ಬೀದರ್

ಜನ್ಮದಿನದ ನಿಮಿತ್ಯವಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಸನ್ಮಾನ

ಸಿದ್ಧಾರ್ಥ ಸಂಯುಕ್ತ ಪದವಿ ಪೂರ್ವ ಕಾಲೇಜು ಜನವಾಡ ರಸ್ತೆ, ಬೀದರದಲ್ಲಿ ಡಾ|| ಮಲ್ಲಿಕಾರ್ಜುನಖರ್ಗೆಜಿಯವರ ೮೨ನೇ ಜನ್ಮ ದಿನಾಚರಣೆ ಅಂಗವಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇಂದು ದಿನಾಂಕ೨೩.೦೭.೨೦೨೪ರಂದು ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಅಗ್ರಶ್ರೇಣಿ ಪಡೆದ ಸುಮಾರು ೩೧ ವಿದ್ಯಾರ್ಥಿಗಳು ಮತ್ತು ಅವರ ಪಾಲಕರಿಗೆ ಸನ್ಮಾನಿಸಲಾಯಿತು. ಹಾಗೂ ೨೦೨೪ನೇ ಸಾಲಿನಲ್ಲಿ ವಿಷಯವಾರು ಫಲಿತಾಂಶದಲ್ಲಿ ಅಧೀಕ ಫಲಿತಾಂಶ ನೀಡಿರುವ ಶ್ರೀ ನಾಗಪ್ಪಾ ವಾಣಿಜ್ಯಶಾಸ್ತç ಉಪನ್ಯಾಸಕರು ಮತ್ತು ಪ್ರೌಢ ಶಾಲಾ ವಿಭಾಗದ ಶ್ರೀಮತಿ ಆಸೀಯಾ ಫಿರದೋಸ್ ಸಹ ಶಿಕ್ಷಕಿ ಇವರಿಗೆ ಈ ವರ್ಷದ ಅತ್ಯುತ್ತಮ ಶಿಕ್ಷಕರೆಂದು ಪರಿಗಣಿಸಿ ಸನ್ಮಾನಿಸಲಾಯಿತು. ಈ ಸಮಾರಂಭದ ಜೊತೆಯಲ್ಲಿ ನೂತನವಾಗಿ ಗಣಕಯಂತ್ರದ ಕೊಣೆಯನ್ನು ಉದ್ಘಾಟಿಸಲಾಯಿತು.ಈ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಮಿಸಿದ ಶ್ರೀ ಚಂದ್ರಕಾAತ ಎಂ. ಶಾಹಾಬಾದಕರಉಪನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಬೀದರ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪ್ರತಿಯೊಬ್ಬ ವಿದ್ಯಾರ್ಥಿಯು ಪರಿಶ್ರಮ ಪಡೆಯುವುದರಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು ಹಾಗೂ ಡಾ|| ಮಲ್ಲಿಕಾರ್ಜುನ ಖರ್ಗೆಜಿಯವರ ಜೀವನ ಹಾಗೂ ಏಳಿಗೆಯ ಬಗ್ಗೆ ಪರಿಪೂರ್ಣವಾದ ಮಾಹಿತಿಯನ್ನು ಒದಗಿಸಿಕೊಟ್ಟರು. ಪ್ರತಿಯೊಬ್ಬರು ರಾಷ್ಟçದ ಏಳಿಗೆಗಾಗಿ ಶ್ರಮಿಸಬೇಕೆಂದು ಹೀತವಚನ ನೀಡಿದರು. ಅದೇ ತರಹವಾಗಿ ಮುಖ್ಯ ಅತಿಥಿಯಾಗಿ ಆಗಮಿಸಿರುವ ಡಾ.ಟಿ.ಆರ್. ದೊಡ್ಡೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲಾ ಮತ್ತು ಸಾಕ್ಷರತಾ ಇಲಾಖೆ ಬೀದರ ಇವರು ವಿದ್ಯಾರ್ಥಿಗಳ ಏಳಿಗೆಗೆ ಶಿಕ್ಷಕರ ಮತ್ತು ಪಾಲಕರ ಪಾತ್ರ ಮಹತ್ವದಾಗಿರುತ್ತದೆ ಎಂದು ಹೇಳಿದರಲ್ಲದೇ, ಡಾ|| ಮಲ್ಲಿಕಾರ್ಜುನ್ ಖರ್ಗೆಜಿ ಅವರ ಸಾಧನೆಯಂತೆಯೇ ಪ್ರತಿಯೊಬ್ಬರು ಉನ್ನತ ಮಟ್ಟಕ್ಕೆ ಹೋಗಲು ಇಗೀನಿಂದಲೇ ಪ್ರಯತ್ನಿಸಬೇಕೆಂದು ತಿಳಿಸಿದರು. ಅತಿಥಿಯಾಗಿ ಆಗಮಿಸಿರುವ ಶ್ರೀ ಶ್ರೀನಿವಾಸ ರಡ್ಡಿ ಪ್ರಾಧ್ಯಾಪಕರು ಸರ್ಕಾರಿ ಪದವಿ ಮಹಾವಿದ್ಯಾಲಯ (ಕನ್ಯಾ) ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಇಂದಿನ ವಿದ್ಯಾರ್ಥಿಗಳೇ ಮುಂದಿನ ಭಾವಿ ಪ್ರಜೆಗಳೆಂದು ಸಾರಿದರಲ್ಲದೇ, ಪ್ರತಿಯೊಬ್ಬರು ಉನ್ನತ ಸ್ಥಾನಕ್ಕೆ ಹೋಗಬೇಕಾದರೆ, ಹಗಲಿರುಳು ಓದುವುದರಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು. ಈ ಸಮಾರಂಭದ ಘನ ಅಧ್ಯಕ್ಷತೆಯನ್ನು ಡಾ. ಎಸ್. ಪ್ರಭು ಪ್ರಾಂಶುಪಾಲರು ವಹಿಸಿಕೊಂಡು ಅಧ್ಯಕ್ಷಿಯ ನುಡಿಯನ್ನು ನುಡಿದರು. ಈ ಕಾರ್ಯಕ್ರಮಕ್ಕೆ ಪ್ರಾಥನ ಗೀತೆಯೊಂದಿಗೆ ಆರಂಭವಾಗಿದ್ದು, ಪ್ರಾರ್ಥನೆಯನ್ನು ವಂದನಾ ಮತ್ತು ಸಂಗಡಿಗರು ನಡೆಸಿದರೇ, ಸ್ವಾಗತ ಭಾಷಣ ಶ್ರೀ ಶಿವಕುಮಾರ ಉಪನ್ಯಾಸಕರು ಸ್ವಾಗತಿಸಿದರು. ಶ್ರೀ ಏಕನಾಥ ಸುಣಗಾರ ಉಪನ್ಯಾಸಕರು ವಂದಿಸಿದರು. ಈ ಸಮಾರಂಭದ ನಿರೂಪಣೆಯನ್ನು ಶ್ರೀಮತಿ ಸುಲೋಚನಾ ಬಿರಾದರ ಮತ್ತು ಶ್ರೀ ವಿಜಯಕುಮಾರ ಇವರು ನಿರೂಪಿಸಿದರು. ಈ ಸಮಾರಂಭದಲ್ಲಿ ಪ್ರೌಢ ಶಾಲಾ ಮತ್ತು ಪದವಿ ಪೂರ್ವ ಎಲ್ಲಾ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ರಾಷ್ಟçಗೀತೆಯೊಂದಿಗೆ ಸಮಾರಂಭವನ್ನು ಮುಕ್ತಾಯಗೊಳಿಸಲಾಯಿತು.

Ghantepatrike kannada daily news Paper

Leave a Reply

error: Content is protected !!