ಜೆಇಇ ಆಡ್ವಾನ್ಸ್ : ಗುರು ನಾನಕ ಪಿಯು ಕಾಲೇಜ್ ವಿದ್ಯಾರ್ಥಿಗಳ ಸಾಧನೆ-ಸನ್ಮಾನ
ಪ್ರಸಕ್ತ ಸಾಲಿನ ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ ಇಲ್ಲಿನ ನೇಹರು ಸ್ಟೇಡಿಯಂ ಹತ್ತಿರವಿರುವ ಗುರು ನಾನಕ ಸ್ವಾತಂತ್ರ ಪದವಿ ಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳು ಉತ್ತಮ ರ್ಯಾಂಕ್ ಪಡೆಯುವುದರ ಮೂಲಕ ಅರ್ಹತೆ ಪಡೆದು ಗಮನ ಸೆಳೆದಿದ್ದಾರೆ.
ಅಖಿಲ ಭಾರತ ಮಟ್ಟದಲ್ಲಿ ವಿದ್ಯಾರ್ಥಿ ಅರ್ಪಿತ್ ಮೋಹನ್ ಶಿವಗೊಂಡ 634ನೇ ರ್ಯಾಂಕ್ ಹಾಗೂ ಅರ್ಪಿತ್ ಅಜೀತ್ ಸೂರ್ಯವಂಶಿ 1690 ರ್ಯಾಂಕ್ ಪಡೆಯುವ ಮೂಲಕ ಜೆಇಇ ಅಡ್ವಾನ್ಸ್ ನಲ್ಲಿ ರ್ಯಾಂಕ್ ಪಡೆದು ಜಿಲ್ಲೆಗೆ ಹಾಗೂ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಇವರ ಈ ಸಾಧನಗೆ ಕಾಲೇಜಿನಲ್ಲಿ ಗುರು ನಾನಕ ಸಂಸ್ಥೆಯ ಉಪಾಧ್ಯಕ್ಷೆ ಡಾ|| ರೇಷ್ಮಾ ಕೌರ್ ಅವರು ಸನ್ಮಾನಿದರು.
ಈ ಸಂದರ್ಭದಲ್ಲಿ ಕಾಲೇಜಿನ ಶೈಕ್ಷಣಿಕ ಡೀನರಾದ ಜಸ್ಮಿನೀತ್ ಕೌರ್, ಪ್ರಾಂಶುಪಾಲರಾದ ಡಾ|| ವಿಕ್ರಮ ಸಿಂಗ್ ತೋಮರ್ ಹಾಗೂ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.