ಜಿಲ್ಲಾ ವಕೀಲರೊಂದಿಗೆ ಆಯೋಜಿಸಲಾದ ಸಂವಾದ ಕಾರ್ಯಕ್ರಮ
ಬೀದರ ಬಾರ್ ಅಸೊಷಿಯೇಷನ್ನಲ್ಲಿ 9 ವರ್ಷಗಳಲ್ಲಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿಯವರ ಸರ್ಕಾರದಿಂದ ಆಗಿರುವ ಅಭಿವೃದ್ದಿ ಕಾರ್ಯಗಳು ಹಾಗೂ ಬೀದರ ಲೋಕಸಭಾ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ದಿ ಕೆಲಸಗಳ ಕುರಿತು ಜಿಲ್ಲಾ ವಕೀಲರೊಂದಿಗೆ ಆಯೋಜಿಸಲಾದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶವು ಈ ಒಂಬತ್ತು ವರ್ಷಗಳಲ್ಲಿ ಐತಿಹಾಸಿಕ ಸಾಧನೆ ಮಾಡಿದೆ, ನಮ್ಮ ಬೀದರ ಲೋಕಸಭಾ ಕ್ಷೇತ್ರದಲ್ಲಿಯೂ ಸಹ ಹಿಂದೆಂದೂ ಕಂಡರಿಯದ ಸಾಧನೆಗಳು, ಅಭಿವೃದ್ದಿಗಳು ಆಗಿವೆ, ನಾನು ಸಚಿವನಾದ ಮೇಲೆ, ಬೀದರ ಜಿಲ್ಲೆಯ ಹೆಸರು ಹಾಗೂ ಜಿಲ್ಲೆಯ ಬಗ್ಗೆ ಗೌರವ ಇಂದು ದೇಶದಾದ್ಯಂತ ಹೆಚ್ಚಾಗುವಂತೆ ಮಾಡಿದ್ದೇನೆ.
ನಮ್ಮ ಎಂಪಿ ಏನು ಮಾಡಿದ್ದಾರೆ ಎನ್ನುವ ಸಹಜ ಪ್ರಶ್ನೆ ಪ್ರತಿಯೊಬ್ಬರಲ್ಲಿ ಮೂಡುತ್ತದೆ, ಅದರಂತೆ ನಾನು 9 ವರ್ಷಗಳಲ್ಲಿ ಮಾಡಿರುವ ಸಾಧನೆಯ ಪುಸ್ತಕದ ರೂಪದಲ್ಲಿ ಹೊರತಂದಿರುವೆ, ಜಗಮೇಚ್ಚಿದ ಮಗನಾಗಿರುವ ಮೋದಿಯವರ ಸಂಪುಟದಲ್ಲಿ ಸಚಿವನಾಗಿದ್ದು, ನನ್ನ ಕಾರ್ಯನಿಷ್ಠೆಗೆ, ಪ್ರಾಮಾಣಿಕತೆಯನ್ನು ಮೆಚ್ಚಿ ಅವರ ಸಂಪುಟದಲ್ಲಿ ಸಚಿವ ಸ್ಥಾನ ಸಿಕ್ಕಿದೆ, ಇದು ಜಿಲ್ಲೆಯ 99% ಜನರಿಗೆ ಖುಷಿ ಕೊಟ್ಟಿತ್ತು, 1 % ಜನರಿಗೆ ನೊವುಂಟು ಮಾಡಿತ್ತು, ಆದರೂ ಚಿಂತೆಯಿಲ್ಲಾ, ಮೋದಿಯವರು ಪ್ರಧಾನಮಂತ್ರಿಯಾದ ಮೇಲೆ, ದೇಶದಲ್ಲಿ ಡಿಜಿಟಲಿಕರಣ, ಆತಂಕವಾದ ನಿರ್ಮೂಲನೆ, ದೇಶದಲ್ಲಿ ಶಾಂತಿ ಮತ್ತು ಯುವಕರಲ್ಲಿ ದೇಶಭಕ್ತಿ ಬಿತ್ತುವ ಕಾರ್ಯ ಹೆಚ್ಚಿನ ಮಟ್ಟದಲ್ಲಿ ಆಗಿದೆ, ಇದರ ಜೊತೆಗೆ ಕೋವಿಡ್ ಲಸಿಕೆಯಿಂದ ದೇಶದ ಜನರಿಗೆ ಎರಡೆರಡು ಲಸಿಕೆಗಳು ನೀಡುವಲ್ಲಿ ನಮ್ಮ ಸರ್ಕಾರ ಯಶಸ್ವಿಯಾಗಿದೆ.
ಇಂತಹ ಹಲವಾರು ಸಾಧನೆಗಳು ನಮ್ಮ ಮೋದಿ ಸರ್ಕಾರದಿಂದ ಅಗಿರುವ ಕಾರಣ ನಮ್ಮ ದೇಶ ವಿಶ್ವಗುರುವಾಗಿದೆ, ನಿನ್ನೆ ನಮ್ಮ ವಿಜ್ಞಾನಿಗಳ ಪರಿಶ್ರಮದ ಫಲವಾಗಿ, ನಮ್ಮ ದೇಶವು ಚಂದ್ರನ ದಕ್ಷೀಣ ಧ್ರುವಕ್ಕೆ ತೆರಳಿರುವುದು, ನಮ್ಮ ದೇಶದ ಅಭಿವೃದ್ದಿಯ ಪತದಲ್ಲಿ ಸಾಗುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.
ನನ್ನಂತ ಒಬ್ಬ ರೈತನ ಮಗ ಇಂದು ದೇಶದಲ್ಲಿ ಕೇಂದ್ರ ಸಚಿವನಾಗಿದ್ದೇನೆ, ಕೆಲವರು ಈ ವಿಷಯವನ್ನು ಅರಗಿಸಿಕೊಳ್ಳಲಾರದೆ, ಗ್ರಾಮ ಪಂಚಾಯತ ಗೆಲ್ಲಲಾರದ ವ್ಯಕ್ತಿ ಇಂದು ನೇರವಾಗಿ ಎಂಪಿ ಆಗಿದ್ದಾರೆ ಎಂದೆಲ್ಲಾ ಟಿಕಿಸುತ್ತಾರೆ, ಹೌದು ನನ್ನ ಹಣೆಬರಹದಲ್ಲಿ ಎಂಪಿಯಾಗುವುದಿತ್ತು, ಹಾಗಾಗಿ ಒಂದಲ್ಲ 2 ಬಾರಿ ಜನರು ಆಶೀರ್ವಾದ ಮಾಡಿ ಗೆಲ್ಲಿಸಿದ್ದಾರೆ, ಅದರಂತೆ ನಾನು ಸಹ ಎಲ್ಲಿಯೂ ನನ್ನ ಅಧಿಕಾರ ದುರೂಪಯೋಗ ಮಾಡಿಕೊಂಡಿಲ್ಲ, ಯಾವ ವ್ಯಕ್ತಿಗೂ ಹಾನಿಮಾಡಿಲ್ಲಾ, ಕೇವಲ ಅಭಿವೃದ್ದಿ ಕೆಲಸಗಳು ಮಾಡುತ್ತಾ ತಾವೆಲ್ಲರೂ ವಹಿಸಿದ ಜವಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದೇನೆ, ಎಲ್ಲಿಯೂ ಓಲೈಕೆ ರಾಜಕಾರಣ, ಜಾತಿ ರಾಜಕಾರಣ ಮಾಡಿಲ್ಲಾ, ಭ್ರಷ್ಟಾಚಾರ ರಹಿತವಾಗಿ ಎಲ್ಲಾ ಜಾತಿ ಮತಗಳ ನಾಯಕನಾಗಿ ಎಲ್ಲರ ಅಭಿವೃದ್ದಿಗಾಗಿ ದುಡಿಯುತ್ತಿರುವೇ, ಇದು ನನಗೆ ಹೆಮ್ಮೆಯಿದೆ.
ದೇಶದ ಯಾವೂದೇ ಮೂಲೆಯಲ್ಲೂ ನನ್ನ ಬಗ್ಗೆ ಕೇಳಿದರೂ, ನನ್ನ ಬಗ್ಗೆ ಯಾರೋಬ್ಬರ ಅಪಚಾರದ ಮಾತನಾಡುವುದಿಲ್ಲ, 2014ಕ್ಕಿಂತ ಮುಂಚೆ ಜಿಲ್ಲೆಯಲ್ಲಿದ್ದದ್ದು ಒಂದು ರಾಷ್ಟ್ರೀಯ ಹೆದ್ದಾರಿ ಇಂದು 12 ಆಗಿವೆ, 13 ಹೊಸ ರೈಲುಗಳು, ಬೀದರ-ಕಲಬುರಗಿ ರೈಲ್ವೆ ಲೈನ್ ಪೂರ್ಣಗೊಳಿಸಿ, ಪ್ರಧಾನಮಂತ್ರಿಗಳಿಂದ ಉದ್ಘಾಟನೆಗೊಳಿಸುವುದಾಗಲಿ, ಬೀದರ-ನಾಂದೇಡ್ ಹೊಸ ರೈಲ್ವೆ ಲೈನ್ ಸಿಪೇಟ ಕಾಲೇಜು ಮಂಜೂರಾತಿ, 20 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ನಾಗರಿಕ ವಿಮಾನಯಾನ ಪ್ರಾರಂಭ ಮಾಡಿದ್ದೆನೆ. ಪಾಸಪೋರ್ಟ ಸೇವಾ ಕೇಂದ್ರ, ರೈತರಿಗೆ ಖಾತೆಗೆ ಸುಮಾರು 600 ಕೋಟಿ ಪರಿಹಾರ ಜಮೆಯಾಗಿಸಿದ್ದೆನೆ.
ಉಜ್ವಲ್ ಯೊಜನೆಯಡಿ ಗ್ಯಾಸ್, ಬಡವರಿಗೆ ಉಚಿತ ಅಕ್ಕಿ, ಮುದ್ರಾ ಅಡಿ ವ್ಯಾಪಾರಸ್ಥರಿಗೆ ಸಾಲ, ಸ್ವನಿಧಿಯಡಿ ಬಿದಿ ವ್ಯಾಪಾರಿಗಳಿಗೆ ಸಾಲ, ಬೀದರ ನಗರದಲ್ಲಿ 175ಕೋಟಿ ಅನುದಾನದಲ್ಲಿ ಅಮೃತ ಯೋಜನೆಯಡಿ ಯು.ಜಿ.ಡಿ. ಕಾಮಗಾರಿ, ಸಿ.ಎನ್.ಜಿ ಯೋಜನೆಯಡಿ ಬೀದರ ನಗರದಲ್ಲಿ ಮನೆ ಮನೆಗೆ ಪೈಪುಗಳ ಮೂಲಕ ಎಲ್.ಪಿ.ಜಿ ವಿತರಣೆ ಕಾಮಗಾರಿ ನಡೆಯುತ್ತಿದೆ. ಕೇಂದ್ರ ಸರ್ಕಾರದ ಪ್ರತಿ ಯೋಜನೆಯೂ ನಮ್ಮ ಜಿಲ್ಲೆಯಲ್ಲಿ ಬರುವಂತೆ ಮಾಡಿದ್ದೇನೆ.
ನನ್ನ ಅಭಿವೃದ್ದಿ ಕೆಲಸಗಳು ಮತ್ತು ನನ್ನ ವೈಯ್ಯಕ್ತಿಕ ವರ್ಚಸನ್ನು ತಡೆಯಲಾರದೆ, ಸುಳ್ಳು ಆರೋಪಗಳು ಮಾಡುತ್ತಿದ್ದಾರೆ, ಇವೆಲ್ಲವುಗಳನ್ನು ತಾವೆಲ್ಲರೂ ಅವಲೋಕನ ಮಾಡಬೇಕಾಗಿದೆ. ಇಲ್ಲವಾದದಲ್ಲಿ ಒರಿಜಿನಲ್ ವಸ್ತು ಕೈ ತಪ್ಪಿ, ಡುಪ್ಲಿಕೇಟ್ ವಸ್ತು ಸಿಗಬಹುದು, ಆದ್ದರಿಂದ ತಮ್ಮೇಲ್ಲರಿಗೆ ಆಯ್ಕೆ ಮಾಡುವ ಸಮಯ ಬಂದಾಗ, ತಾವೆಲ್ಲರೂ ಸ್ವಲ್ಪ ಸಮಯ ತೆಗೆದುಕೊಂಡು, ದೇಶದ ಸುರಕ್ಷತೆ, ಅಭಿವೃದ್ದಿ, ನಾನು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ನನ್ನ ಪುಸ್ತಕವನ್ನು ಓದಿ ನನ್ನನ್ನು ಹರಸಬೆಕೆಂದು ಎಲ್ಲರಲ್ಲಿ ಕೋರಿದರು.
ಕೆಲ ರಾಜಕೀಯ ಮಿತ್ರರು ನನ್ನ ಅಭಿವೃದ್ದಿಯಲ್ಲಿ ರಾಜಕೀಯ ಮಾಡಿ, ಇವೇಲ್ಲ ತನ್ನಿಂದ ತಾನೆ ಆಗಿವೆ ಎಂದು, ಆದರೆ ನಾನು ಬರುವ ಮುಂಚೆ ಇವೆಲ್ಲಾ ಯಾಕೆ ಆಗಿಲ್ಲಾ, ನಾನು ಬಂದ ಮೇಲೆ ಯಾಕೆ ಇವೆಲ್ಲಾ ಆಗಿವೆ ಎಂದು ವಿರೋಧಿಗಳಿಗೆ ಪ್ರಶ್ನಿಸಿದರು.
ಸರ್ಕಾರ ಮತ್ತು ಅಧಿಕಾರಿಗಳ ಮಧ್ಯೆ ಸೇತುವೆಯಾಗಿ ಕೆಲಸ ಮಾಡಿದಾಗ, ಜಿಲ್ಲೆಗೆ ಅಭಿವೃದ್ದಿ ಕೆಲಸಗಳು ಆಗುತ್ತವೆ, ಆ ಕೆಲಸ ನಾನು ಮಾಡಿರುವೆ, ಇದರಿಂದಾಗಿ ನನ್ನ ಬೀದರ ಲೋಕಸಭಾ ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸಗಳು ಆಗಿವೆ.
ದೇಶಕ್ಕೆ ಮೋದಿಜಿಯವರ ಅವಶ್ಯಕತೆ ಎಷ್ಟಿದೇಯೋ, ಅವರೊಂದಿಗೆ ಜಿಲ್ಲೆಯ ಅಭಿವೃದ್ದಿಗೆ ನನ್ನನ್ನು ತಾವೇಲ್ಲರೂ ಆಶೀರ್ವಾದಿಸಿ ಮತ್ತೆ 3ನೇ ಬಾರಿಗೆ ಆಯ್ಕೆ ಮಾಡಿ ಕಳುಹಿಸುವುದು ಅಷ್ಟೆ ಅವಶ್ಯಕವಾಗಿದೆ, ತಾವೇಲ್ಲರೂ ನನ್ನನ್ನು ಮುಂದಿನ ಬಾರಿ ಮತ್ತೆ ಆಶೀರ್ವಾದಿಸಬೆಕೆಂದು ಎಲ್ಲರಲ್ಲಿ ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ಬಾರ್ ಅಸೊಷಿಯೇಷನ್ ಅಧ್ಯಕ್ಷರಾದ ಮಹೇಶ ಪಾಟೀಲ್, ಉಪಾಧ್ಯಕ್ಷರಾದ ಶ್ರೀಮತಿ. ಹೇಮಾ, ಹಿರಿಯ ವಕೀಲರಾದ ಅಶೋಕ ಮಾಣೂರೆ, ಚಂದ್ರಕಾಂತ ನಾಸಿ, ಧೂಳಪ್ಪ ಬಿರಾದರ, ಶರಣಬಸಪ್ಪ ಪಾಟೀಲ್, ರವಿ ವಾಡೆ, ಬಿ.ರಮೇಶ, ಬಿ.ಎಸ್. ಪಾಟೀಲ್, ಶರಣಪ್ಪ ದೇಶಮುಖ, ಗುರುರಾಜ ಚಿಮಕೋಡೆ, ಪದ್ಮಜಾ ಕುಲಕರ್ಣಿ, ಯಾದವರಾವ ಕೋಳೆಕರ್, ನಾಗೇಂದ್ರ ಬಲ್ಲೂರ, ಇನ್ನಿತರರು ಉಪಸ್ಥಿತರಿದ್ದರು.