ಟಿಇಟಿ: ಉಚಿತ ಕಾರ್ಯಾಗಾರ ನಾಳೆಯಿಂದ
ಬೀದರ್: ವಿನ್ನರ್ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರದ ವತಿಯಿಂದ ನಗರದ ನೆಹರೂ ಕ್ರೀಡಾಂಗಣ ಸಮೀಪದ ಶ್ರೀ ಸಾಯಿ ಆದರ್ಶ ಶಾಲೆಯಲ್ಲಿ ಆಗಸ್ಟ್ 12 ಮತ್ತು 13 ರಂದು ಬೆಳಿಗ್ಗೆ 10 ರಿಂದ ಸಂಜೆ 5 ರ ವರೆಗೆ ಟಿ.ಇ.ಟಿ.ಯ ಶೈಕ್ಷಣಿಕ ಮನೋವಿಜ್ಞಾನ ಕುರಿತು ಉಚಿತ ವಿಶೇಷ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
ಖ್ಯಾತ ಸಂಪನ್ಮೂಲ ವ್ಯಕ್ತಿ ಸುರೇಶ ಮಾರ್ಗದರ್ಶನ ನೀಡಲಿದ್ದಾರೆ. ಜಿಲ್ಲೆಯ ಅಭ್ಯರ್ಥಿಗಳು ಕಾರ್ಯಾಗಾರದ ಲಾಭ ಪಡೆದುಕೊಳ್ಳಬೇಕು ಎಂದು ಕೇಂದ್ರದ ನಿರ್ದೇಶಕಿ ಪೂಜಾ ಹನುಮಂತರಾವ್ ಪಾಟೀಲ ಕೋರಿದ್ದಾರೆ.
ಆಸಕ್ತರು ಹೆಚ್ಚಿನ ಮಾಹಿತಿ ಹಾಗೂ ಹೆಸರು ನೋಂದಣಿಗೆ ಮೊಬೈಲ್ ಸಂಖ್ಯೆ 9538360707 ಅಥವಾ 8970850873 ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.