ಡಾ. ಫ. ಗು. ಹಳಕಟ್ಟಿ ಅವರ ಪರಿಶ್ರಮದ ಫಲ ಇಂದು ನಮ್ಮ ಕೈಗೆ ವಚನ ಸಾಹಿತ್ಯ ಸಿಕ್ಕಿದೆ : SPಶ್ರೀ ಚನ್ನಬಸವಣ್ಣ ಎಸ್.ಎಲ್
ಡಾ. ಫ. ಗು. ಹಳಕಟ್ಟಿ ಅವರ ಪರಿಶ್ರಮದ ಫಲ ಇಂದು ನಮ್ಮ ಕೈಗೆ ವಚನ ಸಾಹಿತ್ಯ ಸಿಕ್ಕಿದೆ. ಫ. ಗು. ಹಳಕಟ್ಟಿ ಅನಘ್ರ್ಯರತ್ನ ಎಂದು ಶ್ರೀ ಚನ್ನಬಸವಣ್ಣ ಎಸ್.ಎಲ್. ನುಡಿದರು.
ವಿದ್ಯಾನಗರದಲ್ಲಿ ಜಿಲ್ಲಾ ಬಸವ ಕೇಂದ್ರ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿರುವ ಡಾ. ಫ. ಗು. ಹಳಕಟ್ಟಿ ಅವರ ದಿನಾಚರಣೆಯನ್ನು ಸಸಿಗೆ ನೀರೆರೆದು – ಉದ್ಘಾಟಿಸಿದ ಉಪನಿರ್ದೇಶಕರು, ಕರ್ನಾಟಕ ಪೊಲೀಸ್ ಅಕಾಡೆಮಿ ಮೈಸೂರನ ಚನ್ನಬಸವಣ್ಣ ಎಸ್.ಎಲ್. ಮುಂದುವರೆದು ಇಂದು ಐಕ್ಯತೆಯ ಕೊರತೆ ಕಾಣುತ್ತಿದೆ. ಅಸಮಾನತೆ ತಾಂಡವವಾಡುತ್ತಿದೆ. ಇದಕ್ಕೆ ಪರಿಹಾರ ಬಸವಣ್ಣನವರ ವಚನಗಳು ಮಾತ್ರ. ಅನ್ಯಾಯ, ಅತ್ಯಾಚಾರ ಶೋಷಣೆಯಿಂದ ಸಮಾಜ ಕಟ್ಟಕ್ಕಾಗುವುದಿಲ್ಲ. ನೈತಿಕತೆ, ವೈಜ್ಞಾನಿಕತೆ, ವೈಚಾರಿಕತೆ ಆಧಾರದ ಮೇಲೆ ಬಸವಣ್ಣ ಸುಮಧರ ಸಮಾಜ ಕಟ್ಟಿದ್ದಾರೆ. ಯನ್ನ ತಪ್ಪು ಅನಂತ ಕೋಟಿ ನಿಮ್ಮ ಸೈರಣೆಗೆ ಲೆಕ್ಕಾವಿಲ್ಲ ಎಂಬ ವಚನ ವ್ಯಕ್ತಿಗೆ ಜಾಗೃತಗೊಳಿಸಬಲ್ಲದು. ನಾವೆಲ್ಲರೂ ಓದಿ ಅವುಗಳನ್ನು ಆಚರಣೆಗೆ ಕಟಿಬದ್ಧರಾಗಬೇಕು. ಬೀಸುವ ಗಾಳಿಯಲು ಶರಣರ ವಚನಗಳಿವೆ. ಅವುಗಳನ್ನು ಅಸ್ವಾಧಿಸಿಕೊಳ್ಳಬೇಕು. ಇಂದು ಜನಜಾಗೃತರಾಗಿ ವ್ಯವಸ್ಥೆ ಸುಧಾರಿಸಲು ಸಹಕರಿಸಬೇಕು. ಪೊಲಿಸ್ ಇಲಾಖೆಗೆ ದೂರುವುದಕ್ಕಿಂತ ಸುಧಾರಿಸುವ ಕ್ರಮ ಅರಿಯಬೇಕು. ನನ್ನ ಅವಧಿಯಲ್ಲಿ ಅಪರಾಧ ಮುಕ್ತ, ನಶಮುಕ್ತ, ಅಪಘಾತ ಮುಕ್ತಕ್ಕಾಗಿ ಸಂಕಲ್ಪಿಸಿದ್ದು ತಕ್ಕಾ ಮಟ್ಟಿಗೆ ಇಲಾಖೆಯ ಸಹಕಾರದಿಂದ ನಾನು ಸ್ವಲ್ಪ ಸಾಧನೆ ಮಾಡಿರುವೆನು. ಇದರಲ್ಲಿ ನನ್ನ ಪಾತ್ರಕ್ಕಿಂತ ಸಿಬ್ಬಂದಿಗಳ ಸಹಕಾರ ಹೇಳತೀರದಾಗಿದೆ.
ಕರ್ತವ್ಯದಲ್ಲಿ ಬದ್ಧತೆ, ಸಾರ್ವಜನಿಕರ ಸಂಕಷ್ಟ ಅರಿತು ಕೆಲಸ ಮಾಡುವ ಪರಿ ನಾವು ಶರಣರಿಂದಲೇ ಕಲಿತ್ತಿದ್ದೇವೆ. ಯಾವುದೇ ಅಧಿಕಾರಿ ಸ್ಥಾವರಕ್ಕೆ ಸೀಮಿತಗೊಳ್ಳದೆ ಜಂಗಮರಾಗಿ ಎಲ್ಲ ಕಡೆ ಕೆಲಸ ಮಾಡುವ ಮನೋಭಾವ ಅಳವಡಿಸಿಕೊಂಡರೆ ಒತ್ತಡದ ಬದುಕಿನಿಂದ ಸಂತೃಪ್ತ ಕಡೆಗೆ ಬರಬಹುದೆಂದು ತಮ್ಮ ಆತ್ಮ ವಿಶ್ವಾಸದ ಮಾತುಗಳನ್ನಾಡಿದರು.
ಮುಖ್ಯ ಅತಿಥಿಗಳಾದ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ಮಹೇಶ ಬಿರಾದಾರ ಅನುಭಾವ ನೀಡುತ್ತ ಘ. ಗು. ಹಳಕಟ್ಟಿ ಬಾರದೆ ಇದ್ದಿದ್ದರೆ ವಚನ ಸಾಹಿತ್ಯ ಹಾಳಾಗುತ್ತಿತ್ತು. ಅಂದು ಜಗುಲಿ ಮೇಲೆ ಪೂಜಿಸಲ್ಪಡುತ್ತಿದ್ದಾ ವಚನ ತಾಡೋಲೆ ತಂದು ಮುದ್ರಣ ಮಾಡಿರುವುದರಿಂದಲೇ ಅವರು ನಮ್ಮ ವಚನ ಗುಮ್ಮಟರಾಗಿದ್ದಾರೆ. ಹಳಕಟ್ಟಿ ಮೇರು ವ್ಯಕ್ತಿತ್ವ ತನ್ನನ್ನೇ ತಾನೆ ಸಮಾಜಕ್ಕೆ ಸಮರ್ಪಿಸಿಕೊಮಡವರಾಗಿದ್ದರು. 35 ವರ್ಷ ಜೀವನದ ದಿನಗಳು ವಚನ ಸಂಸ್ಕøಣೆಗೆ ಮೀಸಲಾಗಿಟ್ಟಿದರು. ತನ್ನ ಮನೆಯನ್ನೇ ಮಾರಿ ಪುಸ್ತಕ ಗ್ರಂಥ ಪ್ರಕಟಿಸಿದ ದಾಸೋಹ ಮೂರ್ತಿಗಳಿವರು ಒಂದು ವಿಶ್ವವಿದ್ಯಾಲಯ ಮಾಡುವ ಕಾರ್ಯ ಒಬ್ಬ ವ್ಯಕ್ತಿ ಮಾಡಿರುವುದು. ಸಾಮಾನ್ಯ ಜನರಿಂದ ವಿವರಿಸಲು ಅಸಾಧ್ಯ ಎಂದರು.
ಬಸವಕೇಂದ್ರ ಅಧ್ಯಕ್ಷರಾದ ಶರಣಪ್ಪ ಮಿಠಾರೆ ಅಧ್ಯಕ್ಷತೆ ವಹಿಸಿದ್ದರು. ಹುಲಸೂರಿನ ಡಾ. ಶಿವಾನಂದ ಮಹಾಸ್ವಾಂಇಗಳು ದಿವ್ಯ ಸಾಣಿತ್ಯ ವಹಿಸಿದ್ದರು. ಪ್ರಸ್ತಾವಿಕ ಕ.ಸಾ.ಪ. ಅಧ್ಯಕ್ಷರಾದ ಶ್ರೀ ಸುರೇಶ ಚನ್ನಶೆಟ್ಟಿ ಮಾತನಾಡಿದರು. ಸೋಮಶೇಖರ ಪಾಟೀಲ, ಕೃಪಾಸಿಂಧು ಪಾಟೀಲ, ರಜಿಯಾ ಬಳಬಟ್ಟಿ, ಸಂಜೀವಕುಮಾರ ಬಿರಾದಾರ ಅವರಿಗೆ ಗೌರವಿಸಿದರು. ಕೊನೆಯಲ್ಲಿ 28 ವಿವಿಧ ಸಂಘ ಸಂಸ್ಥೆ ಪದಾಧಿಕರಿಗಳು, ಮಹಿಳೆಯರು, ಯುವಕರು ಸೇರಿ ಚನ್ನಬಸವಣ್ಣ ಎಸ್.ಎಲ್. ಅವರ ಸೇವೆಗೆ ಸನ್ಮಾನಿಸಿದರು.
ವೈಜಿನಾಥ ಸಜ್ಜನಶೆಟ್ಟಿ, ರೇವಣಪ್ಪ ಮೂಲಗೆ, ವಚನ ಸಂಗೀತ ನಡೆಸಿದರು. ಶಿವಶಂಕರ ಟೋಕರೆ ನಿರೂಪಿಸಿದರೆ, ವಿದ್ಯಾವಂತಿ ಬಲ್ಲೂರ ಸ್ವಾಗತಿಸಿದರೆ, ಶಿವಕುಮಾರ ಸಾಲಿ ವಂದಿಸಿದರು.