ಜಿಲ್ಲೆಯ ಐಎಎಸ್ ಆಕಾಂಕ್ಷಿಗಳಿಗೆ ಮಾರ್ಗದರ್ಶನ
ಬೀದರ್: ಐಎಎಸ್ ಆಗ ಬಯಸುವ ಜಿಲ್ಲೆಯ ಆಕಾಂಕ್ಷಿಗಳಿಗೆ ಮಾರ್ಗದರ್ಶನ ನೀಡಲು ಸಿದ್ಧ ಎಂದು ಬೆಂಗಳೂರಿನ ಇನ್‍ಸೈಟ್ಸ್ ಐಎಎಸ್ ಸಂಸ್ಥೆಯ ಸಂಸ್ಥಾಪಕ ವಿನಯಕುಮಾರ ಜಿ.ಬಿ. ಹೇಳಿದರು.
ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘದ ವತಿಯಿಂದ ನಗರದ ಗಾಂಧಿಗಂಜ್‍ನ ಕನಕ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಉನ್ನತ ಗುರಿ ಇಟ್ಟುಕೊಳ್ಳಬೇಕು. ಐಎಎಸ್‍ಗೆ ತಯಾರಿ ನಡೆಸಿದರೆ ಬೇರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಸುಲಭವಾಗಿ ಯಶಸ್ಸು ಗಳಿಸಬಹುದು ಎಂದು ತಿಳಿಸಿದರು.
ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷ ಜೋಳದಾಪಕೆ ಅವರು ವಿನಯಕುಮಾರ ಅವರನ್ನು ಕಂಬಳಿ ಹೊದಿಸಿ, ಬೊಮ್ಮಗೊಂಡೇಶ್ವರ ಭಾವಚಿತ್ರ ನೀಡಿ ಗೌರವಿಸಿದರು.
ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಮೃತರಾವ್ ಚಿಮಕೋಡೆ, ಮುಖಂಡರಾದ ಪಂಡಿತರಾವ್ ಚಿದ್ರಿ, ಎಂ.ಎಸ್. ಕಟಗಿ, ಮಾಳಪ್ಪ ಅಡಸಾರೆ, ಡಾ. ಸಂಜೀವಕುಮಾರ ಅತಿವಾಳೆ, ಸುಭಾಷ್ ನಾಗೂರೆ, ದೇವಪ್ಪ ಚಾಂಬೋಳೆ, ಅಮಿತ್ ಸೋಲಪುರ, ವಿಜಯಕುಮಾರ ಡುಮ್ಮೆ, ಪರಮೇಶ ಆಲಗೂಡ, ಕುಶಾಲರಾವ್ ಯರನಳ್ಳೆ, ಅಯ್ಯಣ್ಣ ಯಾದಗಿರಿ, ದೀಪಕ್ ಚಿದ್ರಿ, ಎಂ.ಪಿ. ವೈಜಿನಾಥ, ತಾನಾಜಿ ತೋರಣೆಕರ್, ವಿಜಯಕುಮಾರ ಬ್ಯಾಲಹಳ್ಳಿ, ಭೀಮಸಿಂಗ್ ಮಲ್ಕಾಪುರ, ನರಸಪ್ಪ ಯಾಕತಪುರ, ಲೋಕೇಶ ಮರ್ಜಾಪುರ, ನಾಗರಾಜ ನಂದಗಾಂವ್, ಬಾಬುರಾವ್ ಸಂಗೋಳಗಿ, ರಮೇಶ ಮರ್ಜಾಪುರ, ಪಂಢರಿ ಜಮಾದಾರ್, ಸಿದ್ಧಗೊಂಡ ಸಿದ್ಧೇಶ್ವರ ಮತ್ತಿತರರು ಇದ್ದರು.