ಬೀದರ್

ಟ್ರೂಮಾ ಕೇರ ಸೆಂಟರ್ ಪ್ರಾರಂಭಿಸಬೇಕು ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ಮನವಿ

ಬೀದರ,ಆ 24: ಬೀದರ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಚಿಟಗುಪ್ಪಾ ತಾಲ್ಲೂಕಿನ ಮನ್ನಾಏಖೆಳ್ಳಿ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಟ್ರೂಮಾ ಕೇರ ಸೆಂಟರ್ ಪ್ರಾರಂಭಿಸಬೇಕು.ಮತ್ತು ಮನ್ನಾಏಖೇಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಆಸ್ಪತ್ರೆ ಹೆಚ್ಚಿನ ಚಿಕಿತ್ಸೆಗಾಗಿ ವಿವಿಧ ಸೌಲಭ್ಯಗಳನ್ನು ಒದಗಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ದಿನೇಶ್‍ಗುಂಡುರಾವ ಅವರಿಗೆ ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ಮನವಿ ಸಲ್ಲಿಸಿದರು.
ಗುರುನಾನಕ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ದಿನೇಶ್ ಗುಂಡುರಾವ ಅವರಿಗೆ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರು ಮನವಿ ಸಲ್ಲಿಸಿದರು
ಬೀದರ ದಕ್ಷಿಣ ವಿಧಾನಸಭಾ ವ್ಯಾಪ್ತಿಯಲ್ಲಿ ಬರುವ ಚಿಟಗುಪ್ಪಾ ತಾಲ್ಲುಕಿನ ಮನ್ನಾಏಖೆಳ್ಳಿಗ್ರಾಮದಲ್ಲಿರುವ ಸಮುದಾಯ ಆರೂಗ್ಯ ಕೇಂದ್ರವು ರಾಷ್ಟ್ರೀಯ ಹೆದ್ದಾರಿ 65 ಹೈದ್ರಾಬಾದ್‍ಮುಂಬೈ ಹೆದ್ದಾರಿಗೆ ಹತ್ತಿಕೊಂಡಿರುವುದರಿಂದ ಅನೇಕ ಅಪಘಾತಗಳಾಗುತ್ತಿವೆ ಆದ್ದರಿಂದ ತುರ್ತುಚಿಕಿತ್ಸೆಗಾಗಿ ಯಾವುದೇ ವ್ಯವಸ್ಥೆ ಇಲ್ಲದ ಕಾರಣ ರೋಗಿಗಳು ಪರದಾಡುವಂತಾಗಿದೆ ಆದ್ದರಿಂದ
ಮನ್ನಾಏಖೆಳ್ಳಿ ಗ್ರಾಮದ ಸಮುದಾಯ ಆರೂಗ್ಯ ಕೇಂದ್ರ ಆಸ್ಪತ್ರೆಯಲ್ಲಿ ಟ್ರೂಮಾ ಕೇರ್ ಸೆಂಟರ್‍ಪ್ರಾರಂಭಿಸುವ ಮೂಲಕ ತುರ್ತು ಚಿಕಿತ್ಸೆಯ ರೋಗಿಗಳಿಗೆ ಅನೂಕೂಲ ಮಾಡಿಕೊಡುವಂತೆಮನವಿ ಮಾಡಿದರು. ಮನ್ನಾಏಖೆಳ್ಳಿಗ್ರಾಮದ ಸಮುದಾಯ ಆರೂಗ್ಯ ಕೇಂದ್ರದಲ್ಲಿ ಸಿಟಿ ಸ್ಕ್ಯಾನ್ ಹಾಗೂ ಎಮ್ ಆರ್ ಐ ಹಾಗೂಇ.ಸಿ.ಜಿ ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸುವ ಮೂಲಕ ಉತ್ತಮ ಗುಣಮಟ್ಟದ ಚಿಕಿತ್ಸೆಗೆ ರೋಗಿಗಳಿಗೆ
ಅನೂಕೂಲ ಮಾಡಿಕೊಡುವಂತೆ ಎಂದು ಸಚಿವರಿಗೆ ಒತ್ತಾಯಿಸಿದರು.
ಸಚಿವರಾದ ದಿನೇಶ್ ಗುಂಡುರಾವ ಮಾತನಾಡಿ ಮನ್ನಾಏಖೇಳ್ಳಿ ಟ್ರೂಮಾ ಕೇರ ಸೆಂಟರ್ ಪ್ರಾರಂಭಿಸುವಮತ್ತು ಸೌಲಭ್ಯಗಳನ್ನು ಒದಗಿಸುವ ಭರವಸೆ ನೀಡಿದರು.

Ghantepatrike kannada daily news Paper

Leave a Reply

error: Content is protected !!