ಜಯ ಕರ್ನಾಟಕ ಮತ್ತು ಕ್ರಿಶ್ಚಿಯನ್ ಸಮುದಾಯದ ಹಿರಿಯ ನಾಗರಿಕರ ಸಂಘಟನೆ ವತಿಯಿಂದ ಸ್ವಾತಂತ್ರ ದಿನಾಚರಣೆ
ಬೀದರ: ನಮ್ಮ ಹಿರಿಯರ ತ್ಯಾಗ ಬಲಿದಾನದಿಂದ ನಮಗೆ ಸ್ವಾತಂತ್ರ ಸಿಕ್ಕಿದೆ, ಸಾವಿರಾರು ಸ್ವಾತಂತ್ರ ಹೋರಾಟಗಾರರು ತಮ್ಮ ಪ್ರಾಣವನ್ನು ದೇಶಕ್ಕಾಗಿ ಬಲಿದಾನ ಮಾಡಿದ್ದಾರೆ. ಯಾವುದೇ ಧರ್ಮ ಜಾತಿ, ಬಡವ ಶ್ರೀಮಂತ, ಹೆಣ್ಣು ಗಂಡು, ಹಿರಿಯರು ಕಿರಿಯರು ಎನ್ನದೇ ಮನೆ ಮಠ ವ್ಯವಹಾರ ಕಸುಬು ಬಿಟ್ಟು ಎಲ್ಲರೂ ಒಗ್ಗಟ್ಟಾಗಿ ಸುಮಾರು ನೂರು ವರ್ಷಗಳ ನಿರಂತರ ಹೋರಾಟದಿಂದ ನಮ್ಮ ದೇಶ ಬ್ರಿಟಿಷರಿಂದ ಬಿಡುಗಡೆಗೊಂಡಿತ್ತು.
ಆದರೆ ಇಂದು ರಾಜಕೀಯ ಹಿತಾಸಕ್ತಿಗಾಗಿ ಮತ ಓಟಿಗಾಗಿ ಧರ್ಮ, ಜಾತಿ,ಭಾಷೆ, ಪ್ರದೇಶ, ಆಹಾರ ಪದ್ಧತಿ, ಶ್ರೀಮಂತ ಬಡವ, ದೇವರ ಹೆಸರ ಮೇಲೆ ಭೇದ ಭಾವ ಹುಟ್ಟಿಸಿ, ಸಮಾಜದಲ್ಲಿ ವಿಷ ಬೀಜ ಬಿತ್ತಿ, ನಮ್ಮ ದೇಶದ ಒಗ್ಗುಟ ಹಾಳು ಮಾಡುತ್ತಿದ್ದಾರೆ. ಒಂದು ಪಕ್ಷದವರಿಗೆ ಮತ್ತೊಂದು ಪಕ್ಷದವರು ವಿರೋಧ ಮಾಡಿದ್ದರೆ ದೇಶ ವಿರೋಧ ಪಟ್ಟ ಕಟ್ಟುತ್ತಿದ್ದಾರೆ, ಒಂದು ಧರ್ಮದ ವಿರುದ್ಧ ಮತ್ತೊಂದು ಧರ್ಮ ಮಾತಾಡಿದ್ದರೆ ದೇಶ ವಿರೋಧಿ, ಒಂದು ಸಂಘಟನೆ ವಿರುದ್ಧ ಮತ್ತೊಂದು ಸಂಘಟನೆ ವಿರೋಧ ಮಾತಾಡಿದ್ದರೆ ದೇಶ ವಿರೋಧಿ ಪಟ್ಟ ಕಟ್ಟುತ್ತಿದ್ದಾರೆ. ಇದೆಲ್ಲ ಕೇವಲ ರಾಜಕೀಯಕ್ಕಾಗಿ ಚುನಾವಣೆಯಲ್ಲಿ ಗೆದ್ದು ಬರುವ ಸಲುವಾಗಿ ಜನರ ಮನಸ್ಸುಗಳು ಒಡೆಯುತ್ತಿದ್ದಾರೆ, ದೇಶ ಪ್ರೇಮದ ವ್ಯಾಖ್ಯಾನ ಬದಲಿಸಿದ್ದಾರೆ.
ಜನಸಾಮಾನ್ಯರೆ ಇನ್ಮುಂದೆ ಇಂತಹ ರಾಜಕೀಯ ಪಕ್ಷಗಳ, ರಾಜಕೀಯ ನಾಯಕರ ಮಾತಿಗೆ ಬೆಲೆ ಕೊಡದೆ ಎಲ್ಲಾ ಧರ್ಮ, ಜಾತಿ, ಭಾಷೆ, ಗಡಿ ಪ್ರದೇಶ ಮೀರಿ ನಾವೆಲ್ಲರೂ ಭಾರತೀಯರು ಒಂದು ಎಂದು ದೇಶಪ್ರೇಮ ಬೆಳೆಸಿಕೊಂಡು ದೇಶದ ಅಭಿವೃದ್ಧಿಗೆ ದುಡಿಯಬೇಕಾಗಿದೆ. ಹಿರಿಯರು ನಮಗೆ ಕೊಟ್ಟ ಸ್ವಾತಂತ್ರ ಉಪಯೋಗಿಸಿಕೊಂಡು ನಮ್ಮ ಹಸನಾಗಿಸಿಕೊಂಡು ನಮ್ಮ ಮುಂದಿನ ಪೀಳಿಗೆಗಾಗಿ ದೇಶ ಕಟ್ಟಬೇಕಾಗಿದೆ. ನಮ್ಮ ಧರ್ಮ,ನಮ್ಮ ದೇವರು ,ನಮ್ಮ ಆಚರಣೆ ನಮ್ಮ ವೈಯಕ್ತಿಕವಾಗಿ, ನಮಗೆ ಈ ಸ್ವಾತಂತ್ರ ನಮ್ಮ ಪ್ರಜಾಪ್ರಭುತ್ವ ನಮ್ಮ ಸಂವಿಧಾನ ಕೊಟ್ಟಿದೆ, ಮನೆಯಿಂದ ಹೊರಗೆ ಬಂದಾಗ ನಮ್ಮ ದೇಶವೇ ನಮ್ಮ ಧರ್ಮ, ನಮ್ಮ ಸಂವಿಧಾನವೇ ಧರ್ಮಗ್ರಂಥ ಎಂದು ತಿಳಿದು ಭಾರತೀಯರು ಎಲ್ಲರೂ ಒಂದು ಎಂದು ಒಟ್ಟಾಗಿ ಬಾಳಬೇಕು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘಟನೆ ಅಧ್ಯಕ್ಷ ಅರ್ಜುನ ಭೀಮಪ್ಪ , ಧ್ವಜಾರೋಹಣ ಶಶಿ ಹೊಸಳ್ಳಿ ನಗರ ಸಭೆ ಸದಸ್ಯರು, ಪೂಜೆ ಶ್ರೀಕಾಂತ ಸ್ವಾಮಿ, ಮುಖ್ಯ ಅತಿಥಿಗಳಾಗಿ ಮೈಕೇಲ್ ಜೋಶೆಫ್, ಮನಪ್ರಿತಸಿಂಗ, ಸೈಮನ್ ಜಾಸ್ವಾ ನಗರಸಭೆ ಸದಸ್ಯರು, ಪ್ರಾಸ್ತಾವಿಕ ಆನಂದ ಘಂಟೆ, ಪ್ರಾರ್ಥನೆ ಶಾದ್ರಕ ಪಾಸ್ಟರ್ ಮತ್ತು ಸಂಚಲನ ಪ್ರಮೋದ ವಹಿಸಿದರು, ವಂದನಾರ್ಪಣೆ ಜಾಯ್ ಘಂಟೆ ಮಾಡಿದರು. ಸಭೆಯಲ್ಲಿ ಅನೇಕ ಹಿರಿಯರು ಯುವಕರು ಭಾಗವಹಿಸಿದರು. ಪ್ರಭು ಪಾಟಿಲ ಗಾದಗಿ, ಶಿರೋಮಣಿ ಮಾಳೆಗಾಂವ್, ಅರವಿಂದ ಕಾರಭಾರಿ, ರವಿ ಪಾಟಿಲ, ಶಿರೋಮಣಿ ಮಂಗಳಪೆಟ, ಸೀರಿಸ್ ಹಿರಿಯ ನಾಯಕರು, ರೋಶನ್ ವರ್ಮಾ, ಕೈಲಾಶ್ ಕಾಜಿ , ಹಲವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮ ವಿಜ್ರಂಭಣೆಯಿAದ ಜರುಗಿತ್ತು.