿಷೇಕ ಉಪಸ್ಥಿತರಿದ್ದರು.
ಗುರುನಾಥ ಬಿರಾದಾರ ಸ್ವಾಗತ ಕೋರಿದರೆ, ಶ್ರೀಕಾಂತ ಬಿರಾದಾರ ನಿರೂಪಿಸಿದರು. ಸಂಗ್ರಾಮಪ್ಪ ಬಿರಾದಾರ ವಂದಿಸಿದರು. ಪ್ರಮುಖರಾದ ದತ್ತಾತ್ರೆ ಕುಲಕರ್ಣಿ, ಅಕ್ಕಮಹಾದೇವಿ ಮಹಿಳಾ ಸಾಂಸ್ಕೃತಿಕ ಸಂಘದ ಪದಾಧಿಕಾರಿಗಳಾದ ಮೀನಾಕ್ಷಿ ಪಾಟೀಲ್, ಸವಿತಾ ಗಂದಿಗುಡೆ, ಜಗದೇವಿ ಕಾಬಾ, ಲಕ್ಷಿö್ಮÃ ಸಿರ್ಸೆ, ವಿಜಯಲಕ್ಷಿö್ಮ ಹುಗ್ಗೆಳ್ಳಿ, ಬ್ರೀಮ್ಸ್ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಹಾಗೂ ಪ್ರಸಾದ ನಿಲಯದ ವಿದ್ಯಾರ್ಥಿಗಳು ಮತ್ತು ಶರಣ-ಶರಣಿಯರು ಭಾಗವಹಿಸಿದ್ದರು.