ಬೀದರ್

ಜನರ ಸಮಸ್ಯೆ ಸ್ಪಂಧಿಸಿದ ಬೀದರ ಸಂಸದ ಸಾಗರ ಖಂಡ್ರೆ

ಬೀದರ ಶುಕ್ರವಾರ ಲೋಕಸಭಾ ಸದಸ್ಯರ ಜನಸ್ಪಂಧನಾ ಕಾರ್ಯಲಯ ಅಕ್ಕಮಹಾದೇವಿ ಕಾಲೇಜು ಬೀದರ ನಲ್ಲಿ ಸಂಜೆ ಔರಾದ (ಬಿ) ಹುಮನಾಬಾದ, ಭಾಲ್ಕಿ, ಬೀದರ ಉತ್ತರ, ದಕ್ಷಿಣ, ಕಮಲನಗರ, ಹುಲಸೂರು ಬಸವಕಲ್ಯಾಣದಿಂದ ಬಂದ ಜನರ ಸಮಸ್ಯೆಗಳ ಆಲಿಸಿ, ಅರ್ಜಿಗಳನ್ನು ಸ್ವೀಕರಿಸಿ, ಸ್ಥಳದಲ್ಲೆ ಸಂಬAಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಪರಿಹಾರ ಮಾಡಿಕೊಡುವ ಕೆಲಸವನ್ನು ಮಾಡಿದರು. ಬಡ ಮಕ್ಕಳ ಶಿಕ್ಷಣಕ್ಕೆ ಯುವಜನತೆಯ ಸ್ವಯಂ ಉದ್ಯೋಗಕ್ಕೆ , ವಿಕಲಚೇತನರ ಸೌಲಭ್ಯಗಳ, ವಸತಿ ಸೌಲಭ್ಯಗಳ, ಮಹಿಳಾ ಸ್ವಯಂ ಉದ್ಯೋಗಕ್ಕಾಗಿ ಸಂಘಸAಸ್ಥೆಗಳಿಗೆ ಸಹಾಯಧನ ಕುರಿತು, ಎಲ್ ಐ ಸಿ ಗೆ ಸಂಬAಧಿಸಿದAತೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಸಂಬAಧಿಸಿದ ಸಮಸ್ಯೆಗಳು ಆಲಿಸಿದರು. ಸಾಹಿತಿಗಳಿಗೆ ಕೇಂದ್ರ ಸರ್ಕಾರದಿಂದ ನೆರವು, ಸಾಹಿತಿಗಳು ಬರೆದಿರುವ ಕೃತಿಗಳು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿAದ ಖರಿದಿಸುವ ಬಗ್ಗೆ, ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ಸ್ವಂತ ಖರ್ಚಿನಲ್ಲಿ ನಡೆಸಿಕೊಂಡು ಬರುತ್ತಿರುವ ಜಿಲ್ಲೆಯ ನೊಂದಾಯಿತ ಸಂಘ ಸಂಸ್ಥೆಗಳಿಗೆ ಕೇಂದ್ರ ಸರ್ಕಾರದ ಗಮನಕ್ಕೆ ತಂದು ಸಹಾಯ ಧನವನ್ನು ಒದಗಿಸಿಕೊಡುವ ಕೆಲಸವನ್ನು ಮಾಡಬೇಕೆಂದು ಸಾಹಿತಿ ಡಾ. ಸುಬ್ಬಣ್ಣ ಕರಕನಳ್ಳಿ ವಿನಂತಿ ಮಾಡಿಕೊಂಡರು ಇದೆ ಸಮಯದಲ್ಲಿ ಸಂಘರ್ಷದ ಬೆಳಕು ಕೃತಿ ನೀಡಿ ಸಂಸದರಿಗೆ ಗೌರಿಸಿದರು. ಮಲ್ಲಿಕಾರ್ಜುನ ಮೊಳಕೆರೆ, ಬಸವರಾಜ ಜಡಗೆ, ಮೊಹನ ಡಾಂಗೆ, ಗೌತಮ ಭೊಸ್ಲೆ ಮುಂತಾದವರಿದ್ದರು.

Ghantepatrike kannada daily news Paper

Leave a Reply

error: Content is protected !!